ನವದೆಹಲಿ (ಪಿಟಿಐ): ಕಳೆದ ವರ್ಷ ದೇಶದ ಆನ್ಲೈನ್ ರಿಟೇಲ್ ಮಾರುಕಟ್ಟೆಯ (ಇ–ಕಾಮರ್ಸ್) ಗಾತ್ರವು ₹6 ಲಕ್ಷ ಕೋಟಿಗಿಂತ ಹೆಚ್ಚಾಗಿದೆ. ಇದು 2024ಕ್ಕೆ ಹೋಲಿಸಿದರೆ ಶೇ 21ರಷ್ಟು ಅಧಿಕವಾಗಿದೆ.

ಕ್ವಿಕ್ ಕಾಮರ್ಸ್ ವಲಯದಲ್ಲಿ ಭಾರತವು, ಜಾಗತಿಕ ಮಟ್ಟದಲ್ಲಿ ನಾಯಕನ ಸ್ಥಾನದಲ್ಲಿದೆ ಎಂದು ಇ–ಕಾಮರ್ಸ್ ಕಂಪನಿ ಫ್ಲಿಪ್ಕಾರ್ಟ್ ಸಹಯೋಗದೊಂದಿಗೆ ಸಲಹಾ ಸಂಸ್ಥೆ ಬೈನ್ ಆ್ಯಂಡ್ ಕಂಪನಿ ಸಿದ್ಧಪಡಿಸಿರುವ ವರದಿ ತಿಳಿಸಿದೆ.

2030ರ ವೇಳೆಗೆ ದೇಶದ ಆನ್ಲೈನ್ ರಿಟೇಲ್ ಮಾರುಕಟ್ಟೆಯ ಗಾತ್ರವು ₹16 ಲಕ್ಷ ಕೋಟಿಯಷ್ಟಾಗುವ ನಿರೀಕ್ಷೆ ಇದ್ದು, ವಾರ್ಷಿಕ ಶೇ 20ರಷ್ಟು ಬೆಳವಣಿಗೆ ಕಾಣಲಿದೆ ಎಂದು ಹೇಳಿದೆ.

2025ರಲ್ಲಿ ಆನ್ಲೈನ್ ರಿಟೇಲ್ ಮಾರುಕಟ್ಟೆಯ ಒಟ್ಟು ಮಾರಾಟದ ಮೌಲ್ಯದಲ್ಲಿ ಕ್ವಿಕ್ ಕಾಮರ್ಸ್ ವಲಯವು ₹1 ಲಕ್ಷ ಕೋಟಿಯಷ್ಟು ಪಾಲು ಹೊಂದಿದೆ. ಇದು 2030ರ ವೇಳೆಗೆ ಇದು ₹6.48 ಲಕ್ಷ ಕೋಟಿಯಷ್ಟಾಗುವ ನಿರೀಕ್ಷೆಯಿದ್ದು, ಒಟ್ಟು ಮಾರುಕಟ್ಟೆಯ ಗಾತ್ರದ ಶೇ 45ರಿಂದ ಶೇ 50ರಷ್ಟಾಗಲಿದೆ ಎಂದು ತಿಳಿಸಿದೆ.

2022ರಿಂದ 2024ರವರೆಗೆ ಕುಟುಂಬಗಳು ಸರಕು ಮತ್ತು ಸೇವೆಗಳಿಗೆ ಖರ್ಚು ಮಾಡುವ ಪ್ರಮಾಣ ವಾರ್ಷಿಕ ಶೇ 8ರಷ್ಟು ಬೆಳವಣಿಗೆ ಕಂಡಿತ್ತು. ಇದು 2025ರ ವೇಳೆಗೆ ಶೇ 10.5ಕ್ಕೆ ಏರಿಕೆಯಾಗಿದೆ. ಜಿಎಸ್ಟಿ ದರ ಪರಿಷ್ಕರಣೆ, ವೈಯಕ್ತಿಕ ಆದಾಯ ತೆರಿಗೆ ವಿನಾಯಿತಿ, ಹಣದುಬ್ಬರ ಇಳಿಕೆ ಮತ್ತು ಕಡಿಮೆ ಬಡ್ಡಿ ದರದ ಸಾಲವು ಕುಟುಂಬಗಳು ಖರ್ಚು ಮಾಡುವ ಪ್ರಮಾಣವನ್ನು ಹೆಚ್ಚಿಸಿವೆ ಎಂದು ತಿಳಿಸಿದೆ.

ಕಳೆದ ಐದು ವರ್ಷದಲ್ಲಿ ದೇಶದ ಆನ್ಲೈನ್ ಶಾಪಿಂಗ್ ಮಾರುಕಟ್ಟೆಯ ಗಾತ್ರ ಎರಡು ಪಟ್ಟಿಗಿಂತಲೂ ಹೆಚ್ಚು ಬೆಳವಣಿಗೆ ಕಂಡಿದೆ.

ದೇಶದ ಜಿಡಿಪಿ ಗಾತ್ರಕ್ಕೆ ಹೋಲಿಸಿದರೆ ಆನ್ಲೈನ್ ರಿಟೇಲ್ ಮಾರುಕಟ್ಟೆಯು ಶೇ 1.6ರಷ್ಟಿದೆ. ಆದರೆ ಚೀನಾದಲ್ಲಿ ಶೇ 14ರಷ್ಟು ಮತ್ತು ಇಂಡೊನೇಷ್ಯಾ ಶೇ 4.5ರಷ್ಟಿದೆ ಎಂದು ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-51-1831102521

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.