ನವದೆಹಲಿ: ಭಾರತದ ತೈಲ ಸಂಸ್ಕರಣಾ ಕಂಪನಿಗಳು ರಷ್ಯಾದಿಂದ ಕಚ್ಚಾ ತೈಲವನ್ನು ಮತ್ತೆ ಬಹಳ ಉಮೇದಿನಿಂದ ಖರೀದಿಸಲು ಆರಂಭಿಸಿವೆ.

ಸಮುದ್ರದಲ್ಲಿ ಇರುವ ಹಡಗುಗಳಲ್ಲಿನ ರಷ್ಯಾ ತೈಲವನ್ನು ಖರೀದಿಸಲು ಅಮೆರಿಕವು ಮೂವತ್ತು ದಿನಗಳ ಅನುಮತಿಯನ್ನು ನೀಡಿರುವುದು ಇದಕ್ಕೆ ಕಾರಣ. ಆದರೆ, ಅಮೆರಿಕದಿಂದ ನಿರ್ಬಂಧಕ್ಕೆ ಗುರಿಯಾಗಿರುವ ಕಂಪನಿಗಳಿಂದಲೂ ತೈಲವನ್ನು ಖರೀದಿಸಬಹುದೇ ಎಂಬ ವಿಚಾರವಾಗಿ ಭಾರತದ ಕಂಪನಿಗಳು ಕಾನೂನು ಸ್ಪಷ್ಟನೆ ಕೋರಿವೆ.

ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಪೂರೈಕೆಗೆ ಅಡಚಣೆ ಆಗದಿರಲಿ ಎಂಬ ಕಾರಣಕ್ಕೆ, ಸಮುದ್ರ ಮಾರ್ಗದಲ್ಲಿ ಈಗಾಗಲೇ ಇರುವ ರಷ್ಯಾದ ಕಚ್ಚಾ ತೈಲವನ್ನು ಖರೀದಿಸಲು ಅಮೆರಿಕವು ಮೂವತ್ತು ದಿನಗಳ ಅನುಮತಿ ನೀಡಿದೆ.

ಭಾರತದ ತೈಲ ಸಂಸ್ಕರಣಾ ಕಂಪನಿಗಳು ಅಂದಾಜು 2 ಕೋಟಿ ಬ್ಯಾರೆಲ್ನಷ್ಟು ಕಚ್ಚಾ ತೈಲವನ್ನು ರಷ್ಯಾದ ಕಂಪನಿಗಳಿಂದ ಖರೀದಿಸಿವೆ, ನಿರ್ಬಂಧಕ್ಕೆ ಗುರಿಯಾಗದ ಕಂಪನಿಗಳಿಂದಲೇ ಅವು ಹೆಚ್ಚಿನ ಪ್ರಮಾಣದ ತೈಲ ಖರೀದಿಸಿವೆ ಎಂದು ಮೂಲಗಳು ಹೇಳಿವೆ.

ಡಿಸೆಂಬರ್ ನಂತರದಲ್ಲಿ ರಷ್ಯಾದಿಂದ ತೈಲ ಖರೀದಿ ಮಾಡದೆ ಇದ್ದ ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್ಪಿಸಿಎಲ್), ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೊಕೆಮಿಕಲ್ಸ್ ಲಿಮಿಟೆಡ್ (ಎಂಆರ್ಪಿಎಲ್) ಈಗ ಮತ್ತೆ ರಷ್ಯಾದಿಂದ ಖರೀದಿ ಆರಂಭಿಸಿವೆ ಎಂದು ಗೊತ್ತಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಕೂಡ ರಷ್ಯಾದಿಂದ ತೈಲ ಖರೀದಿಸಲು ಮುಂದಾಗಿದೆ.

‘ಭಾರತಕ್ಕೆ ಅಗತ್ಯವಿರುವ ಕಚ್ಚಾ ತೈಲದಲ್ಲಿ ಶೇ 50ರಷ್ಟು ಪಾಲು ಹೊರ್ಮುಜ್ ಜಲಸಂಧಿಯ ಮೂಲಕ ಬರುತ್ತದೆ. ಹೀಗಾಗಿ, ಅಲ್ಲಿನ ಅಡಚಣೆಯು ಭಾರತದ ಮೇಲೆ ತೀವ್ರ ಪರಿಣಾಮ ಉಂಟುಮಾಡುತ್ತದೆ’ ಎಂದು ಕೆಪ್ಲರ್ ಸಂಸ್ಥೆಯ ವಿಶ್ಲೇಷಕ ಸುಮಿತ್ ರಿತೋಲಿಯಾ ಹೇಳಿದ್ದಾರೆ.

ಭಾರತದ ತೈಲ ಸಂಸ್ಕರಣಾ ಕಂಪನಿಗಳು ರಷ್ಯಾದಿಂದ ದಿನವೊಂದಕ್ಕೆ ಅಂದಾಜು 10 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದವು. ಹೀಗಾಗಿ ಈಗ ಅಮೆರಿಕ ನೀಡಿರುವ ವಿನಾಯಿತಿಯಿಂದಾಗಿ, ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಖರೀದಿಸಲು ಹಸಿರು ನಿಶಾನೆ ಸಿಕ್ಕಂತಾಗಿದೆ ಎಂದು ಅವರು ವಿವರಿಸಿದ್ದಾರೆ.

ಅಮೆರಿಕದ ಕ್ರಮದ ಪರಿಣಾಮವಾಗಿ ಭಾರತದ ತೈಲ ಸಂಸ್ಕರಣಾ ಕಂಪನಿಗಳು ರಷ್ಯಾದಿಂದ ದಿನವೊಂದಕ್ಕೆ 20 ಲಕ್ಷ ಬ್ಯಾರೆಲ್ವರೆಗೆ ಕಚ್ಚಾ ತೈಲ ಖರೀದಿಸುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

‘ರಷ್ಯಾದಿಂದ ಖರೀದಿ ನಿಂತಿರಲಿಲ್ಲ’

ಪಶ್ಚಿಮ ಏಷ್ಯಾದ ದೇಶಗಳಲ್ಲಿ ಸಿಗುವ ಕಚ್ಚಾ ತೈಲದ ಪೂರೈಕೆಗೆ ಅಡಚಣೆ ಎದುರಾಗಿದ್ದರಿಂದಾಗಿ ಭಾರತದ ಕಂಪನಿಗಳು ಅಮೆರಿಕದ ವಿನಾಯಿತಿ ಪ್ರಕಟ ಆಗುವ ಮುನ್ನವೇ ರಷ್ಯಾದಿಂದ ಕಚ್ಚಾ ತೈಲ ಖರೀದಿ ಆರಂಭಿಸಿದ್ದವು ಎಂದು ಗೊತ್ತಾಗಿದೆ.

ಬೇರೆ ಬೇರೆ ಕಡೆಗಳಿಂದ ಇಂಧನ ಖರೀದಿಸುವ ನೀತಿಯನ್ನು ಅನುಸರಿಸುತ್ತಿರುವ ಭಾರತವು, ಅಮೆರಿಕದ ಒತ್ತಡ ಇದ್ದರೂ ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ನಿಲ್ಲಿಸಿರಲೇ ಇಲ್ಲ. ಅಮೆರಿಕ–ಇಸ್ರೇಲ್ ಸೇನೆಯು ಇರಾನ್ ಮೇಲೆ ದಾಳಿ ನಡೆಸುವ ಮೊದಲು, ಫೆಬ್ರುವರಿ ಅಂತ್ಯದ ವೇಳೆಗೆ ಭಾರತವು ರಷ್ಯಾದಿಂದ ಪ್ರತಿದಿನ 10.4 ಲಕ್ಷ ಬ್ಯಾರೆಲ್ನಷ್ಟು ಕಚ್ಚಾ ತೈಲ ಖರೀದಿಸಿತ್ತು ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಅಮೆರಿಕದಿಂದ ನಿರ್ಬಂಧಕ್ಕೆ ಗುರಿಯಾಗದೆ ಇದ್ದ ಕಂಪನಿಗಳಿಂದ ಈ ಖರೀದಿ ಮಾಡಲಾಗಿತ್ತು.

ಅರಬ್ಬಿ ಸಮುದ್ರ ಹಾಗೂ ಬಂಗಾಳ ಕೊಲ್ಲಿಯಲ್ಲಿ ಇರುವ ಹಡಗುಗಳಲ್ಲಿ ಅಂದಾಜು 1.5 ಕೋಟಿ ಬ್ಯಾರೆಲ್ನಷ್ಟು ರಷ್ಯಾದ ಕಚ್ಚಾ ತೈಲ ಲಭ್ಯವಿದೆ. 70 ಲಕ್ಷ ಬ್ಯಾರೆಲ್ನಷ್ಟು ರಷ್ಯಾದ ಕಚ್ಚಾ ತೈಲ ಹೊತ್ತಿರುವ ಹಡಗುಗಳು ಸಿಂಗಪುರದ ಸನಿಹದಲ್ಲಿವೆ. ಇನ್ನೊಂದಿಷ್ಟು ಹಡಗುಗಳು ಮೆಡಿಟರೇನಿಯನ್ ಸಮುದ್ರ ಹಾಗೂ ಸೂಯಜ್ ಕಾಲುವೆ ಬಳಿ ಇವೆ. ಇವೆಲ್ಲ ಒಂದು ತಿಂಗಳ ಒಳಗೆ ಭಾರತದ ಬಂದರುಗಳನ್ನು ತಲುಪಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.