ನವದೆಹಲಿ: ದೇಶದ ಮೀಸಲು ತೈಲ ಸಂಗ್ರಹಾಗಾರಗಳ ಒಟ್ಟು ಸಾಮರ್ಥ್ಯದ ಶೇಕಡ 64ರಷ್ಟು ತೈಲ ದಾಸ್ತಾನು ಇದೆ ಎಂದು ಕೇಂದ್ರ ಸರ್ಕಾರವು ರಾಜ್ಯಸಭೆಗೆ ಸೋಮವಾರ ತಿಳಿಸಿದೆ.

ಅಂದಾಜು ಒಂಬತ್ತೂವರೆ ದಿನಗಳ ಪೂರೈಕೆಯನ್ನು ಸರಿದೂಗಿಸುವ ರೀತಿಯಲ್ಲಿ ಈ ಸಂಗ್ರಹಾಗಾರಗಳನ್ನು ರೂಪಿಸಲಾಗಿದೆ. ಕಚ್ಚಾ ತೈಲದ ಬೆಲೆಯು ಭಾರಿ ಪ್ರಮಾಣದಲ್ಲಿ ಏರಿಕೆಯಾದರೆ ಅಥವಾ ಪೂರೈಕೆಯಲ್ಲಿ ವ್ಯತ್ಯಯ ಆದರೆ ಇಲ್ಲಿನ ತೈಲವನ್ನು ಬಳಸಿಕೊಳ್ಳಲಾಗುತ್ತದೆ.

ಆಂಧ್ರಪ್ರದೇಶದ ವಿಶಾಖಪಟ್ಟಣ, ಕರ್ನಾಟಕದ ಮಂಗಳೂರು ಮತ್ತು ಉಡುಪಿ ಬಳಿಯ ಪಾದೂರಿನಲ್ಲಿ ಭೂಗತ ತೈಲ ಸಂಗ್ರಹಾಗಾರಗಳು ಇವೆ. ಇಲ್ಲಿ ಒಟ್ಟು 53.3 ಲಕ್ಷ ಟನ್ ಕಚ್ಚಾ ತೈಲವನ್ನು ಸಂಗ್ರಹಿಸಿ ಇರಿಸಬಹುದು.

‘ಭೂಗತ ಸಂಗ್ರಹಾಗಾರಗಳಲ್ಲಿ ಇರುವ ತೈಲದ ಪ್ರಮಾಣವು ಮಾರುಕಟ್ಟೆ ಸ್ಥಿತಿ ಆಧರಿಸಿ ಬದಲಾಗುತ್ತಿರುತ್ತದೆ’ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

‘ಈಗ ಸಂಗ್ರಹಾಗಾರಗಳಲ್ಲಿ ಅಂದಾಜು 33.72 ಲಕ್ಷ ಟನ್ ಕಚ್ಚಾ ತೈಲ ಲಭ್ಯವಿದೆ. ಇದು ಒಟ್ಟು ಸಾಮರ್ಥ್ಯದ ಅಂದಾಜು ಶೇ 64ರಷ್ಟಾಗುತ್ತದೆ’ ಎಂದು ಅವರು ವಿವರ ನೀಡಿದ್ದಾರೆ.

ಹೆಚ್ಚುವರಿಯಾಗಿ ಎರಡು ಪೆಟ್ರೋಲಿಯಂ ಸಂಗ್ರಹಾಗಾರಗಳನ್ನು ನಿರ್ಮಿಸಲು ಕೇಂದ್ರವು 2021ರಲ್ಲಿ ಒಪ್ಪಿಗೆ ನೀಡಿದೆ ಎಂದು ಗೋಪಿ ತಿಳಿಸಿದ್ದಾರೆ. ಇವು ಒಡಿಶಾದ ಚಂಡಿಖೋಲ್ನಲ್ಲಿ (40 ಲಕ್ಷ ಟನ್ ಸಾಮರ್ಥ್ಯ) ಹಾಗೂ ಉಡುಪಿ ಸನಿಹದ ಪಾದೂರಿನಲ್ಲಿ (25 ಲಕ್ಷ ಟನ್ ಸಾಮರ್ಥ್ಯ) ನಿರ್ಮಾಣ ಆಗಲಿವೆ.

ಪಾದೂರಿನ ಸಂಗ್ರಹಾಗಾರದ ನಿರ್ಮಾಣ ಕಾರ್ಯಕ್ಕೆ 2025ರ ಅಕ್ಟೋಬರ್ನಲ್ಲಿ ಕಾರ್ಯಾದೇಶ ನೀಡಲಾಗಿದೆ ಎಂದು ಗೋಪಿ ಮಾಹಿತಿ ನೀಡಿದ್ದಾರೆ.

‘ಈಗ 74 ದಿನಗಳಿಗೆ ಸಾಕಾಗುವಷ್ಟು ಕಚ್ಚಾ ತೈಲ ಹಾಗೂ ಪೆಟ್ರೋಲಿಯಂ ಉತ್ಪನ್ನಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವ ಸಾಮರ್ಥ್ಯ ದೇಶಕ್ಕೆ ಇದೆ. ತೈಲೋತ್ಪನ್ನಗಳ ಮಾರಾಟ ಕಂಪನಿಗಳ ಸಂಗ್ರಹಣಾ ಸೌಲಭ್ಯವನ್ನೂ ಬಳಸಿಕೊಂಡು ಇಷ್ಟು ದಿನಗಳಿಗೆ ಸಾಕಾಗುವಷ್ಟು ತೈಲ ಸಂಗ್ರಹ ಮಾಡಬಹುದು’ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.