ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Cryptocurrency: ಕ್ರಿಪ್ಟೋಕರೆನ್ಸಿ ನಿಷೇಧಿಸಲು ಮುಂದಾದ ಭಾರತ

Last Updated 15 ಮಾರ್ಚ್ 2021, 6:12 IST
ಅಕ್ಷರ ಗಾತ್ರ

ನವದೆಹಲಿ: ಭಾರತದಲ್ಲಿ ಕ್ರಿಪ್ಟೋಕರೆನ್ಸಿ ನಿಷೇಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ನಿಯಮ ಉಲ್ಲಂಘಿಸಿ ಕಾನೂನುಬಾಹಿರ ವಹಿವಾಟಿನಲ್ಲಿ ತೊಡಗಿಸಿಕೊಂಡರೆ ದಂಡ ವಿಧಿಸುವ ಮತ್ತು ಅಂತಹ ಡಿಜಿಟಲ್ ಆಸ್ತಿಗಳನ್ನು ವಶಪಡಿಸಿಕೊಳ್ಳಲು ನೂತನ ಕರಡು ಮಸೂದೆಯನ್ನು ಪ್ರಸ್ತಾಪಿಸಿದೆ.

ಈ ಕುರಿತು ಸರ್ಕಾರಿ ಮೂಲದ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದು, ದೇಶದಲ್ಲಿ ಕ್ರಿಪ್ಟೋಕರೆನ್ಸಿ ನಿಷೇಧಕ್ಕೆ ಕರಡು ಮಸೂದೆಯನ್ನು ಸಿದ್ಧಪಡಿಸಲಾಗಿದ್ದು, ಜಗತ್ತಿನಲ್ಲೇ ಕಟ್ಟುನಿಟ್ಟಾದ ನೀತಿ ಜಾರಿಯಾಗಲಿದೆ.

ಕ್ರಿಪ್ಟೋಕರೆನ್ಸಿ ಮೂಲಕ ಸ್ವತ್ತುಗಳ ಸ್ವಾಧೀನ, ವಿತರಣೆ, ಗಣಿಗಾರಿಕೆ, ವ್ಯಾಪಾರ, ವರ್ಗಾವಣೆ ನಡೆಸುವುದು ಅಪರಾಧವಾಗಿದೆ ಎಂದು ಅಧಿಕಾರಿಯ ಹೇಳಿಕೆಯನ್ನು ರಾಯಿಟರ್ಸ್ ವರದಿ ಮಾಡಿದೆ.

ಡಿಜೆಟಲ್ ಕರೆನ್ಸಿಗೆ ಕಾನೂನು ಚೌಕಟ್ಟು ನಿರ್ಮಿಸುವ ಮೂಲಕ ಬಿಟ್‌ಕಾಯಿನ್‌ನಂತಹ ಖಾಸಗಿ ವರ್ಚುವಲ್ ಕರೆನ್ಸಿಗಳನ್ನು ನಿಷೇಧಿಸಲು ಸರ್ಕಾರವು ಮುಂದಾಗಿದೆ.

ಇದನ್ನೂ ಓದಿ:

ಜೈಲು ಸಜೆ?
2019ರ ಸರ್ಕಾರಿ ಸಮಿತಿಯು, ಕ್ರಿಪ್ಟೋಕರೆನ್ಸಿಯ ಮೂಲಕ ನಡೆಸುವ ಎಲ್ಲಾ ಸ್ವರೂಪದ ವಹಿವಾಟು ನಿಷೇಧ ನಿಯಮವನ್ನು ಉಲ್ಲಂಘಿಸಿದ್ದರೆ 10 ವರ್ಷಗಳ ಜೈಲು ಶಿಕ್ಷೆಯನ್ನು ಶಿಫಾರಸು ಮಾಡಿತ್ತು.

ಹೊಸ ಕರಡು ಮಸೂದೆಯಲ್ಲೂ ಜೈಲು ಸಜೆ ಹಾಗೂ ದಂಡ ಸೇರಿದ್ದು, ಈ ಬಗ್ಗೆ ಚರ್ಚೆ ಅಂತಿಮ ಹಂತದಲ್ಲಿರುವುದರಿಂದ ಹೆಚ್ಚಿನ ಮಾಹಿತಿ ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT