ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2030ರ ಒಳಗಾಗಿ ತೈಲ ಸಂಸ್ಕರಣಾ ಸಾಮರ್ಥ್ಯ ದುಪ್ಪಟ್ಟು: ಪ್ರಧಾನ್‌

Last Updated 16 ಜೂನ್ 2020, 12:34 IST
ಅಕ್ಷರ ಗಾತ್ರ

ನವದೆಹಲಿ: ‘ದೇಶದಲ್ಲಿ ತೈಲ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ 2030ರ ಒಳಗಾಗಿ ತೈಲ ಸಂಸ್ಕರಣಾ ಸಾಮರ್ಥ್ಯವನ್ನು ದುಪ್ಪಟ್ಟುಗೊಳಿಸಲು ಯೋಜನೆ ರೂಪಿಸಲಾಗುತ್ತಿದೆ’ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.

‘ಆತ್ಮ ನಿರ್ಭರ: ದೇಶದ ತೈಲ ಮತ್ತು ಅನಿಲ ವಲಯದಲ್ಲಿ ಉಕ್ಕು ಬಳಕೆ’ ವಿಷಯದ ಕುರಿತ ವೆಬಿನಾರ್‌ನಲ್ಲಿ ಮಾತನಾಡಿದ ಅವರು, ಹೆಚ್ಚುತ್ತಿರುವ ದೇಶಿ ತೈಲ ಬೇಡಿಕೆ ಪೂರೈಸಲು ಮತ್ತು ರಫ್ತು ಮಾಡುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿದೆ’ ಎಂದಿದ್ದಾರೆ.

‘ಸದ್ಯ, ವಾರ್ಷಿಕ ತೈಲ ಸಂಸ್ಕರಣಾ ಸಾಮರ್ಥ್ಯ 25 ಕೋಟಿ ಟನ್‌ಗಳಷ್ಟಿದೆ. ಇದನ್ನು 10 ವರ್ಷಗಳಲ್ಲಿ ‌ 45 ಕೋಟಿ ಟನ್‌ಗಳಿಂದ 50 ಕೋಟಿ‌ ಟನ್‌ಗಳಿಗೆ ಹೆಚ್ಚಿಸಲಾಗುವುದು. ಹಾಲಿ ಇರುವ ಸಂಸ್ಕರಣಾಗಾರಗಳ ವಿಸ್ತರಣೆ ಮತ್ತು ಹೊಸ ಸಂಸ್ಕರಣಾಗಾರಗಳ ನಿರ್ಮಾಣ ಮಾಡಲಾಗುವುದು.

‘ಸಾಮರ್ಥ್ಯ ವೃದ್ಧಿಸುವ ಯೋಜನೆಗೆ ಪಶ್ಚಿಮ ಕರಾವಳಿಯಲ್ಲಿ 6 ಕೋಟಿ ಟನ್‌ ಸಾಮರ್ಥ್ಯದ ಸಂಸ್ಕರಣಾಗಾರ ನಿರ್ಮಿಸುವುದು ಬಹಳ ಮುಖ್ಯವಾಗಿದೆ. ಈ ಕಾರ್ಯವು ಶೀಘ್ರವೇ ಆರಂಭವಾಗಲಿದೆ’ ಎಂದು ಹೇಳಿದ್ದಾರೆ.

ವರ್ಷ; ಇಂಧನ ಬೇಡಿಕೆ (ಕೋಟಿ ಟನ್‌ಗಳಲ್ಲಿ)

2019;21.37

2030;47.2

2040;45.8

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT