ಮುಂಬೈ: ಭಾರತೀಯರು ವಿದೇಶಿ ಪ್ರಯಾಣಕ್ಕೆ ಮಾಡುವ ಖರ್ಚು ಮಾರ್ಚ್ ತಿಂಗಳಿನಲ್ಲಿ ಅಂದಾಜು ₹2,010 ಕೋಟಿಯಷ್ಟು ಕಡಿಮೆಯಾಗಿದ್ದು, ₹10,431 ಕೋಟಿಗೆ ಇಳಿದಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ಅಂಕಿ ಅಂಶಗಳು ತಿಳಿಸಿವೆ.

ಪ್ರಸಕ್ತ ವರ್ಷದ ಜನವರಿಯಲ್ಲಿ ಭಾರತೀಯರು ವಿದೇಶಿ ಪ್ರಯಾಣಕ್ಕೆ ₹15,790 ಕೋಟಿ ಖರ್ಚು ಮಾಡಿದ್ದರು. ಇದು ಫೆಬ್ರುವರಿ ತಿಂಗಳಿನಲ್ಲಿ ₹12,441 ಕೋಟಿಯಷ್ಟಾಗಿತ್ತು.

ಮಾರ್ಚ್ ತಿಂಗಳಿನಲ್ಲಿ ದೇಶದಿಂದ ಒಟ್ಟು ₹24,786 ಕೋಟಿಯಷ್ಟು ರವಾನೆಯಾಗಿತ್ತು. ಈ ಪೈಕಿ ವಿದೇಶಿ ಪ್ರಯಾಣದ ವೆಚ್ಚ ₹10,431 ಕೋಟಿಯಾಗಿದ್ದು, ಅತಿದೊಡ್ಡ ಪಾಲು ಹೊಂದಿದೆ. ಶಿಕ್ಷಣ ಸಂಬಂಧಿತ ಪ್ರಯಾಣಕ್ಕಾಗಿ (ಶುಲ್ಕ, ವಸತಿ ನಿಲಯದ ವೆಚ್ಚಗಳು ಸೇರಿದಂತೆ) ಒಟ್ಟು ₹4,300 ಕೋಟಿ ಖರ್ಚು ಮಾಡಿದ್ದಾರೆ ಎಂದು ತಿಳಿಸಿದೆ.

ಪಶ್ಚಿಮ ಏಷ್ಯಾ ಸಂಘರ್ಷದಿಂದ ತೈಲ ದರ ಏರಿಕೆಯಾಗಿದೆ ಮತ್ತು ರೂಪಾಯಿ ಮೌಲ್ಯ ಇಳಿಕೆ ಆಗಿದೆ. ಇದು ಜನರ ವಿದೇಶಿ ಪ್ರವಾಸವನ್ನು ಕಡಿಮೆ ಮಾಡಿದೆ ಎಂದು ತಿಳಿಸಿದೆ.

ವಿದೇಶಗಳಲ್ಲಿ ವ್ಯಾಸಂಗ, ವಿದೇಶ ಪ್ರವಾಸ, ಹೂಡಿಕೆ ಸೇರಿದಂತೆ ವಿವಿಧ ವರ್ಗದಲ್ಲಿ ಭಾರತೀಯರು ಖರ್ಚು ಮಾಡುತ್ತಾರೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.