ನವದೆಹಲಿ: ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಕಾರಣದಿಂದಾಗಿ ಜಾಗತಿಕ ಮಟ್ಟದಲ್ಲಿ ಇಂಧನ ಪೂರೈಕೆಗೆ ಆಗಿರುವ ಧಕ್ಕೆಯನ್ನು ನಿಭಾಯಿಸುವ ಸಾಮರ್ಥ್ಯವು ಭಾರತಕ್ಕೆ ಇದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.

ಭಾರತದ ಬಳಿ ವಿದೇಶಿ ವಿನಿಮಯದ ಮೀಸಲು ಹೆಚ್ಚಿನ ಮಟ್ಟದಲ್ಲಿದೆ, ಅಗತ್ಯ ವಿತ್ತೀಯ ತೀರ್ಮಾನಗಳನ್ನು ತೆಗೆದುಕೊಳ್ಳಲು ಅವಕಾಶ ಇದೆ, ದೇಶದಲ್ಲಿ ಹಣದುಬ್ಬರ ಪ್ರಮಾಣ ಕಡಿಮೆ ಇದೆ. ಜಾಗತಿಕವಾಗಿ ಸಮಸ್ಯೆಗಳು ಇದ್ದರೂ ಇವೆಲ್ಲವೂ ಭಾರತದ ಬೆಳವಣಿಗೆಗೆ ಸಹಾಯ ಮಾಡುತ್ತವೆ ಎಂದು ವಿಶ್ವ ಬ್ಯಾಂಕ್ನ ದಕ್ಷಿಣ ಏಷ್ಯಾದ ಹಿರಿಯ ಅಧಿಕಾರಿ ಸೆಬಾಸ್ಟಿಯನ್ ಎಕಾರ್ಟ್ ಗುರುವಾರ ಹೇಳಿದ್ದಾರೆ.

ಹಿಂದಿನ ತ್ರೈಮಾಸಿಕದ ಅವಧಿಯಲ್ಲಿ ಸುಂಕದ ಕಾರಣದಿಂದಾಗಿ ಉಂಟಾದ ಸಮಸ್ಯೆಗಳನ್ನು ಕೂಡ ಭಾರತವು ಚೆನ್ನಾಗಿಯೇ ನಿಭಾಯಿಸಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಜಾಗತಿಕವಾಗಿ ಸಮಸ್ಯೆಗಳು ಇದ್ದರೂ ಭಾರತ ಮತ್ತು ಈ ಭಾಗವು ಬಹಳ ಸುಭದ್ರ ಸ್ಥಿತಿಯಲ್ಲಿ ಇರಲಿದೆ, ಪ್ರವರ್ಧಮಾನಕ್ಕೆ ಬರುತ್ತಿರುವ ಇತರ ದೇಶಗಳಿಗಿಂತ ಭಾರತವು ಉತ್ತಮ ಸಾಧನೆ ತೋರಲಿದೆ ಎಂಬುದು ನಮ್ಮ ಅನಿಸಿಕೆ’ ಎಂದು ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ದೇಶಿ ಮಾರುಕಟ್ಟೆಯಲ್ಲಿ ಬೇಡಿಕೆ ಚೆನ್ನಾಗಿ ಇದ್ದುದು ಮತ್ತು ರಫ್ತು ವಹಿವಾಟುಗಳು ಉತ್ತಮ ಮಟ್ಟದಲ್ಲಿ ಇದ್ದ ಕಾರಣದಿಂದಾಗಿ ಭಾರತದ ಅರ್ಥ ವ್ಯವಸ್ಥೆಯು 2025–26ನೆಯ ಹಣಕಾಸು ವರ್ಷದಲ್ಲಿ ಶೇ 7.6ರಷ್ಟು ಬೆಳವಣಿಗೆ ಕಂಡಿರುವ ಅಂದಾಜು ಇದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.

2025–26ನೆಯ ಹಣಕಾಸು ವರ್ಷದಲ್ಲಿ ಕೂಡ ಭಾರತವು ಜಗತ್ತಿನ ದೊಡ್ಡ ಅರ್ಥ ವ್ಯವಸ್ಥೆಗಳ ಪೈಕಿ ಅತ್ಯಂತ ಹೆಚ್ಚಿನ ವೇಗದ ಬೆಳವಣಿಗೆ ಕಂಡ ರಾಷ್ಟ್ರವಾಗಿ ಮುಂದುವರಿದಿದೆ. ಭಾರತದ ಸರಕುಗಳಿಗೆ ಜಾಗತಿಕವಾಗಿ ಬಹಳ ದೊಡ್ಡ ಮಟ್ಟದಲ್ಲಿ ಸುಂಕ ವಿಧಿಸಿದರೂ, ಈ ಬೆಳವಣಿಗೆ ಆಗಿದೆ ಎಂದು ವಿಶ್ವ ಬ್ಯಾಂಕ್ನ ಭಾರತದ ಮುಖ್ಯ ಅರ್ಥಶಾಸ್ತ್ರಜ್ಞ ಆರೇಲಿಯನ್ ಕ್ರೂಸ್ ಹೇಳಿದ್ದಾರೆ.

ಕಳೆದ ವರ್ಷದಲ್ಲಿ ಕೇಂದ್ರ ಸರ್ಕಾರವು ಆದಾಯ ತೆರಿಗೆ ಮಿತಿಯನ್ನು ಹೆಚ್ಚು ಮಾಡಿದ್ದು ಹಾಗೂ ಜಿಎಸ್ಟಿ ಮಂಡಳಿಯು ತೆರಿಗೆ ಪ್ರಮಾಣವನ್ನು ಪರಿಷ್ಕರಿಸಿದ ಕ್ರಮವು ದೇಶಿ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚು ಮಾಡಿವೆ. ಹೆಚ್ಚಿನ ಸುಂಕದ ಕಾರಣದಿಂದಾಗಿ ತೊಂದರೆಗೆ ಒಳಗಾಗಬಹುದು ಎಂಬ ಅಂದಾಜು ಮಾಡಿದ್ದ ರಫ್ತು ಹಾಗೂ ಹೂಡಿಕೆ ವಲಯಗಳು ನಿರೀಕ್ಷೆಗಿಂತ ಉತ್ತಮ ಬೆಳವಣಿಗೆ ಕಂಡಿವೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.