ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪನಿಗಳಿಂದ ₹ 4.57 ಲಕ್ಷ ಕೋಟಿ ಸಂಗ್ರಹ

Last Updated 15 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ 10 ತಿಂಗಳ ಅವಧಿಯಲ್ಲಿ ದೇಶಿ ಕಂಪನಿಗಳು ₹ 4.57 ಲಕ್ಷ ಕೋಟಿ ಬಂಡವಾಳ ಸಂಗ್ರಹಿಸಿವೆ.

ಸಂಸ್ಥೆಯ ಷೇರುಗಳನ್ನು ಸೀಮಿತ ಸಂಖ್ಯೆಯ ಅರ್ಹ ಹೂಡಿಕೆದಾರರಿಗೆ (ಸಾಲದಾತರಿಗೆ) ಮಾತ್ರ ಮಾರಾಟ ಮಾಡಿ ಈ ಮೊತ್ತದ ಬಂಡವಾಳ ಸಂಗ್ರಹಿಸಲಾಗಿದೆ.

2018–19ರಲ್ಲಿ ಏಪ್ರಿಲ್‌ನಿಂದ ಜನವರಿವರೆಗಿನ ಅವಧಿಯಲ್ಲಿ ಕಾರ್ಪೊರೇಟ್‌ ಬಾಂಡ್‌ಗಳ ಖಾಸಗಿ ಮಾರಾಟದಿಂದ ಈ ಮೊತ್ತ ಸಂಗ್ರಹಿಸಲಾಗಿದೆ. ಹಿಂದಿನ ಹಣಕಾಸು ವರ್ಷದಲ್ಲಿನ (2017–18) ಇದೇ ಅವಧಿಯಲ್ಲಿ ಈ ಮೊತ್ತ₹ 4,87,764 ಕೋಟಿಗಳಷ್ಟಿತ್ತು.

ಒಂದು ವರ್ಷದಲ್ಲಿ ₹ 6 ಲಕ್ಷ ಕೋಟಿಗಳನ್ನು ಈ ವಿಧಾನದ ಮೂಲಕ ಸಂಗ್ರಹಿಸಲಾಗಿತ್ತು ಎಂದು ಸೆಬಿ ಮಾಹಿತಿ ನೀಡಿದೆ. ವಹಿವಾಟು ವಿಸ್ತರಣೆ ಮತ್ತು ದುಡಿಯುವ ಬಂಡವಾಳದ ಅಗತ್ಯ ಪೂರೈಸಿಕೊಳ್ಳಲು ಈ ಪ್ರಮಾಣದ ಬಂಡವಾಳ ಸಂಗ್ರಹಿಸಲಾಗಿದೆ.

ಎಫ್‌ಪಿಐ ಹೂಡಿಕೆ ಮಿತಿ ಸಡಿಲಿಕೆ
ಕಾರ್ಪೊರೇಟ್‌ ಬಾಂಡ್‌ಗಳಲ್ಲಿ ವಿದೇಶಿ ಹೂಡಿಕೆದಾರರಿಗೆ (ಎಫ್‌ಪಿಐ) ವಿಧಿಸಲಾಗಿದ್ದ ಶೇ 20ರಷ್ಟು ಹೂಡಿಕೆ ಮಿತಿಯನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ರದ್ದುಗೊಳಿಸಿದೆ.

ವಿದೇಶಿ ಹೂಡಿಕೆ ಹೆಚ್ಚಿಸುವ ಉದ್ದೇಶದಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಈ ಕ್ರಮ ಕೈಗೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT