ಬುಧವಾರ, ನವೆಂಬರ್ 13, 2019
24 °C
ವಿಶ್ವ ವ್ಯಾಪಾರ ಸಂಘಟನೆಗೆ ದೂರು ನೀಡಿದ್ದ ಅಮೆರಿಕೆಗೆ ಗೆಲುವು

ರಫ್ತು ಉತ್ತೇಜನ: ಭಾರತಕ್ಕೆ ಹಿನ್ನಡೆ

Published:
Updated:

ನವದೆಹಲಿ (ಪಿಟಿಐ): ಭಾರತದ ರಫ್ತು ಉತ್ತೇಜನಾ ಕ್ರಮಗಳ ವಿರುದ್ಧ ವಿಶ್ವ ವ್ಯಾಪಾರ ಸಂಘಟನೆಗೆ (ಡಬ್ಲ್ಯುಟಿಒ) ಅಮೆರಿಕ ನೀಡಿದ್ದ ದೂರಿನಲ್ಲಿ ಭಾರತಕ್ಕೆ ಹಿನ್ನಡೆಯಾಗಿದೆ.

ಅಂತರರಾಷ್ಟ್ರೀಯ ವ್ಯಾಪಾರ ನಿಯಮಗಳಿಗೆ ಈ ರಫ್ತು ಉತ್ತೇಜನಾ ಯೋಜನೆಗಳು ವಿರುದ್ಧವಾಗಿವೆ ಎಂದು ‘ಡಬ್ಲ್ಯುಟಿಒ’ದ ವಿವಾದ ಇತ್ಯರ್ಥ ಸಮಿತಿಯು ಅಭಿಪ್ರಾಯಪಟ್ಟಿದೆ.

ಈ ತೀರ್ಪಿನ ಹಿನ್ನೆಲೆಯಲ್ಲಿ, ಭಾರತ ತನ್ನ ಈ ಉತ್ತೇಜನಾ ಕ್ರಮಗಳನ್ನು ಪರಾಮರ್ಶಿಸಬೇಕಾಗಿದೆ. ಇನ್ನು ಮುಂದೆ ರಫ್ತು ಸಾಧನೆ ಆಧರಿಸಿ ಸಬ್ಸಿಡಿಯನ್ನೂ ನೀಡುವಂತಿಲ್ಲ.

ಮೇಲ್ಮನವಿ ಮಂಡಳಿಗೆ ದೂರು: ಈ ತೀರ್ಪಿನ ವಿರುದ್ಧ ಭಾರತವು ‘ಡಬ್ಲ್ಯುಟಿಒ’ದ ವಿವಾದ ಇತ್ಯರ್ಥದ ಮೇಲ್ಮನವಿ ಮಂಡಳಿಗೆ ದೂರು ಸಲ್ಲಿಸಲು ಅವಕಾಶವೂ ಇದೆ.

ಭಾರತದ ರಫ್ತು ಉತ್ತೇಜನಾ ಕ್ರಮಗಳು ಮತ್ತು ಸುಂಕ ಮುಕ್ತ ಆಮದು ಯೋಜನೆ ವಿರುದ್ಧ ಅಮೆರಿಕವು ಹಿಂದಿನ ವರ್ಷದ ಮಾರ್ಚ್‌ನಲ್ಲಿ ದೂರು ದಾಖಲಿಸಿತ್ತು. ಈ ಯೋಜನೆಗಳು ತನ್ನ  ಕಂಪನಿಗಳ ಹಿತಾಸಕ್ತಿಗೆ ಧಕ್ಕೆ ಒದಗಿಸಲಿವೆ ಎನ್ನುವುದು ಅಮೆರಿಕದ ವಾದವಾಗಿದೆ.

ಪ್ರತಿಕ್ರಿಯಿಸಿ (+)