ವಾಷಿಂಗ್ಟನ್/ ನವದೆಹಲಿ: ಬಲವಂತದಿಂದ ಕಾರ್ಮಿಕರನ್ನು ದುಡಿಸಿಕೊಳ್ಳುವ ಕಡೆಗಳಿಂದ ಸರಕುಗಳನ್ನು ಆಮದು ಮಾಡಿಕೊಳ್ಳುವುದಕ್ಕೆ ನಿಷೇಧ ಹೇರಲು ವಿಫಲವಾಗಿರುವ ಆರೋಪದ ಅಡಿಯಲ್ಲಿ ಭಾರತದ ಸರಕುಗಳ ಮೇಲೆ ಶೇ 12.5ರಷ್ಟು ಸುಂಕ ವಿಧಿಸಲು ಅಮೆರಿಕ ಪ್ರಸ್ತಾವ ಸಿದ್ಧಪಡಿಸಿದೆ.

ಭಾರತ ಅಲ್ಲದೆ ಇತರ 53 ದೇಶಗಳ ಮೇಲೆಯೂ ಇದೇ ಬಗೆಯಲ್ಲಿ ಸುಂಕ ವಿಧಿಸುವ ಪ್ರಸ್ತಾವ ಅಮೆರಿಕದ ಮುಂದಿದೆ. ಭಾರತ ಮತ್ತು ಅಮೆರಿಕದ ಪ್ರತಿನಿಧಿಗಳ ನಡುವೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದ ಮಾತುಕತೆ ನಡೆಯುತ್ತಿರುವ ಹೊತ್ತಿನಲ್ಲಿ ಈ ಬೆಳವಣಿಗೆ ನಡೆದಿದೆ.

ಹೊಸ ಸುಂಕದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ವಾಣಿಜ್ಯ ಸಚಿವಾಲಯವು, ಇದರ ವಿಚಾರವಾಗಿ ಅಮೆರಿಕದ ಜೊತೆ ಮಾತುಕತೆ ನಡೆಸಲಾಗುತ್ತಿದೆ ಎಂದು ಹೇಳಿದೆ.

ಬಲವಂತದಿಂದ ಕಾರ್ಮಿಕರನ್ನು ದುಡಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಒಟ್ಟು 60 ದೇಶಗಳ ವಿರುದ್ಧ ಅಮೆರಿಕದಲ್ಲಿ ಮಾರ್ಚ್ನಲ್ಲಿ ತನಿಖೆ ಆರಂಭವಾಗಿತ್ತು. ಈಗ ಅಮೆರಿಕದ ವ್ಯಾಪಾರ ಪ್ರತಿನಿಧಿ (ಯುಎಸ್ಟಿಆರ್) ಸಂಸ್ಥೆ, 1974ರ ವ್ಯಾಪಾರ ಕಾಯ್ದೆಯ ಅಡಿ ಈ ಹೆಚ್ಚುವರಿ ಸುಂಕ ವಿಧಿಸುವ ಪ್ರಸ್ತಾವ ಸಿದ್ಧಪಡಿಸಿದೆ.

ಇದು ಈಗ ಪ್ರಸ್ತಾವ ಮಾತ್ರ, ಇದು ಅಂತಿಮಗೊಂಡಿಲ್ಲ ಎಂದು ಯುಎಸ್ಟಿಆರ್ ಹೇಳಿದೆ. ಸಂಬಂಧಪಟ್ಟ ದೇಶಗಳು ಇದರ ಕುರಿತಾದ ವಿಚಾರಣೆಯ ವೇಳೆ ಹಾಜರಾಗುವುದಾಗಿ ಮನವಿ ಮೂಲಕ ತಿಳಿಸಲು ಜೂನ್ 22 ರವರೆಗೆ ಅವಕಾಶ ಇದೆ ಎಂದು ತಿಳಿಸಿದೆ.

ಕೆಲವು ಸರಕುಗಳನ್ನು ಹೊರತುಪಡಿಸಿ ಇತರ ಎಲ್ಲ ಸರಕುಗಳ ಮೇಲೆ ಈ ಸುಂಕ ವಿಧಿಸುವ ಪ್ರಸ್ತಾವ ಇದೆ. ಭಾರತ, ಅರ್ಜೆಂಟೀನಾ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಬ್ರೆಜಿಲ್, ಕಾಂಬೋಡಿಯಾ, ಚೀನಾ, ಇಸ್ರೇಲ್, ಜಪಾನ್, ನಾರ್ವೆ, ಒಮಾನ್, ರಷ್ಯಾ, ಸೌದಿ ಅರೇಬಿಯಾ, ಬ್ರಿಟನ್, ಯುಎಇ ಸೇರಿದಂತೆ ಒಟ್ಟು 54 ದೇಶಗಳ ಮೇಲೆ ಈ ತೆರಿಗೆ ವಿಧಿಸಲು ಪ್ರಸ್ತಾವದಲ್ಲಿ ಹೇಳಲಾಗಿದೆ.

‘ನಮ್ಮ ಬಹುಮುಖ್ಯ ವ್ಯಾಪಾರ ಪಾಲುದಾರರು ಬಲವಂತದಿಂದ ಕಾರ್ಮಿಕರನ್ನು ದುಡಿಸಿಕೊಳ್ಳುವ ಕಡೆಗಳಿಂದ ಸರಕು ಆಮದು ಮಾಡಿಕೊಳ್ಳುವುದರ ಬಗ್ಗೆ ಗಮನಹರಿಸಲು ವಿಫಲರಾಗಿರುವುದುಒಪ್ಪುವಂಥದ್ದಲ್ಲ. ಹೀಗೆ ಮಾಡುವುದರಿಂದಾಗಿ ಅಸಮಾನನೆಲೆಯಲ್ಲಿ ಸ್ಪರ್ಧಿಸುವ ಅನಿವಾರ್ಯವು ಅಮೆರಿಕದ ಕಾರ್ಮಿಕರಿಗೆ ಎದುರಾಗುತ್ತದೆ’ ಎಂದು ಯುಎಸ್ಟಿಆರ್ ರಾಯಭಾರಿ ಜೆಮಿಸನ್ ಗ್ರೀರ್ ಹೇಳಿದ್ದಾರೆ.

ಹೊಸ ತೆರಿಗೆ ಪ್ರಸ್ತಾವದ ಕುರಿತು ಅಂತಿಮ ನಿರ್ಣಯವು ಜುಲೈ 24ಕ್ಕೆ ಮೊದಲು ಹೊರಬೀಳುವ ನಿರೀಕ್ಷೆ ಇದೆ. ಭಾರತವು ತನ್ನ ಮೇಲಿನ ಆರೋಪವನ್ನು ನಿರಾಕರಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-51-1890727493

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.