ಮುಂಬೈ: ಡಾಲರ್ಗೆ ಬೇಡಿಕೆ ಹೆಚ್ಚಳ ಮತ್ತು ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಹಣದುಬ್ಬರ ಹೆಚ್ಚಳದ ಆತಂಕದ ನಡುವೆ ಅಮೆರಿಕ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ದಾಖಲಿಸಿದೆ.

ಗುರುವಾರದ ವಹಿವಾಟು ಅಂತ್ಯಕ್ಕೆ ಡಾಲರ್ ಎದುರು ರೂಪಾಯಿ ಮೌಲ್ಯ ₹95.73ಕ್ಕೆ ಇಳಿದಿದೆ.

ಹಣದುಬ್ಬರದ ಕಳವಳ ಮತ್ತು ವಿದೇಶಿ ಮಾರುಕಟ್ಟೆಯಲ್ಲಿ ಅಮೆರಿಕ ಡಾಲರ್ಗೆ ಬಲದ ನಡುವೆ ರೂಪಾಯಿಯು ಮೌಲ್ಯ ಕುಸಿತದ ವಹಿವಾಟು ನಡೆಸುವ ನಿರೀಕ್ಷೆ ಇದೆ ಎಂದು ಫಾರೆಕ್ಸ್ ವ್ಯಾಪಾರಿಗಳು ಹೇಳಿದ್ದಾರೆ.

ಪಶ್ಚಿಮ ಏಷ್ಯಾ ಬಿಕ್ಕಟ್ಟು ಮತ್ತು ಹೊರ್ಮುಜ್ ಜಲಸಂಧಿಯ ದಿಗ್ಬಂಧನವು ಭಾರತಕ್ಕೆ ಕಚ್ಚಾ ತೈಲ ಆಮದಿಗೆ ಅಡ್ಡಿಯಾಗಿದೆ. ಅಲ್ಲದೆ, ಕಚ್ಚಾ ತೈಲ ಬೆಲೆಗಳಲ್ಲಿನ ತೀವ್ರ ಏರಿಕೆ ಇಂಧನ ಆಮದು ವೆಚ್ಚಗಳನ್ನು ಹೆಚ್ಚಿಸಿದೆ.

ಅಂತರಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ, ಅಮೆರಿಕ ಕರೆನ್ಸಿಯ ವಿರುದ್ಧ ರೂಪಾಯಿ 95.74ಕ್ಕೆ ಕುಸಿದಿದೆ.

ದಿನದ ವಹಿವಾಟಿನಲ್ಲಿ ₹95.61ಕ್ಕೆ ಏರಿಕೆ ಕಂಡಿದ್ದ ರೂಪಾಯಿ ಮೌಲ್ಯ ಬಳಿಕ ಸಾರ್ವಕಾಲಿಕ ಕನಿಷ್ಠ ಮಟ್ಟ ₹95.96ಕ್ಕೆ ಕುಸಿತ ಕಂಡಿದ್ದು, ದಿನದ ಅಂತ್ಯಕ್ಕೆ ₹95.73ರಲ್ಲಿ ಸ್ಥಿರಗೊಂಡು 7 ಪೈಸೆ ಕುಸಿತ ದಾಖಲಿಸಿದೆ.

ಜಾಗತಿಕ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲ ಬೆಲೆಯಲ್ಲಿ ಶೇ 0.50ರಷ್ಟು ಹೆಚ್ಚಳವಾಗಿದ್ದು, ಬ್ಯಾರಲ್ಗೆ 106.16 ಡಾಲರ್ ಆಗಿದೆ.

ದೇಶೀಯ ಷೇರುಪೇಟೆಗಳ ಪೈಕಿ ಸೆನ್ಸೆಕ್ಸ್ 789.74 ಅಂಶ ಜಿಗಿದು 75,398.72 ರಲ್ಲಿ ವಹಿವಾಟು ಮುಗಿಸಿದರೆ, ನಿಫ್ಟಿ 277 ಅಂಶ ಏರಿಕೆ ಕಂಡು 23,689.60ರಲ್ಲಿ ವಹಿವಾಟು ಅಂತ್ಯಗೊಳಿಸಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬುಧವಾರ ₹4,703 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.