ಇತ್ತೀಚಿನ ದಿನಗಳಲ್ಲಿ ಭಾರತದ ಆರ್ಥಿಕತೆಯ ಕುರಿತು ಒಂದು ವಿಚಿತ್ರ ಪ್ರಶ್ನೆ ಚರ್ಚೆಗೆ ಬಂದಿದೆ. ಡಯಟ್ ಕೋಕ್ ಸೇರಿದಂತೆ ಕೆಲವು ಪಾನೀಯ ಕ್ಯಾನ್ಗಳು ಮಾರುಕಟ್ಟೆಯಲ್ಲಿ ಕಾಣೆಯಾಗಿದ್ದವು. ಕಾರಣವಾಗಿ 'ಅಲ್ಯೂಮಿನಿಯಂ ಕೊರತೆ' ಎನ್ನಲಾಯಿತು. ಆದರೆ ಈ ಕಾರಣ ಕೇಳಿದ ಸಾಮಾನ್ಯ ಜನರಿಗೆ ಆಶ್ಚರ್ಯವಾಗುವುದು ಸಹಜ. ಏಕೆಂದರೆ ಭಾರತವೇ ವಿಶ್ವದ ಎರಡನೇ ಅತಿ ದೊಡ್ಡ ಅಲ್ಯೂಮಿನಿಯಂ ಉತ್ಪಾದಕ ದೇಶ. ನಮ್ಮ ದೇಶದಲ್ಲಿ ಸುಮಾರು 350 ವರ್ಷಗಳಿಗೆ ಸಾಕಾಗುವಷ್ಟು ಬಾಕ್ಸೈಟ್ ಸಂಗ್ರಹವಿದೆ.

ಹಾಗಿದ್ದರೂ ಪಾನೀಯ ಕ್ಯಾನ್ಗಳಿಗಾಗಿ ಬೇಕಾಗುವ ಗುಣಮಟ್ಟದ ಅಲ್ಯೂಮಿನಿಯಂ ಹಾಳೆಗಳು ಮತ್ತು ಸಂಸ್ಕರಣಾ ಘಟಕಗಳ ಕೊರತೆಯಿಂದ ಅನೇಕ ಕಂಪನಿಗಳು ವಿದೇಶಗಳ ಮೇಲೆಯೇ ಅವಲಂಬಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಇದು ಕೇವಲ ಪಾನೀಯ ಕ್ಷೇತ್ರದ ಸಮಸ್ಯೆಯಲ್ಲ; ಭಾರತದ ಆರ್ಥಿಕತೆಯ ಆಳದ ವಿರೋಧಾಭಾಸದ ಪ್ರತಿಬಿಂಬವಾಗಿದೆ.

ಭಾರತದಲ್ಲಿ ಸಂಪತ್ತು ಇದೆ, ನೈಸರ್ಗಿಕ ಸಂಪನ್ಮೂಲಗಳಿವೆ, ಯುವಜನಸಂಖ್ಯೆ ಇದೆ, ದೊಡ್ಡ ಮಾರುಕಟ್ಟೆಯೂ ಇದೆ. ಆದರೂ ಮೌಲ್ಯವರ್ಧಿತ ಉತ್ಪಾದನೆ ಮತ್ತು ಉನ್ನತ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತ ಇನ್ನೂ ಸಂಪೂರ್ಣವಾಗಿ ಆತ್ಮನಿರ್ಭರವಾಗಿಲ್ಲ.

ಭಾರತವನ್ನು ವಿಶ್ವದ 'ಔಷಧಾಲಯ' ಎಂದು ಕರೆಯಲಾಗುತ್ತದೆ. ಜಾಗತಿಕ ಜನರಿಕ್ ಔಷಧ ಮಾರುಕಟ್ಟೆಯಲ್ಲಿ ಭಾರತದ ಪಾಲು ಸುಮಾರು 20 ಶೇಕಡಾ ಇದೆ. ಆದರೆ ಭಾರತೀಯ ಔಷಧ ಉದ್ಯಮದಲ್ಲಿ ಬಳಸುವ ಮೂಲ ರಾಸಾಯನಿಕ ಪದಾರ್ಥಗಳಾದ ಎಪಿಐಗಳಲ್ಲಿ ಸುಮಾರು 70 ಶೇಕಡಾ ವರೆಗೆ ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಅಂದರೆ ಔಷಧ ಭಾರತದಲ್ಲಿ ತಯಾರಾದರೂ ಅದರ ಮೂಲಾಂಶ ವಿದೇಶದ್ದು.

ಐರನ್ ಓರ್ ಉತ್ಪಾದನೆಯಲ್ಲಿ ಭಾರತ ಪ್ರಮುಖ ದೇಶವಾಗಿದ್ದರೂ ಬುಲೆಟ್ ರೈಲು, ರಕ್ಷಣಾ ಕ್ಷೇತ್ರ ಮತ್ತು ವಿಮಾನೋದ್ಯಮಕ್ಕೆ ಬೇಕಾಗುವ ವಿಶೇಷ ಗುಣಮಟ್ಟದ ಉಕ್ಕನ್ನು ಇನ್ನೂ ಜಪಾನ್ ಮತ್ತು ಯೂರೋಪಿನ ದೇಶಗಳಿಂದ ತರಬೇಕಾಗಿದೆ. ಸಾಮಾನ್ಯ ಉಕ್ಕು ತಯಾರಿಸುವುದು ಸುಲಭವಾದರೂ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಉಕ್ಕು ತಯಾರಿಸಲು ಸಂಶೋಧನೆ, ಗುಣಮಟ್ಟ ನಿಯಂತ್ರಣ ಮತ್ತು ತಾಂತ್ರಿಕ ಪರಿಣತಿ ಅಗತ್ಯ. ಈ ಕ್ಷೇತ್ರದಲ್ಲಿ ಭಾರತ ಇನ್ನೂ ಹಿಂದುಳಿದಿದೆ.

ಭವಿಷ್ಯದ ಆರ್ಥಿಕತೆಯಲ್ಲಿ ಅತ್ಯಂತ ಮಹತ್ವ ಪಡೆದಿರುವ ವಿರಳ ಖನಿಜಗಳ ಕ್ಷೇತ್ರದಲ್ಲಿಯೂ ಇದೇ ಸ್ಥಿತಿ ಕಾಣಿಸುತ್ತದೆ. ವಿದ್ಯುತ್ ವಾಹನಗಳು, ಮೊಬೈಲ್ ಫೋನ್ಗಳು, ಗಾಳಿ ವಿದ್ಯುತ್ ಯಂತ್ರಗಳು ಮತ್ತು ಕೃತಕ ಬುದ್ಧಿಮತ್ತೆ ಉಪಕರಣಗಳಿಗೆ ಅಗತ್ಯವಾಗುವ ವಿರಳ ಖನಿಜಗಳ ಸಂಗ್ರಹ ಭಾರತದಲ್ಲಿದ್ದರೂ ದೊಡ್ಡ ಮಟ್ಟದ ಕಾಂತ ಉತ್ಪಾದನಾ ಘಟಕಗಳು ಇಲ್ಲ. ಇದರ ಲಾಭವನ್ನು ಚೀನಾ ಪಡೆದುಕೊಳ್ಳುತ್ತಿದೆ.

ಮೊಬೈಲ್ ಉತ್ಪಾದನೆಯಲ್ಲಿಯೂ ಇದೇ ಚಿತ್ರಣ ಗೋಚರಿಸುತ್ತದೆ. ಭಾರತದಲ್ಲಿ ಮೊಬೈಲ್ ಜೋಡಣೆ ಘಟಕಗಳು ವೇಗವಾಗಿ ಹೆಚ್ಚಾಗುತ್ತಿವೆ. ಆದರೆ ಚಿಪ್, ಪ್ರದರ್ಶನ ಫಲಕ, ಬ್ಯಾಟರಿ ಕೋಶ ಮತ್ತು ಸೂಕ್ಷ್ಮ ಭಾಗಗಳ ಬಹುಪಾಲು ಇನ್ನೂ ವಿದೇಶಗಳಿಂದ ಬರುತ್ತವೆ. ಹೀಗಾಗಿ 'ಭಾರತದಲ್ಲಿ ತಯಾರಿತ' ಎನ್ನುವುದಕ್ಕಿಂತ 'ಭಾರತದಲ್ಲಿ ಜೋಡಿತ' ಎನ್ನುವುದು ಹೆಚ್ಚು ಸೂಕ್ತವಾಗುತ್ತದೆ.

ಭಾರತದ ನಿಜವಾದ ಸಮಸ್ಯೆ ಸಂಪನ್ಮೂಲಗಳ ಕೊರತೆಯಲ್ಲ. ಸಮಸ್ಯೆ ಮೌಲ್ಯವರ್ಧಿತ ಉತ್ಪಾದನೆಯ ಕೊರತೆ. ನಾವು ಕಚ್ಚಾ ವಸ್ತುಗಳನ್ನು ರಫ್ತು ಮಾಡುತ್ತೇವೆ. ಬೇರೆ ದೇಶಗಳು ಅದಕ್ಕೆ ತಂತ್ರಜ್ಞಾನ ಮತ್ತು ಸಂಶೋಧನೆ ಸೇರಿಸಿ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುತ್ತವೆ. ನಂತರ ಅದನ್ನೇ ಭಾರತ ಹೆಚ್ಚು ಬೆಲೆ ನೀಡಿ ಖರೀದಿಸುತ್ತದೆ.

ಚೀನಾ ಯಶಸ್ವಿಯಾದದ್ದು ಕೇವಲ ಕಾರ್ಖಾನೆಗಳನ್ನು ನಿರ್ಮಿಸಿದ್ದರಿಂದ ಅಲ್ಲ. ಸಂಶೋಧನಾ ಕೇಂದ್ರಗಳು, ಬಂದರುಗಳು, ಸಾರಿಗೆ ವ್ಯವಸ್ಥೆ, ಕೌಶಲ್ಯಪೂರ್ಣ ಕಾರ್ಮಿಕರು ಮತ್ತು ಉತ್ಪಾದನಾ ಸರಪಳಿಯನ್ನು ಒಟ್ಟಿಗೆ ಬೆಳೆಸಿದ ಕಾರಣದಿಂದ. ಭಾರತದಲ್ಲಿ ಇನ್ನೂ ವಿದ್ಯುತ್ ಸಮಸ್ಯೆ, ಸಾರಿಗೆ ವಿಳಂಬ, ಭೂಮಿ ಅನುಮತಿ ಮತ್ತು ನೀತಿ ಅನಿಶ್ಚಿತತೆ ಕೈಗಾರಿಕೆಗಳಿಗೆ ಅಡೆತಡೆಯಾಗಿವೆ.

ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿಯೂ ಭಾರತ ಸಾಕಷ್ಟು ಹೂಡಿಕೆ ಮಾಡುತ್ತಿಲ್ಲ. ದೇಶದ ಒಟ್ಟು ಆರ್ಥಿಕ ಉತ್ಪಾದನೆಯಲ್ಲಿ ಸಂಶೋಧನೆಗೆ ಮೀಸಲಾಗಿರುವ ವೆಚ್ಚ ಸುಮಾರು 0.7 ಶೇಕಡಾ ಮಾತ್ರ. ಚೀನಾ ಮತ್ತು ದಕ್ಷಿಣ ಕೊರಿಯಾ ಇದಕ್ಕಿಂತ ಹಲವಷ್ಟು ಹೆಚ್ಚು ವೆಚ್ಚ ಮಾಡುತ್ತಿವೆ.

ಕೇಂದ್ರ ಸರ್ಕಾರ ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಉತ್ಪಾದನಾ ಪ್ರೋತ್ಸಾಹ ಯೋಜನೆಗಳು ಮತ್ತು ಅರೆವಾಹಕ ಯೋಜನೆಗಳ ಮೂಲಕ ಉತ್ಪಾದನಾ ಕ್ಷೇತ್ರವನ್ನು ಬಲಪಡಿಸಲು ಪ್ರಯತ್ನಿಸುತ್ತಿದೆ. ಕೆಲವು ಕ್ಷೇತ್ರಗಳಲ್ಲಿ ಪ್ರಗತಿಯೂ ಕಂಡುಬರುತ್ತಿದೆ. ಆದರೆ ಭಾರತ ಕೇವಲ ಜೋಡಣೆ ಆರ್ಥಿಕತೆಯಿಂದ ಹೊರಬಂದು ಸಂಶೋಧನೆ ಮತ್ತು ವಿನ್ಯಾಸ ಆಧಾರಿತ ಉತ್ಪಾದನಾ ರಾಷ್ಟ್ರವಾಗಬೇಕಾಗಿದೆ.

ಇಂದಿನ ಜಾಗತಿಕ ಆರ್ಥಿಕತೆಯಲ್ಲಿ ನಿಜವಾದ ಶಕ್ತಿ ಕಚ್ಚಾ ವಸ್ತುಗಳನ್ನು ಹೊಂದಿರುವುದಲ್ಲ; ಅವನ್ನು ಮೌಲ್ಯವರ್ಧಿತ ಉತ್ಪನ್ನಗಳಾಗಿ ಪರಿವರ್ತಿಸುವ ಸಾಮರ್ಥ್ಯದಲ್ಲಿದೆ.

ಇಲ್ಲದಿದ್ದರೆ 'ಕಲ್ಲು ನಮ್ಮದು… ಕಾರ್ಖಾನೆ ಅವರದ್ದು' ಎಂಬ ಭಾರತದ ಆರ್ಥಿಕ ವಿರೋಧಾಭಾಸ ಮುಂದುವರಿಯುತ್ತಲೇ ಇರುತ್ತದೆ.

ಡಾ. ಯೋಗಿತಾ ಕೆ. ಎಸ್. ಸಹಾಯಕ ಪ್ರಾಧ್ಯಾಪಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.