ನವದೆಹಲಿ: ‘ದೇಶದ ಆರ್ಥಿಕತೆಯ ಅಂಶಗಳು ಸದೃಢವಾಗಿವೆ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಕರೆನ್ಸಿಗೆ ಹೋಲಿಸಿದರೆ ರೂಪಾಯಿ ಸ್ಥಿತಿ ಉತ್ತಮವಾಗಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಫೆಬ್ರುವರಿ 28ರಂದು ಪಶ್ಚಿಮ ಏಷ್ಯಾ ಸಂಘರ್ಷ ಆರಂಭವಾಯಿತು. ಅಂದಿನಿಂದ ಮಾರ್ಚ್ 27ರವರೆಗೆ ರೂಪಾಯಿ ಮೌಲ್ಯದಲ್ಲಿ ಶೇ 4.1ರಷ್ಟು ಇಳಿದಿದ್ದು, ರೂಪಾಯಿ ಮೌಲ್ಯ 94.82 ಆಗಿದೆ.

ಲೋಕಸಭೆಯಲ್ಲಿ ಪೂರಕ ಪ್ರಶ್ನೆಗೆ ಉತ್ತರಿಸಿದ ಸಚಿವರು, ದೇಶದ ಆರ್ಥಿಕತೆ ಮತ್ತು ವಿತ್ತೀಯ ಸ್ಥಿತಿಯು ಸದೃಢವಾಗಿದೆ. ಇಡೀ ವಿಶ್ವವೇ ಭಾರತದ ವಿತ್ತೀಯ ಕೊರತೆಯ ನಿರ್ವಹಣೆಯನ್ನು ಶ್ಲಾಘಿಸುತ್ತಿದ್ದು, ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹವು ಸದೃಢವಾಗಿದೆ ಎಂದು ತಿಳಿಸಿದ್ದಾರೆ.

ಪಶ್ಚಿಮ ಏಷ್ಯಾದ ಸಂಘರ್ಷದಿಂದ ಏಷ್ಯಾದ ಪ್ರಮುಖ ಕರೆನ್ಸಿಗಳ ಮೌಲ್ಯವು ಸಹ ಇಳಿದಿದೆ. ದಕ್ಷಿಣ ಕೊರಿಯಾದ ಕರೆನ್ಸಿ ವೊನ್, ಥಾಯ್ಲೆಂಡ್ನ ಬಹ್ತ್ ಮತ್ತು ಫಿಲಿಪ್ಪೀನ್ನ ಪೆಸೊ ಮೌಲ್ಯವು ಡಾಲರ್ ಎದುರು ಕ್ರಮವಾಗಿ ಶೇ 4.6,ಶೇ 5.5 ಮತ್ತು ಶೇ 4.8ರಷ್ಟು ಇಳಿದಿದೆ ಎಂದು ಹೇಳಿದ್ದಾರೆ.

ರೂಪಾಯಿ ಮೌಲ್ಯವು ಮಾರುಕಟ್ಟೆ ಆಧಾರಿತವಾಗಿದ್ದು ಮತ್ತು ಹಲವು ಅಂಶಗಳು ರೂಪಾಯಿ ಮೌಲ್ಯದ ಮೇಲೆ ಪರಿಣಾಮ ಬೀರುತ್ತವೆ ಎಂದು ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಪಂಕಜ್ ಚೌಧರಿ ಹೇಳಿದ್ದಾರೆ.

ಕೇಂದ್ರ ಸರ್ಕಾರ ಮತ್ತು ಆರ್ಬಿಐ ರೂಪಾಯಿ ಮೌಲ್ಯದ ಮೇಲೆ ತೀವ್ರ ನಿಗಾ ಇಡುತ್ತಿವೆ ಎಂದು ತಿಳಿಸಿದ್ದಾರೆ.

2020–21ರ ಆರ್ಥಿಕ ವರ್ಷದಲ್ಲಿ ದೇಶದ ಚಿಲ್ಲರೆ ಹಣದುಬ್ಬರವು ಸರಾಸರಿ ಶೇ 6.2ರಷ್ಟಿತ್ತು. ಇದು 2024–25ರ ವೇಳೆಗೆ ಶೇ 4.6ಕ್ಕೆ ಇಳಿದಿದ್ದು, 2025–26ರ ಏಪ್ರಿಲ್ನಿಂದ ಫೆಬ್ರುವರಿ ಅವಧಿಯಲ್ಲಿ ಶೇ 1.9ಕ್ಕೆ ಕಡಿಮೆ ಆಗಿದೆ. ಅನೇಕ ಅಗತ್ಯ ವಸ್ತುಗಳ ಬೆಲೆ ಸ್ಥಿರವಾಗಿವೆ ಅಥವಾ ಇಳಿಕೆ ಆಗುತ್ತಿದೆ ಎಂದು ಹೇಳಿದ್ದಾರೆ.

ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್ನಿಂದ ಮಾರ್ಚ್ 27ರವರೆಗೆ ಡಾಲರ್ ಎದುರು ರೂಪಾಯಿ ಮೌಲ್ಯ ಶೇ 9.9ರಷ್ಟು ಇಳಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.