ಮುಂಬೈ: ಹೂಡಿಕೆಯ ಉದ್ದೇಶಕ್ಕಾಗಿ ಚಿನ್ನವನ್ನು ಖರೀದಿಸು ವವರ ಪ್ರಮಾಣವು ಕಳೆದ ವರ್ಷ ಚಿನ್ನದ ಒಟ್ಟು ಖರೀದಿಯ ಶೇ 40ರ ಮಟ್ಟಕ್ಕೆ ಏರಿಕೆಯಾಗಿದೆ. ಇದು ಈಚಿನ ವರ್ಷಗಳಲ್ಲಿ ಕಂಡುಬಂದಿರುವ ಅತಿದೊಡ್ಡ ಪ್ರಮಾಣ ಎಂದು ಕೇರ್ಎಜ್ ರೇಟಿಂಗ್ಸ್ ವರದಿ ಸೋಮವಾರ ಹೇಳಿದೆ.

37.5 ಟನ್ ಚಿನ್ನಕ್ಕಾಗುವಷ್ಟು ಹಣ ಕಳೆದ ವರ್ಷ ಚಿನ್ನದ ಇಟಿಎಫ್ ಗಳಲ್ಲಿ ಹೂಡಿಕೆಯಾಗಿದೆ. ಇದು ದಶಕದ ಗರಿಷ್ಠ ಮಟ್ಟ. ಆಭರಣಗಳ ಖರೀದಿಗೆ ಹೋಲಿಸಿದರೆ, ಚಿನ್ನವನ್ನು ಹೂಡಿಕೆಯ ಉದ್ದೇಶಕ್ಕಾಗಿ ಖರೀದಿಸುವವರ ಪ್ರಮಾಣ ದೇಶದಲ್ಲಿ ಹೆಚ್ಚಳವಾಗಿದೆ ಎಂದು ತಿಳಿಸಿದೆ.

ಹೂಡಿಕೆಯಲ್ಲಿ ವೈವಿಧ್ಯ ಸಾಧಿಸುವ ಉದ್ದೇಶ, ಕೇಂದ್ರೀಯ ಬ್ಯಾಂಕ್ಗಳಿಂದ ಹೆಚ್ಚಿದ ಚಿನ್ನದ ಖರೀದಿ ಕಾರಣದಿಂದಾಗಿ ದೇಶದ ಒಟ್ಟು ಚಿನ್ನದ ಖರೀದಿಯಲ್ಲಿ ಹೂಡಿಕೆಯ ಉದ್ದೇಶಕ್ಕೆ ಚಿನ್ನವನ್ನು ಖರೀದಿಸುವವರ ಪ್ರಮಾಣ ಈ ವರ್ಷದಲ್ಲಿಯೂ ಶೇ 35ರಿಂದ ಶೇ 40ರ ಮಟ್ಟದಲ್ಲಿ ಇರುವ ನಿರೀಕ್ಷೆ ಇದೆ ಎಂದು ಸೋಮವಾರ ತಿಳಿಸಿದೆ.

ಜಾಗತಿಕ ಮಟ್ಟದಲ್ಲಿ ಉಂಟಾಗಿ ರುವ ರಾಜಕೀಯ ಅನಿಶ್ಚಿತತೆ, ಚಿನ್ನದ ದರದಲ್ಲಿನ ಏರಿಕೆಯಿಂದ ಹೂಡಿಕೆ ದಾರರು ಚಿನ್ನಾಭರಣಗಳ ಖರೀದಿಸುವ ಬದಲು ಚಿನ್ನದಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದಾರೆ ಎಂದು ಕೇರ್ಎಜ್ ರೇಟಿಂಗ್ಸ್ ನಿರ್ದೇಶಕ ಅಖಿಲ್ ಗೋಯಲ್ ಹೇಳಿದ್ದಾರೆ.

ಜನರ ಚಿನ್ನದ ಖರೀದಿ ವಿಧಾನದಲ್ಲಿ ಬದಲಾವಣೆ ಆಗಿದೆ. ಕಳೆದ ಕ್ಯಾಲೆಂಡರ್ ವರ್ಷದಲ್ಲಿ ದೇಶದ ಒಟ್ಟು ಚಿನ್ನದ ಖರೀದಿ ಯಲ್ಲಿ ಚಿನ್ನಾಭರಣಗಳ ಖರೀದಿ ಶೇ 60ಕ್ಕಿಂತ ಕಡಿಮೆ ಆಗಿದೆ. ಇದು ದೀರ್ಘಾವಧಿಯಲ್ಲಿ ಸರಾಸರಿ ಶೇ 70ರಷ್ಟಿತ್ತು ಎಂದು ತಿಳಿಸಿದೆ.

ದೇಶದಲ್ಲಿ ಚಿನ್ನಾಭರಣಗಳ ಬೇಡಿಕೆ ಕಳೆದ ವರ್ಷ ಹಣಕಾಸಿನ ಮೌಲ್ಯದ ಲೆಕ್ಕದಲ್ಲಿ ಶೇ 10ರಷ್ಟು ಏರಿಕೆಯಾಗಿ, ₹4.8 ಲಕ್ಷ ಕೋಟಿಯಷ್ಟಾಗಿದೆ. ತೂಕದ ಲೆಕ್ಕದಲ್ಲಿ ಶೇ 15ರಷ್ಟು ಇಳಿದಿದೆ ಎಂದಿದೆ.

ಬೆಳ್ಳಿ ದರ ₹3,500 ಏರಿಕೆ

ನವದೆಹಲಿ: ಆಭರಣ ತಯಾರಕರು ಮತ್ತು ಮಾರಾಟಗಾರರಿಂದ ಚಿನ್ನ ಮತ್ತು ಬೆಳ್ಳಿ ಖರೀದಿ ಹೆಚ್ಚಳವಾಗಿದೆ. ಹೀಗಾಗಿ, ಈ ಲೋಹಗಳ ದರದಲ್ಲಿ ಏರಿಕೆಯಾಗಿದೆ.

ಬೆಳ್ಳಿ ದರವು ಕೆ.ಜಿಗೆ ₹3,500ರಷ್ಟು ಏರಿಕೆಯಾಗಿ, ₹2.50 ಲಕ್ಷದಂತೆ ಮಾರಾಟವಾಗಿದೆ. 10 ಗ್ರಾಂ ಚಿನ್ನದ (ಶೇ 99.9ರಷ್ಟು ಪರಿಶುದ್ಧತೆ) ದರವು ₹200ರಷ್ಟು ಏರಿಕೆಯಾಗಿ, ₹1,56,100ಕ್ಕೆ ತಲುಪಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.