ಮುಂಬೈ: ಪಶ್ಚಿಮ ಏಷ್ಯಾ ಸಂಘರ್ಷದ ಪರಿಣಾಮವಾಗಿ ಕಚ್ಚಾ ತೈಲ ದರ ಏರಿಕೆ ಮತ್ತು ಡಾಲರ್ ಮೌಲ್ಯ ವೃದ್ಧಿಸಿಕೊಂಡಿದ್ದರ ಫಲವಾಗಿ ಭಾರತದ ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ.

ಶುಕ್ರವಾರದ ವಹಿವಾಟಿನ ಅಂತ್ಯಕ್ಕೆ ಒಂದು ಡಾಲರ್ ಎದುರು ರೂಪಾಯಿ ಮೌಲ್ಯವು 96.14ಕ್ಕೆ ಇಳಿದಿದೆ. ಡಾಲರ್ ಎದುರು ರೂಪಾಯಿ ಮೌಲ್ಯ 96ರ ಗಡಿ ದಾಟಿರುವುದು ಇದೇ ಮೊದಲು.

ಯುದ್ಧಗಳ ಕಾರಣದಿಂದಾಗಿ ಜಾಗತಿಕವಾಗಿ ಮುಂದುವರಿದಿರುವ ಅನಿಶ್ಚಿತತೆ, ವಿದೇಶಿ ಬಂಡವಾಳ ನಿರಂತರವಾಗಿ ಹರಿದುಹೋಗುತ್ತಿರುವುದು ಮತ್ತು ಹಣದುಬ್ಬರದ ಪರಿಣಾಮದಿಂದಾಗಿ ರೂಪಾಯಿ ಒತ್ತಡಕ್ಕೆ ಸಿಲುಕಿದೆ ಎಂದು ಫಾರೆಕ್ಸ್ ವಹಿವಾಟುದಾರರು ತಿಳಿಸಿದ್ದಾರೆ.

ಅಂತರಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ವಹಿವಾಟು ಶುಕ್ರವಾರ 95.86ರಿಂದ ಆರಂಭವಾಗಿ, 95.67ರಲ್ಲಿ ಸ್ಥಿರಗೊಂಡಿದೆ.

ಬುಧವಾರ 95.67ಕ್ಕೆ ಕುಸಿದಿದ್ದ ರೂಪಾಯಿ, ಗುರುವಾರ 95.73ಕ್ಕೆ ಇಳಿದಿತ್ತು.

ಇದರೊಂದಿಗೆ, ಡಾಲರ್ ಎದುರು ರೂಪಾಯಿಯು ಏಷ್ಯಾ ರಾಷ್ಟ್ರಗಳ ಕರೆನ್ಸಿಗಳಲ್ಲೇ ಅತ್ಯಂತ ಕಳಪೆ ಸಾಧನೆ ಮುಂದುವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.