ನವದೆಹಲಿ: ಫೆಬ್ರುವರಿ ತಿಂಗಳಿನಲ್ಲಿ ದೇಶದ ಸರಕುಗಳ ರಫ್ತು ಪ್ರಮಾಣವು ಶೇ 0.81ರಷ್ಟು ಇಳಿಕೆಯಾಗಿದ್ದು, ₹3.38 ಲಕ್ಷ ಕೋಟಿ ಆಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಸೋಮವಾರ ತಿಳಿಸಿದೆ.

ಇದೇ ಅವಧಿಯಲ್ಲಿ ಆಮದು ಪ್ರಮಾಣವು ಶೇ 24.11ರಷ್ಟು ಹೆಚ್ಚಳವಾಗಿದ್ದು, ₹5.88 ಲಕ್ಷ ಕೋಟಿಯಷ್ಟಾಗಿದೆ ಎಂದು ತಿಳಿಸಿದೆ.

ಫೆಬ್ರುವರಿ ತಿಂಗಳಿನಲ್ಲಿ ದೇಶದ ವ್ಯಾಪಾರ ಕೊರತೆ ₹2.50 ಲಕ್ಷ ಕೋಟಿಯಷ್ಟಾಗಿದೆ ಎಂದು ಅದು ಮಾಹಿತಿ ನೀಡಿದೆ. ರಫ್ತು ಮೌಲ್ಯಕ್ಕಿಂತ ಆಮದು ಮೌಲ್ಯ ಹೆಚ್ಚಿದ್ದರೆ ಅದನ್ನು ವ್ಯಾಪಾರ ಕೊರತೆ ಎಂದು ಕರೆಯಲಾಗುತ್ತದೆ.

ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್ನಿಂದ ಫೆಬ್ರುವರಿವರೆಗೆ ದೇಶದ ರಫ್ತು ಶೇ 1.84ರಷ್ಟು ಹೆಚ್ಚಳವಾಗಿದ್ದು, ₹37.22 ಲಕ್ಷ ಕೋಟಿಯಷ್ಟಾಗಿದೆ. ಆಮದು ಶೇ 8.53ರಷ್ಟು ಏರಿಕೆಯಾಗಿದ್ದು, ₹65.90 ಲಕ್ಷ ಕೋಟಿಯಾಗಿದೆ.

‘ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಸವಾಲುಗಳ ನಡುವೆಯೂ ದೇಶದ ರಫ್ತು ಉತ್ತಮವಾಗಿದೆ’ ಎಂದು ಕೇಂದ್ರ ವಾಣಿಜ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಹೇಳಿದ್ದಾರೆ.

ಪಶ್ಚಿಮ ಏಷ್ಯಾದ ಬಿಕ್ಕಟ್ಟಿನಿಂದ ಹಡಗುಗಳ ಸಂಚಾರಕ್ಕೆ ಸಮಸ್ಯೆಯಾಗಿದೆ. ವಿಮಾನಗಳ ಕಾರ್ಯಾಚರಣೆಯಲ್ಲಿ ಅಡಚಣೆ ಸೇರಿದಂತೆ ಕೆಲವು ಸವಾಲುಗಳನ್ನು ವಿಮಾನಯಾನ ವಲಯವು ಎದುರಿಸುತ್ತಿದೆ. ಇದು ಮಾರ್ಚ್ ತಿಂಗಳ ರಫ್ತು ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ.

ಆಮದು ಹೆಚ್ಚಳಕ್ಕೆ ಕಾರಣವೇನು?: ಫೆಬ್ರುವರಿ ತಿಂಗಳಿನಲ್ಲಿ ಚಿನ್ನ ಮತ್ತು ಬೆಳ್ಳಿ ಆಮದು ಹೆಚ್ಚಳವಾಗಿದೆ. ಇದೇ ಆಮದು ಹೆಚ್ಚಳಕ್ಕೆ ಕಾರಣವಾಗಿದೆ. ಚಿನ್ನದ ಆಮದಿನಲ್ಲಿ ಶೇ 218ರಷ್ಟು ಹೆಚ್ಚಳವಾಗಿದ್ದು, ₹68,628 ಕೋಟಿ ಮೌಲ್ಯದ ಚಿನ್ನ ಆಮದಾಗಿದೆ. ಬೆಳ್ಳಿ ಆಮದಿನಲ್ಲಿ ಶೇ 285ರಷ್ಟು ಜಿಗಿತವಾಗಿದ್ದು, ₹15,311 ಕೋಟಿ ಮೌಲ್ಯದ ಬೆಳ್ಳಿ ಆಮದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.