ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈಲ ವಹಿವಾಟು ರಾಜಕೀಯಕ್ಕೆ ಬಳಕೆ ಬೇಡ: ನಿಲುವು ಸಮರ್ಥಿಸಿಕೊಂಡ ಭಾರತ

Last Updated 18 ಮಾರ್ಚ್ 2022, 15:46 IST
ಅಕ್ಷರ ಗಾತ್ರ

ನವದೆಹಲಿ: ಭಾರತವು ಕಾನೂನುಬದ್ಧವಾಗಿ ನಡೆಸುವ, ತೈಲ ಖರೀದಿಗೆ ಸಂಬಂಧಿಸಿದ ವ್ಯವಹಾರಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದು ಕೇಂದ್ರ ಸರ್ಕಾರದ ಮೂಲಗಳು ಪ್ರತಿ‍ಪಾದಿಸಿವೆ.

ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ತರಿಸಿಕೊಳ್ಳಲು ಸಿದ್ಧವಿರುವುದಾಗಿ ಭಾರತದ ಹೇಳಿದ ನಂತರ, ಆ ನಿಲುವಿನ ಕುರಿತು ಟೀಕೆಗಳು ವ್ಯಕ್ತವಾಗಿವೆ. ಅವುಗಳಿಗೆ ಪ್ರತಿಯಾಗಿ ಭಾರತವು ಹೀಗೆ ಹೇಳಿದೆ.

ರಷ್ಯಾ–ಉಕ್ರೇನ್ ಯುದ್ಧದ ನಂತರದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಹೆಚ್ಚಾಗಿದೆ. ಇದರಿಂದಾಗಿ ಭಾರತ ನಿಭಾಯಿಸಬೇಕಾದ ಸಮಸ್ಯೆಗಳೂ ಹೆಚ್ಚಾದವು. ಕಡಿಮೆ ಬೆಲೆಗೆ ಕಚ್ಚಾ ತೈಲ ಸಿಗುವಲ್ಲಿಂದ ತರಿಸಿಕೊಳ್ಳಬೇಕಾದ ಒತ್ತಡ ನಿರ್ಮಾಣವಾಯಿತು ಎಂದು ಮೂಲಗಳು ವಿವರಿಸಿವೆ.

ರಷ್ಯಾದಿಂದ ಭಾರತಕ್ಕೆ ಬರುವ ಕಚ್ಚಾ ತೈಲದ ಪ್ರಮಾಣವು ದೇಶದ ಒಟ್ಟು ಅಗತ್ಯದ ಶೇಕಡ 1ಕ್ಕಿಂತ ಕಡಿಮೆ ಇದೆ. ಈ ಆಮದು ವಹಿವಾಟಿನಲ್ಲಿ ಸರ್ಕಾರಗಳ ನಡುವೆ ಯಾವುದೇ ಒಪ್ಪಂದ ಇಲ್ಲ. ಕಚ್ಚಾ ತೈಲವು ಯಾವುದೇ ದೇಶದಿಂದ ಕಡಿಮೆ ಬೆಲೆಗೆ ಸಿಗುತ್ತದೆ ಎಂದಾದರೆ, ಅದನ್ನು ಭಾರತ ಸ್ವಾಗತಿಸುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪಾಶ್ಚಿಮಾತ್ಯ ದೇಶಗಳು ಆರ್ಥಿಕ ದಿಗ್ಬಂಧನವನ್ನು ಹೇರಿದ ನಂತರದಲ್ಲಿ ರಷ್ಯಾ ದೇಶವು ಭಾರತಕ್ಕೆ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಮಾರಾಟ ಮಾಡುವುದಾಗಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT