ನವದೆಹಲಿ: ಚಿನ್ನ ಮತ್ತು ಬೆಳ್ಳಿಯ ಸೀಮಾ ಸುಂಕವನ್ನು ಹೆಚ್ಚು ಮಾಡಿದ ನಂತರ ಕೇಂದ್ರ ಸರ್ಕಾರವು ಬೆಳ್ಳಿಯ ಆಮದಿಗೆ ನಿರ್ಬಂಧ ಹೇರಿದೆ.

ಕೇಂದ್ರ ಸರ್ಕಾರವು ಚಿನ್ನ ಹಾಗೂ ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಶೇ 15ಕ್ಕೆ ಹೆಚ್ಚು ಮಾಡಿ ಮೇ 13ರಂದು ಆದೇಶ ಹೊರಡಿಸಿದೆ.

ಈಗ ಬೆಳ್ಳಿಯ ಆಮದು ನೀತಿಯನ್ನು ‘ಮುಕ್ತ’ದಿಂದ ‘ನಿರ್ಬಂಧ’ಕ್ಕೆ ಬದಲಾಯಿಸಲಾಗಿದೆ ಎಂದು ವಿದೇಶ ವ್ಯಾಪಾರಗಳ ಮಹಾನಿರ್ದೇಶನಾಲಯ (ಡಿಜಿಎಫ್ಟಿ) ಹೇಳಿದೆ.

‘ನಿರ್ಬಂಧ’ ಪಟ್ಟಿಯಲ್ಲಿ ಇರುವ ಸರಕುಗಳನ್ನು ಆಮದು ಮಾಡಿಕೊಳ್ಳಲು ಸರ್ಕಾರದಿಂದ ಪರವಾನಗಿ ಪಡೆಯಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.