ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧ್ಯಮ ಮತ್ತು ಮನರಂಜನಾ ವಲಯದ ವರಮಾನ ಶೇ 20ರಷ್ಟು ಹೆಚ್ಚಳ ನಿರೀಕ್ಷೆ

Last Updated 23 ಫೆಬ್ರುವರಿ 2021, 14:23 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಮಾಧ್ಯಮ ಮತ್ತು ಮನರಂಜನಾ ವಲಯದ ವರಮಾನವು 2021–22ರಲ್ಲಿ ಶೇಕಡ 27ರಷ್ಟು ಬೆಳವಣಿಗೆ ಕಾಣಲಿದ್ದು ₹ 1.37 ಲಕ್ಷ ಕೋಟಿಗಳಿಗೆ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ರೇಟಿಂಗ್ಸ್‌ ಸಂಸ್ಥೆ ಕ್ರಿಸಿಲ್‌ ಹೇಳಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಈ ವಲಯದ ವರಮಾನ ಶೇ 26ರಷ್ಟು ಇಳಿಕೆ ಕಂಡಿದೆ.

ಡಿಜಿಟಲ್‌ ಮತ್ತು ಟಿ.ವಿ. ವಲಯಗಳು ಕೋವಿಡ್‌ಗೂ ಮೊದಲಿನ ಮಟ್ಟಕ್ಕೆ ಬರಲು ಕಡಿಮೆ ಸಮಯ ತೆಗೆದುಕೊಳ್ಳಲಿವೆ. ಆದರೆ, ಮುದ್ರಣ, ಚಲನಚಿತ್ರ ಮತ್ತು ರೇಡಿಯೊ ವಲಯಗಳು ಕೋವಿಡ್‌–ಪೂರ್ವದ ಮಟ್ಟಕ್ಕೆ ಮರಳಲು ದೀರ್ಘ ಸಮಯ ತೆಗೆದುಕೊಳ್ಳಲಿವೆ ಎಂದಿದೆ.

ಮುಂದಿನ ಹಣಕಾಸು ವರ್ಷದಲ್ಲಿ ಆರ್ಥಿಕತೆ ಚೇತರಿಕೆ ಕಂಡುಕೊಳ್ಳಲಿದ್ದು, ವರ್ಷದಿಂದ ವರ್ಷಕ್ಕೆ ಮಾಧ್ಯಮ ಮತ್ತು ಮನರಂಜನಾ ವಲಯದ ವರಮಾನ ಶೇ 31ರಷ್ಟು ಬೆಳವಣಿಗೆ ಕಾಣಲಿದೆ. ಚಂದಾದಾರಿಕೆಯ ವರಮಾನ ಶೇ 24ರಷ್ಟು ಹೆಚ್ಚಾಗಲಿದೆ ಎಂದು ಕ್ರಿಸಿಲ್‌ ರೇಟಿಂಗ್ಸ್‌ನ ನಿರ್ದೇಶಕ ನಿತೇಶ್‌ ಜೈನ್‌ ತಿಳಿಸಿದ್ದಾರೆ.

ಒಟ್ಟಾರೆ ಬೆಳವಣಿಗೆಯಲ್ಲಿ ಟಿ.ವಿ. ವಲಯದ ಕೊಡುಗೆಯು ಅರ್ಧದಷ್ಟಿದ್ದು, ಅದು ಸಂಪೂರ್ಣವಾಗಿ ಚೇತರಿಕೆ ಕಂಡಿದೆ. ಮುಂದಿನ ಹಣಕಾಸು ವರ್ಷದಲ್ಲಿ ಆರೋಗ್ಯಕರ ಬೆಳವಣಿಗೆ ಸಾಧಿಸಲಿದೆ. ಮುದ್ರಣ ವಲಯವು ಬಹಳ ನಿಧಾನಗತಿಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ಮುಂದಿನ ಹಣಕಾಸು ವರ್ಷದ ಅಂತ್ಯದ ವೇಳೆಗೆ ಸಂಪೂರ್ಣವಾಗಿ ಕೋವಿಡ್‌–ಪೂರ್ವದ ಸ್ಥಿತಿಗೆ ಮರಳಲು ಅದಕ್ಕೆ ಸಾಧ್ಯವಾಗುತ್ತದೆ ಎಂದು ಸಂಸ್ಥೆಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

‘ಡಿಜಿಟಲ್‌ ಒಂದು ಆಯ್ಕೆಯ ಮಾಧ್ಯಮವಾಗಿ ಬೆಳೆಯುತ್ತಿದ್ದು, ಕೋವಿಡ್‌ನಿಂದಾಗಿ ಒಟಿಟಿ, ಆನ್‌ಲೈನ್‌ ಗೇಮಿಂಗ್‌, ಇ–ಕಾಮರ್ಸ್‌, ಇ–ಲರ್ನಿಂಗ್‌, ಇ–ಪೇಪರ್‌ ಮತ್ತು ಆನ್‌ಲೈನ್ ಸುದ್ದಿ ವೇದಿಕೆಗಳ ಬೆಳವಣಿಗೆಗೆ ವೇಗ ದೊರೆತಿದೆ’ ಎಂದು ಸಂಸ್ಥೆಯ ಸಹಾಯಕ ನಿರ್ದೇಶಕ ರಕ್ಷಿತ್‌ ಕಚ್ಛಲ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT