ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರ ಪಾಲಿಸಿದ ವಿವೇಕಯುತವಾದ ವಿತ್ತೀಯ ನೀತಿಯು ಬಂಡವಾಳ ವೆಚ್ಚವನ್ನು ಮುಂದುವರಿಸಲು ಹಾಗೂ ಯುದ್ಧದಿಂದಾಗಿ ತೊಂದರೆಗೆ ಒಳಗಾಗಿರುವ ವಲಯಗಳಿಗೆ ನೆರವು ಒದಗಿಸುವ ಬಲವನ್ನು ತಂದುಕೊಟ್ಟಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಪರಿಸ್ಥಿತಿಯನ್ನು ನಿಭಾಯಿಸಲು ಆರ್ಬಿಐ ರೆಪೊ ದರವನ್ನು ಇನ್ನಷ್ಟು ತಗ್ಗಿಸಬಹುದು ಎಂದು ಅವರು ಹೇಳಿದ್ದಾರೆ.

ಭಾರಿ ಮೊತ್ತದ ಸಾಲ ಹೊತ್ತಿರುವ ಹಾಗೂ ಭಾರಿ ಪ್ರಮಾಣದ ವಿತ್ತೀಯ ಕೊರತೆ ಹೊಂದಿರುವ ಹಲವು ದೇಶಗಳು ಇಂದು ಹಣಕಾಸಿನ ವಿಚಾರವಾಗಿ ಹೆಚ್ಚಿನ ಆಯ್ಕೆಗಳನ್ನು ಹೊಂದಿಲ್ಲ. ಒಂದೋ ವೆಚ್ಚ ತಗ್ಗಿಸಬೇಕು ಅಥವಾ ಅಸ್ಥಿರತೆಗೆ ಗುರಿಯಾಗಬೇಕು ಎಂಬಂತಹ ಸ್ಥಿತಿಯನ್ನು ಅವು ಎದುರಿಸುತ್ತಿವೆ ಎಂದು ನಿರ್ಮಲಾ ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

‘ಆದರೆ ಭಾರತವು ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುವ ಅವಕಾಶ ಇರಿಸಿಕೊಂಡಿದೆ. ಬಂಡವಾಳ ವೆಚ್ಚ ಮುಂದುವರಿಸಲು, ರೆಪೊ ದರವನ್ನು ತಗ್ಗಿಸಲು, ತೊಂದರೆಗೆ ಒಳಗಾದ ವಲಯಗಳನ್ನು ಗುರಿಯಾಗಿಸಿಕೊಂಡು ನೆರವು ಕ್ರಮಗಳನ್ನು ಜಾರಿಗೆ ತರಲು ಅವಕಾಶ ಇದೆ. ದಶಕದಿಂದ ಪಾಲಿಸಿಕೊಂಡು ಬಂದಿರುವ ಹಣಕಾಸಿನ ಶಿಸ್ತಿನ ಲಾಭ ಇದು’ ಎಂದು ಅವರು ವಿವರಿಸಿದ್ದಾರೆ.

ಭಾರತದಲ್ಲಿ ಸರ್ಕಾರದ ಸಾಲ ಹಾಗೂ ಜಿಡಿಪಿ ನಡುವಿನ ಅನುಪಾತವು ಶೇ 81ರಷ್ಟು ಇದೆ. ಈ ಪ್ರಮಾಣವು ವಿಶ್ವದ ಪ್ರಮುಖ ಅರ್ಥ ವ್ಯವಸ್ಥೆಗಳ ಪೈಕಿ ಜರ್ಮನಿ ನಂತರ ಅತ್ಯಂತ ಕಡಿಮೆ ಎಂದು ನಿರ್ಮಲಾ ಅವರು ಹೇಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-51-1116067283

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.