ನವದೆಹಲಿ (ಪಿಟಿಐ): ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಹಾಗೂ ಚಿನ್ನ, ಬೆಳ್ಳಿಯ ಮೇಲಿನ ಆಮದು ಸುಂಕದ ಏರಿಕೆಯು ದೇಶದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವನ್ನು ಜೂನ್ ವೇಳೆಗೆ ಶೇ 5ರ ಮಟ್ಟಕ್ಕೆ ಒಯ್ಯಬಹುದು ಎಂದು ಅರ್ಥಶಾಸ್ತ್ರಜ್ಞರು ಅಂದಾಜು ಮಾಡಿದ್ದಾರೆ.

ಆದರೆ, ರೆಪೊ ದರವನ್ನು ಹೆಚ್ಚು ಮಾಡುವ ಮೊದಲು ಆರ್ಬಿಐ ಇಂಧನ ಬೆಲೆ ಏರಿಕೆಯ ಪರಿಣಾಮಗಳು ಒಂದು ಹಂತಕ್ಕೆ ಬರಲಿ ಎಂದು ಕಾಯಬಹುದು ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.

11 ದಿನಗಳ ಅಂತರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಲೀಟರಿಗೆ ಕ್ರಮವಾಗಿ ₹7.38 ಹಾಗೂ ₹7.48ರಷ್ಟು ಹೆಚ್ಚಿಸಲಾಗಿದೆ. ಚಿನ್ನ ಹಾಗೂ ಬೆಳ್ಳಿಯ ಆಮದು ಸುಂಕವನ್ನು ಕೇಂದ್ರ ಸರ್ಕಾರವು ಶೇ 15ಕ್ಕೆ ಹೆಚ್ಚಿಸಿದೆ. ಸಿಎನ್ಜಿ ಬೆಲೆಯನ್ನು ಕೂಡ ಜಾಸ್ತಿ ಮಾಡಲಾಗಿದೆ.

‘ಪೆಟ್ರೋಲ್, ಡೀಸೆಲ್ ಬೆಲೆಯ ಹೆಚ್ಚಳದ ಪರಿಣಾಮವಾಗಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 0.75ರಷ್ಟು ಜಾಸ್ತಿ ಆಗಬಹುದು. ಹೀಗಾಗಿ ಮೇ ತಿಂಗಳಲ್ಲಿ ಹಣದುಬ್ಬರ ಪ್ರಮಾಣವು ಶೇ 4ರಿಂದ ಶೇ 4.5ರ ಮಟ್ಟದಲ್ಲಿ ಇರಬಹುದು. ಜೂನ್ನಲ್ಲಿ ಇದು ಶೇ 4.5ರಿಂದ ಶೇ 5ರಷ್ಟು ಆಗಬಹುದು’ ಎಂದು ‘ಇವೈ ಇಂಡಿಯಾ’ ಹಿರಿಯ ಅಧಿಕಾರಿ ಡಿ.ಕೆ. ಶ್ರೀವಾಸ್ತವ ಹೇಳಿದ್ದಾರೆ.

‘ಹಣದುಬ್ಬರ ಪ್ರಮಾಣ ಶೇ 5ಕ್ಕಿಂತ ಜಾಸ್ತಿ ಆಗಿ, ಇನ್ನೂ ಹೆಚ್ಚಳ ಕಾಣುವ ಸೂಚನೆ ಸಿಕ್ಕರೆ ಬಡ್ಡಿ ದರವನ್ನು ಹೆಚ್ಚಿಸಲು ಆರ್ಬಿಐ ಮುಂದಾಗಬಹುದು’ ಎಂದು ಅವರು ಅಂದಾಜಿಸಿದ್ದಾರೆ.

ಆರ್ಬಿಐನ ಹಣಕಾಸು ನೀತಿ ಸಮಿತಿಯ ಸಭೆಯು ಜೂನ್ 5ರಂದು ನಡೆಯಲಿದ್ದು, ಸಮಿತಿಯು ದರಗಳಲ್ಲಿ ಯಾವುದೇ ಬದಲಾವಣೆ ಮಾಡದೆ ‘ತಟಸ್ಥ ನಿಲುವು’ ಮುಂದುವರಿಸಲಿದೆ ಎಂಬ ನಿರೀಕ್ಷೆಯನ್ನು ಅರ್ಥಶಾಸ್ತ್ರಜ್ಞರು ಹೊಂದಿದ್ದಾರೆ.

‘ಜೂನ್ನಲ್ಲಿ ರೆಪೊ ದರದಲ್ಲಿ ಬದಲಾವಣೆ ಆಗಲಿಕ್ಕಿಲ್ಲ. ಆದರೆ ಸರಕು ಸಾಗಣೆ ದರ ಹೆಚ್ಚಳ, ಇತರ ಕಚ್ಚಾ ವಸ್ತುಗಳ ಬೆಲೆಯಲ್ಲಿ ಏರಿಕೆ ಹಾಗೂ ಅಂತಿಮವಾಗಿ ಉತ್ಪನ್ನದ ಬೆಲೆಯಲ್ಲಿನ ಏರಿಕೆಯಿಂದಾಗಿ ಈ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಹಣದುಬ್ಬರ ಪ್ರಮಾಣ ನಿಭಾಯಿಸಲು ಆಗದಂತಹ ಮಟ್ಟ ತಲುಪಬಹುದು ಎಂಬ ಚಿಂತೆ ನಮ್ಮನ್ನು ಕಾಡುತ್ತಿದೆ. ಹಾಗೆ ಆದಾಗ ಬಡ್ಡಿ ದರ ಹೆಚ್ಚಳ ಮಾಡಬೇಕಾಗಬಹುದು’ ಎಂದು ಬಾಕ್ಲೇಸ್ ಇಂಡಿಯಾ ಸಂಸ್ಥೆ ಮುಖ್ಯ ಅರ್ಥಶಾಸ್ತ್ರಜ್ಞೆ ಆಸ್ಥಾ ಗುದ್ವಾನಿ ಹೇಳಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 5.1ರ ಮಟ್ಟದಲ್ಲಿ ಇರಬಹುದು ಎಂದು ಕ್ರಿಸಿಲ್ ಸಂಸ್ಥೆಯ ಪ್ರಧಾನ ಅರ್ಥಶಾಸ್ತ್ರಜ್ಞೆ ದೀಪ್ತಿ ದೇಶಪಾಂಡೆ ಅವರು ಹೇಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-51-1587951170

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.