ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯನ್‌ ಆಯಿಲ್‌ ಕಾರ್ಯಾಚರಣೆ ವರಮಾನ ₹ 2.04 ಲಕ್ಷ ಕೋಟಿ

Last Updated 31 ಅಕ್ಟೋಬರ್ 2020, 17:45 IST
ಅಕ್ಷರ ಗಾತ್ರ

ನವದೆಹಲಿ: ಇಂಡಿಯನ್‌ ಆಯಿಲ್‌ 2020–21ನೇ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಕಾರ್ಯಾಚರಣೆಯ ಮೂಲಕ ₹ 2.04 ಲಕ್ಷ ಕೋಟಿ ವರಮಾನ ಗಳಿಸಿದೆ.

2019–20ರ ಇದೇ ಅವಧಿಯಲ್ಲಿ ಕಾರ್ಯಾಚರಣಾ ವರಮಾನ ₹ 2.82 ಲಕ್ಷ ಕೋಟಿ ಇತ್ತು ಎಂದು ಅದು ತಿಳಿಸಿದೆ.

‘ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ ಆರು ತಿಂಗಳ ಅವಧಿಯಲ್ಲಿ ನಿವ್ವಳ ಲಾಭ ₹ 4,160 ಕೋಟಿಗಳಿಂದ ₹ 8,138 ಕೋಟಿಗಳಿಗೆ ಏರಿಕೆಯಾಗಿದೆ. ಇದು ಮುಖ್ಯವಾಗಿ ಹೆಚ್ಚಿನ ದಾಸ್ತಾನು ಗಳಿಕೆ ಮತ್ತು ಪ್ರಸಕ್ತ ಅವಧಿಯಲ್ಲಿನ ವಿನಿಮಯ ಲಾಭದಿಂದ ಬಂದಿದೆ’ ಎಂದು ಇಂಡಿಯನ್‌ ಆಯಿಲ್‌ನ ಅಧ್ಯಕ್ಷ ಎಸ್‌.ಎಂ ವೈದ್ಯ ತಿಳಿಸಿದ್ದಾರೆ.

‘ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ನಿವ್ವಳ ಲಾಭ ₹ 563 ಕೋಟಿಗಳಿಂದ ₹ 6,227 ಕೋಟಿಗಳಿಗೆ ಏರಿಕೆಯಾಗಿದೆ. ಅದೇ ರೀತಿ ಕಾರ್ಯಾಚರಣೆ ವರಮಾನವು ₹ 1.15 ಲಕ್ಷ ಕೋಟಿಗಳಿಂದ ₹ 1.32 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT