ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುಖ್ಯಾತ ಮಾರುಕಟ್ಟೆ’ಗಳ ಪಟ್ಟಿಯಲ್ಲಿ ಇಂಡಿಯಾಮಾರ್ಟ್‌.ಕಾಂ ಹೆಸರು

ಅಮೆರಿಕದಿಂದ ಪಟ್ಟಿ ಬಿಡುಗಡೆ * ಭಾರತದ 5 ಮಾರುಕಟ್ಟೆಗಳ ಹೆಸರು ಉಲ್ಲೇಖ
Last Updated 18 ಫೆಬ್ರುವರಿ 2022, 11:29 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕ ಟ್ರೇಡ್ ರೆಪ್ರೆಸೆಂಟೇಟಿವ್ (ಯುಎಸ್‌ಟಿಆರ್) ಸಂಸ್ಥೆ ಬಿಡುಗಡೆ ಮಾಡಿರುವವಿಶ್ವದ ‘ಕುಖ್ಯಾತ ಮಾರುಕಟ್ಟೆ’ಗಳ ವಾರ್ಷಿಕ ಪಟ್ಟಿಯಲ್ಲಿ, ಜನಪ್ರಿಯ ಇ–ಕಾಮರ್ಸ್‌ ಉದ್ಯಮ ಇಂಡಿಯಾಮಾರ್ಟ್‌ ಡಾಟ್‌ ಕಾಮ್ ಸೇರಿದಂತೆಭಾರತದ ಐದು ಮಾರುಕಟ್ಟೆಗಳನ್ನು ಹೆಸರಿಸಲಾಗಿದೆ.

ನವದೆಹಲಿಯ ಪ್ರಸಿದ್ಧ ಪಾಲಿಕಾ ಬಜಾರ್, ಟ್ಯಾಂಕ್‌ ರೋಡ್‌, ಮುಂಬೈನ ಹೀರಾ ಪನ್ನಾ, ಕೋಲ್ಕತ್ತದ ಕಿಡ್ಡರಪುರ ಮಾರುಕಟ್ಟೆಗಳನ್ನು ಸಹ ಈ ಪಟ್ಟಿಯಲ್ಲಿ ಹೆಸರಿಸಲಾಗಿದೆ.

ನಕಲಿ ಟ್ರೇಡ್‌ಮಾರ್ಕ್‌ ಸೃಷ್ಟಿ ಅಥವಾ ಹಕ್ಕುಸ್ವಾಮ್ಯಚೌರ್ಯದಲ್ಲಿ ತೊಡಗಿರುವ ಮಾರುಕಟ್ಟೆಗಳ ಪಟ್ಟಿಯನ್ನು ಯುಎಸ್‌ಟಿಆರ್‌ ಪ್ರತಿ ವರ್ಷ ಬಿಡುಗಡೆ ಮಾಡುತ್ತದೆ. 2021ರ ‘ಕುಖ್ಯಾತ ಮಾರುಕಟ್ಟೆಗಳ ಪಟ್ಟಿ’ಯನ್ನು ಗುರುವಾರ ಬಿಡುಗಡೆ ಮಾಡಲಾಗಿದೆ.

ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿರುವ ಯುಎಸ್‌ಟಿಆರ್‌, ಉದ್ಯಮ– ವ್ಯಾಪಾರಕ್ಕೆ ಸಂಬಂಧಿಸಿ ಅಮೆರಿಕದ ನೀತಿಯ ಅಭಿವೃದ್ಧಿ ಹಾಗೂ ಪ್ರಚಾರದ ಹೊಣೆ ಹೊತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT