ಮುಂಬೈ: ಪಶ್ಚಿಮ ಏಷ್ಯಾ ಯುದ್ಧ, ಜಾಗತಿಕ ಅನಿಶ್ಚಿತತೆ ನಡುವೆ ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಮತ್ತೊಮ್ಮೆ ದಾಖಲೆಯ ಮಟ್ಟಕ್ಕೆ ಕುಸಿದಿದೆ.

ವಿದೇಶಿ ಹೂಡಿಕೆ ಹೊರಹರಿವು ಮತ್ತು ಪಶ್ಚಿಮ ಏಷ್ಯಾ ಉದ್ವಿಗ್ನತೆಯು ಹೂಡಿಕೆದಾರರಲ್ಲಿ ಆತಂಕಕ್ಕೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ.

ಜಾಗತಿಕ ಕಚ್ಚಾ ತೈಲ ಬೆಲೆಗಳಲ್ಲಿ ಇಳಿಕೆ, ದೇಶೀಯ ಷೇರು ಮಾರುಕಟ್ಟೆಗಳಲ್ಲಿನ ಸಕಾರಾತ್ಮಕ ಪ್ರವೃತ್ತಿ ಸಹ ರೂಪಾಯಿ ಚೇತರಿಕೆಗೆ ಬಲ ನೀಡಲು ಸಾಧ್ಯವಾಗಿಲ್ಲ ಎಂದು ಫಾರೆಕ್ಸ್ ವ್ಯಾಪಾರಿಗಳು ತಿಳಿಸಿದ್ದಾರೆ.

ಬುಧವಾರದ ಅಂತರಬ್ಯಾಂಕ್ ವಿದೇಶಿ ವಿನಿಮಯದಲ್ಲಿ ಡಾಲರ್ ವಿರುದ್ಧ ರೂಪಾಯಿ ಮೌಲ್ಯವು 93.94ಕ್ಕೆ ಪ್ರಾರಂಭವಾಗಿ, 93.86-94.13ರ ವ್ಯಾಪ್ತಿಯಲ್ಲಿ ವಹಿವಾಟು ನಡೆಸಿತು. ಅಂತಿಮವಾಗಿ ಸಾರ್ವಕಾಲಿಕ ಕನಿಷ್ಠ 93.96ಕ್ಕೆ ಸ್ಥಿರವಾಯಿತು ಎಂದು ವರದಿ ತಿಳಿಸಿದೆ.

ಮಂಗಳವಾರ ಅಮೆರಿಕ ಡಾಲರ್ ವಿರುದ್ಧ ರೂಪಾಯಿ 23 ಪೈಸೆ ಕುಸಿದು 93.76ಕ್ಕೆ ವಹಿವಾಟು ಮುಗಿಸಿತ್ತು.

'ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಬಿಐ ರೂಪಾಯಿ ಮೌಲ್ಯವನ್ನು 94ರ ಮಟ್ಟದಲ್ಲಿ ಕಾಯ್ದುಕೊಳ್ಳುತ್ತದೆ. ಬಹುಶಃ ಅದನ್ನು 93.30 ರಿಂದ 92.80ಕ್ಕೆ ಇಳಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ’ ಎಂದು ವ್ಯಾಪಾರಿಗಳು ಹೇಳಿದ್ದಾರೆ.

ಆರು ಕರೆನ್ಸಿಗಳ ಬ್ಯಾಸ್ಕೆಟ್ ವಿರುದ್ಧ ಡಾಲರ್ನ ಬಲವನ್ನು ಅಳೆಯುವ ಡಾಲರ್ ಸೂಚ್ಯಂಕವು 99.26ಕ್ಕೆ ಅಂದರೆ ಶೇ. 0.17ರಷ್ಟು ಕಡಿಮೆಯಾಗಿ ವಹಿವಾಟು ನಡೆಸುತ್ತಿದೆ.

ದೇಶೀಯ ಷೇರು ಮಾರುಕಟ್ಟೆಗಳ ಪೈಕಿ ಸೆನ್ಸೆಕ್ಸ್ 1,205 ಅಂಶಗಳಷ್ಟು ಏರಿಕೆಯಾಗಿ 75,273.45ಕ್ಕೆ ತಲುಪಿದೆ. ನಿಫ್ಟಿ 394.05 ಅಂಶಗಳಷ್ಟು ಏರಿಕೆಯಾಗಿ 23,306.45ಕ್ಕೆ ತಲುಪಿದೆ.

ವಿನಿಮಯ ದತ್ತಾಂಶದ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬುಧವಾರ ನಿವ್ವಳ ಆಧಾರದ ಮೇಲೆ ₹1,805.37ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.