ಬ್ಯಾಂಕ್‌ ಸಹಯೋಗದಲ್ಲಿ ಸಾಲ

7
ವಿಮೆ ಸೇವೆ: ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ ನಿರ್ಧಾರ

ಬ್ಯಾಂಕ್‌ ಸಹಯೋಗದಲ್ಲಿ ಸಾಲ

Published:
Updated:

ನವದೆಹಲಿ (ಪಿಟಿಐ): ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳ ಸಹಯೋಗದಲ್ಲಿ ತನ್ನ ಗ್ರಾಹಕರಿಗೆ ಸಾಲ ಪಡೆಯುವ, ವಿಮೆ ಮತ್ತು ಮ್ಯೂಚುವಲ್‌ ಫಂಡ್‌ ಖರೀದಿಸುವ ಸೌಲಭ್ಯಗಳನ್ನೂ ಒದಗಿಸಲು ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ (ಐಪಿಪಿಬಿ) ನಿರ್ಧರಿಸಿದೆ.

ಇದೇ 21ರಂದು ದೇಶದಾದ್ಯಂತ 650 ಶಾಖೆಗಳ ಮೂಲಕ ಪೋಸ್ಟ್‌ ಪೇಮೆಂಟ್ಸ್ ಬ್ಯಾಂಕ್‌ ಕಾರ್ಯಾರಂಭ ಮಾಡಲಿದೆ.  ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ಸಾಲ ಮತ್ತು ಇತರ ಹಣಕಾಸು ಸೇವೆಗಳನ್ನೂ ‘ಐಪಿಪಿಬಿ’ ಒದಗಿಸಲಿದೆ.  ವಿಮೆ ಸೌಲಭ್ಯ ಒದಗಿಸಲು ಬಜಾಜ್‌ ಅಲಯನ್ಸ್‌ ಜತೆ ಒಪ್ಪಂದ ಮಾಡಿಕೊಂಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ವ್ಯಕ್ತಿಗಳು ಮತ್ತು ಸಣ್ಣ ಉದ್ದಿಮೆದಾರರಿಂದ ₹ 1 ಲಕ್ಷದವರೆಗೆ ಠೇವಣಿಗಳನ್ನು ‘ಐಪಿಪಿಬಿ’ ಸ್ವೀಕರಿಸಲಿದೆ. ಇತರ ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗಾವಣೆ ಸೌಲಭ್ಯವನ್ನೂ ಒದಗಿಸಲಿದೆ. ಆದರೆ, ಸಾಲ ನೀಡಲು ಮತ್ತು ಕ್ರೆಡಿಟ್‌ ಕಾರ್ಡ್‌ ವಿತರಿಸಲು ಅವಕಾಶ ಇಲ್ಲ. ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳ ಜತೆಗಿನ ಒಪ್ಪಂದದ ಫಲವಾಗಿ ‘ಐಪಿಪಿಬಿ’ಯಲ್ಲಿ ಖಾತೆ ಆರಂಭಿಸಿದವರು ಬ್ಯಾಂಕ್‌ಗಳ ಗ್ರಾಹಕರಂತೆ ಹಣಕಾಸು ಸೇವೆಗಳನ್ನು ಪಡೆಯಬಹುದಾಗಿದೆ.

ಠೇವಣಿ ಮಿತಿಯನ್ನು ₹ 1 ಲಕ್ಷಕ್ಕೆ ನಿಗದಿಪಡಿಸಿರುವ ನಿಯಮದಲ್ಲಿ ಸಡಿಲಿಕೆ ಮಾಡಲು ‘ಐಪಿಪಿಬಿ’ ಅನುಮತಿ ಪಡೆದುಕೊಂಡಿದೆ. ಖಾತೆಯಲ್ಲಿನ ಹಣ ₹ 1 ಲಕ್ಷ ದಾಟಿದ ಸಂದರ್ಭದಲ್ಲಿ ಹೆಚ್ಚುವರಿ ಮೊತ್ತವನ್ನು ಅಂಚೆ ಕಚೇರಿ ಉಳಿತಾಯ ಖಾತೆಗೆ (ಪಿಒಎಸ್‌ಬಿ) ವರ್ಗಾಯಿಸಲು ಅನುಮತಿ ಪಡೆದುಕೊಂಡಿದೆ.

‘ಐಪಿಪಿಬಿ’ಯು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಸೇವೆಗೆ ಶುಲ್ಕ ವಿಧಿಸಲಾಗುವುದು ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !