ನವದೆಹಲಿ (ಪಿಟಿಐ): ಪೆಟ್ರೋಲ್, ಡೀಸೆಲ್ ಹಾಗೂ ವಿಮಾನ ಇಂಧನ (ಎಟಿಎಫ್) ರಫ್ತಿಗೆ ವಿಧಿಸುವ ‘ಆಕಸ್ಮಿಕ ಲಾಭ ತೆರಿಗೆ’ಯನ್ನು ಕೇಂದ್ರ ತಗ್ಗಿಸಿದೆ.

ಪೆಟ್ರೋಲ್ಗೆ ಈ ತೆರಿಗೆಯು ಲೀಟರಿಗೆ ₹3 ಇದ್ದಿದ್ದು ₹1.5ಕ್ಕೆ, ಡೀಸೆಲ್ಗೆ ₹16.5 ಇದ್ದಿದ್ದು ₹13.5ಕ್ಕೆ ಹಾಗೂ ಎಟಿಎಫ್ಗೆ ₹16 ಇದ್ದಿದ್ದು ₹9.5ಕ್ಕೆ ತಗ್ಗಿದೆ. ಇದು ಜೂನ್ 1ರಿಂದ ಜಾರಿಗೆ ಬರಲಿದೆ.

ಪೆಟ್ರೋಲ್, ಡೀಸೆಲ್ ರಫ್ತಿಗೆ ವಿಧಿಸುವ ರಸ್ತೆ ಮತ್ತು ಮೂಲಸೌಕರ್ಯ ಸೆಸ್ ಶೂನ್ಯ ಮಟ್ಟದಲ್ಲಿ ಇರಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಅಧಿಸೂಚನೆಯಲ್ಲಿ ಹೇಳಿದೆ.

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಹಿನ್ನೆಲೆಯಲ್ಲಿ ದೇಶದಲ್ಲಿ ಪೆಟ್ರೋಲ್, ಡೀಸೆಲ್, ಎಟಿಎಫ್ ಲಭ್ಯತೆಯನ್ನು ಹೆಚ್ಚು ಮಾಡುವ ಉದ್ದೇಶದಿಂದ ‘ಆಕಸ್ಮಿಕ ಲಾಭ ತೆರಿಗೆ’ಯನ್ನು ವಿಧಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-51-1934360613

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.