ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2025ರಲ್ಲಿ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಭಾರತ: ಸಿಇಬಿಆರ್

Last Updated 26 ಡಿಸೆಂಬರ್ 2020, 11:05 IST
ಅಕ್ಷರ ಗಾತ್ರ

ನವದೆಹಲಿ: ಭಾರತವು2025ರಲ್ಲಿ ಐದನೇ ಅತಿದೊಡ್ಡ ಆರ್ಥಿಕತೆಯ ಸ್ಥಾನಕ್ಕೆ ಏರುವ ಮೂಲಕಇಂಗ್ಲೆಂಡ್‌ ಅನ್ನು ಹಿಂದಿಕ್ಕಲಿದೆ ಎಂದು ಇಂಗ್ಲೆಂಡ್‌ನ ಸೆಂಟರ್‌ ಫಾರ್‌ ಎಕನಾಮಿಕ್ಸ್‌ ಆ್ಯಂಡ್‌ ಬಿಸಿನೆಸ್‌ ರಿಸರ್ಚ್‌ (ಸಿಇಬಿಆರ್) ಕಂಪನಿ ಹೇಳಿದೆ.

2019ರಲ್ಲಿ ಇಂಗ್ಲೆಂಡ್‌ ಅನ್ನು ಹಿಂದಿಕ್ಕಿ ಭಾರತ ಐದನೇ ಸ್ಥಾನ ತಲುಪಿತ್ತು. ಆದರೆ 2020ರಲ್ಲಿ ಕೋವಿಡ್‌–19 ಬಿಕ್ಕಟ್ಟಿನಿಂದಾಗಿ ಭಾರತವು ಮತ್ತೆ ಆರನೇ ಸ್ಥಾನಕ್ಕೆ ಇಳಿಯುವ ಅಂದಾಜು ಮಾಡಲಾಗಿದೆ.ರೂಪಾಯಿ ದುರ್ಬಲ ಆಗಿರುವುದೂ ಇದಕ್ಕೆ ಕಾರಣ ಆಗಬಹುದು ಎಂದು ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.

2021ರಲ್ಲಿ ಭಾರತದ ಆರ್ಥಿಕತೆಯು ಶೇ 9ರಷ್ಟು ಬೆಳವಣಿಗೆ ಕಾಣಲಿದ್ದು, 2022ರಲ್ಲಿ ಶೇ 7ರಷ್ಟು ಇರಲಿದೆ ಎಂದು ಅದು ಅಂದಾಜು ಮಾಡಿದೆ.

2024ರವರೆಗೂ ಇಂಗ್ಲೆಂಡ್‌ ಐದನೇ ಸ್ಥಾನದಲ್ಲಿಯೇ ಮುಂದುವರಿಯಲಿದೆ. 2025ರಲ್ಲಿ ಭಾರತವು ಆ ಸ್ಥಾನಕ್ಕೆ ಬರಲಿದೆ. 2030ರಲ್ಲಿ ಜರ್ಮನಿ ಮತ್ತು ಜಪಾನ್‌ ಅನ್ನು ಹಿಂದಿಕ್ಕಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ಅದು ಹೇಳಿದೆ.

2028ರಲ್ಲಿ ಚೀನಾ ದೇಶವು ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಲಿದೆ. ಆ ಮೂಲಕ ಅಮೆರಿಕ ಎರಡನೇ ಸ್ಥಾನಕ್ಕೆ ಕುಸಿಯಲಿದೆ. 2030ರವರೆಗೂ ಜಪಾನ್‌ ಮೂರನೇ ಸ್ಥಾನದಲ್ಲಿಯೇ ಇರಲಿದೆ.

ಭಾರತದ ಸಾಲ ಮತ್ತು ಜಿಡಿಪಿ ಅನುಪಾತವು 2020ರಲ್ಲಿ ಶೇ 89ಕ್ಕೆ ಏರಿಕೆ ಆಗಿದೆ. ಹೀಗಿದ್ದರೂವಿಶ್ವದ ಇತರೆ ದೊಡ್ಡ ಆರ್ಥಿಕತೆಗಳಿಗೆ ಹೋಲಿಸಿದರೆ, ಕೇಂದ್ರ ಸರ್ಕಾರ ಮಾಡಿರುವ ವಿತ್ತೀಯ ವೆಚ್ಚದಿಂದಾಗಿ ಭಾರತದಲ್ಲಿ ಕೋವಿಡ್–19 ಬಿಕ್ಕಟ್ಟು ಹೆಚ್ಚು ನಿಯಂತ್ರಣಕ್ಕೆ ಬಂದಿದೆ ಎಂದು ಹೇಳಿದೆ.

ಮೂಲಸೌಕರ್ಯ ವಲಯದಲ್ಲಿ ಹೂಡಿಕೆ ಮಾಡುವ ಮೂಲಕ ಉತ್ಪಾದಕತೆಯನ್ನು ಹೆಚ್ಚಿಸಬಹುದು. ಹೀಗಾಗಿ ಕೇಂದ್ರ ಸರ್ಕಾರವು ಮೂಲಸೌಕರ್ಯದ ಮೇಲೆ ಮಾಡಲಿರುವ ವೆಚ್ಚವನ್ನು ಆಧರಿಸಿ ಆರ್ಥಿಕ ಮುನ್ನೋಟ ನಿರ್ಧಾರವಾಗಲಿದೆ ಎಂದೂ ಅದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT