ನವದೆಹಲಿ: ಮೊದಲ ಹಂತದ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ (ಬಿಟಿಎ) ಬಹುತೇಕ ಅಂಶಗಳನ್ನು ಭಾರತ ಮತ್ತು ಅಮೆರಿಕ ಅಂತಿಮಗೊಳಿಸಿವೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ.

ಈಗ ಮಾತುಕತೆಗಳು ಕೆಲವು ಸಣ್ಣ ವಿಷಯಗಳಿಗೆ ಸಂಬಂಧಿಸಿ ನಡೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ. ಅಮೆರಿಕದ ತಂಡವು ಮೊದಲ ಹಂತದ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸುವುದಕ್ಕೆ ಸಂಬಂಧಿಸಿದ ಮಾತುಕತೆ ನಡೆಸಲು ಭಾರತಕ್ಕೆ ಬಂದಿದೆ ಎಂದು ಹೇಳಿದ್ದಾರೆ.

ಮಾತುಕತೆಯು ಮಂಗಳವಾರದಿಂದ ಗುರುವಾರದವರೆಗೆ ನಡೆಯಲಿದೆ. ‘ಬಹುತೇಕ ಎಲ್ಲವೂ ಅಂತಿಮಗೊಂಡಿದೆ... ಮಾತುಕತೆಗಳು ಅಲ್ಪವಿರಾಮ, ಪೂರ್ಣವಿರಾಮದಂತಹ ಸಣ್ಣಪುಟ್ಟ ವಿಷಯಗಳ ಕುರಿತಾಗಿ ನಡೆಯುತ್ತಿದೆ’ ಎಂದು ಗೋಯಲ್ ತಿಳಿಸಿದ್ದಾರೆ.

ಒಮಾನ್ ಜೊತೆಗಿನ ಒಪ್ಪಂದ ಜಾರಿ:

ಭಾರತ ಮತ್ತು ಒಮಾನ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದವು ಸೋಮವಾರದಿಂದ ಜಾರಿಗೆ ಬಂದಿದೆ. ಇದರಿಂದಾಗಿ ಭಾರತದಿಂದ ಆ ದೇಶಕ್ಕೆ ರಫ್ತಾಗುವ ಶೇ 99ರಷ್ಟು ಸರಕುಗಳಿಗೆ ಸುಂಕ ರಹಿತವಾಗಿ ಅಲ್ಲಿನ ಮಾರುಕಟ್ಟೆ ಪ್ರವೇಶಿಸಲು ಸಾಧ್ಯವಾಗಲಿದೆ.

ಭಾರತದ ಮಾರುಕಟ್ಟೆಗಳಲ್ಲಿ ಒಮಾನಿನ ಖರ್ಜೂರ ಅಗ್ಗವಾಗುವ ನಿರೀಕ್ಷೆ ಇದೆ. ಅಲ್ಲಿಂದ ಆಮದಾಗುವ ಖರ್ಜೂರಕ್ಕೆ ಕೋಟಾ ಆಧಾರಿತ ಸುಂಕ ವಿನಾಯಿತಿ ಇರಲಿದೆ.

‘ಭಾರತದಿಂದ ರಫ್ತಾಗುವ ಶೇ 99.38ರಷ್ಟು ಉತ್ಪನ್ನಗಳಿಗೆ ಒಮಾನ್ ಮಾರುಕಟ್ಟೆಯನ್ನು ಸುಂಕರಹಿತವಾಗಿ ಪ್ರವೇಶಿಸಲು ಸಾಧ್ಯವಾಗಲಿದೆ. ಒಪ್ಪಂದವು ನಮ್ಮ ರಫ್ತುದಾರರಿಗೆ ಮತ್ತು ವೃತ್ತಿಪರರಿಗೆ ಹೊಸ ಅವಕಾಶಗಳನ್ನು ತೆರೆದುಕೊಡಲಿದೆ’ ಎಂದು ಗೋಯಲ್ ಅವರು ಹೇಳಿದ್ದಾರೆ.

ಒಪ್ಪಂದವು ಎಂಎಸ್ಎಂಇ ವಲಯದ ಉದ್ದಿಮೆಗಳು, ತಯಾರಿಕಾ ವಲಯ ಮತ್ತು ಉದ್ಯೋಗ ಸೃಷ್ಟಿಗೆ ನೆರವಾಗುವ ನಿರೀಕ್ಷೆ ಇದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.