ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಜ್ಞಾನದ ಮೇಲಿನ ವೆಚ್ಚ: ಮುಂಚೂಣಿಯಲ್ಲಿ ಭಾರತದ ಎಸ್‌ಎಂಬಿ

Last Updated 7 ಅಕ್ಟೋಬರ್ 2022, 19:29 IST
ಅಕ್ಷರ ಗಾತ್ರ

ಬೆಂಗಳೂರು: ತಂತ್ರಜ್ಞಾನದ ಮೇಲೆ ಮಾಡುವ ವೆಚ್ಚಕ್ಕೆ ಸಂಬಂಧಿಸಿದಂತೆ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು (ಎಸ್‌ಎಂಬಿ) ಮುಂಚೂಣಿಯಲ್ಲಿವೆ ಎಂದು ಮೈಕ್ರೊಸಾಫ್ಟ್‌ ಕಂಪನಿಯ ಈಚಿನ ವರದಿ ತಿಳಿಸಿದೆ.

ಎಸ್‌ಎಂಬಿ ಪೈಕಿ ಶೇ 35ರಷ್ಟು ಎಸ್‌ಎಂಬಿಗಳು ತಮ್ಮ ಒಟ್ಟು ವರಮಾನದ ಶೇ 10ಕ್ಕೂ ಅಧಿಕ ಪಾಲನ್ನು ತಂತ್ರಜ್ಞಾನದ ಮೇಲೆ ವೆಚ್ಚ ಮಾಡುತ್ತಿವೆ. ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿರುವುದು ಹಾಗೂ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಈ ಉದ್ದಿಮೆಗಳು ಯಶಸ್ವಿ ಆಗುತ್ತಿರುವುದೇ ತಂತ್ರಜ್ಞಾನ ಅಳವಡಿಕೆಗೆ ಪ‍್ರಮುಖ ಕಾರಣಗಳಾಗಿವೆ ಎಂದು ಅದು ಹೇಳಿದೆ.

ಭಾರತವನ್ನೂ ಒಳಗೊಂಡು 10 ಮಾರುಕಟ್ಟೆಗಳಲ್ಲಿ 3 ಸಾವಿರಕ್ಕೂ ಅಧಿಕ ಉದ್ದಿಮೆಗಳ ಅಭಿಪ್ರಾಯ ಪ‍ಡೆದು ಕಂಪನಿಯು ಈ ವರದಿ ನೀಡಿದೆ.

ಶೇ 26ರಷ್ಟು ಎಸ್‌ಎಂಬಿಗಳು ಹೊಸ ತಂತ್ರಜ್ಞಾನ ಅಳವಡಿಕೆಗೆ ಮುಂದಾಗಿವೆ. ಕ್ಲೌಡ್‌ ತಂತ್ರಜ್ಞಾನ ಅಳವಡಿಕೆಗೆ ಭಾರತದ ಕಂಪನಿಗಳು ಹೆಚ್ಚು ಆಶಾವಾದಿಯಾಗಿವೆ. ಎರಡರಿಂದ ಮೂರು ವರ್ಷಗಳಲ್ಲಿ ಶೇ 27ರಷ್ಟು ಎಸ್‌ಎಂಬಿಗಳು ಬಹುತೇಕ ಅಥವಾ ಪೂರ್ಣ ಪ್ರಮಾಣದಲ್ಲಿ ಕ್ಲೌಡ್‌ ಆಧಾರಿತವಾಗಿರಲಿವೆ. ಪೈಪೋಟಿ ತೀವ್ರಗೊಂಡಿರುವುದೇ ಭಾರತದ ಎಸ್‌ಎಂಬಿಗಳ ಬೆಳವಣಿಗೆಗೆ ದೊಡ್ಡ ಅಡಚಣೆಯಾಗಿದೆ ಎಂದು ಅದು ತಿಳಿಸಿದೆ.

ತಂತ್ರಜ್ಞಾನ ಅಳವಡಿಕೆ ಮತ್ತು ಅದರ ಮೇಲಿನ ಹೂಡಿಕೆಯು ಎಸ್‌ಎಂಬಿಗಳ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ತಂತ್ರಜ್ಞನ ಅಳವಡಿಕೆಯು ಭವಿಷ್ಯದ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿ ಇರಲು ಸಹಾಯಕವಾಗಲಿದೆ ಎಂದು ಮೈಕ್ರೊಸಾಫ್ಟ್‌ ಇಂಡಿಯಾದ ಕಾರ್ಪೊರೇಟ್‌ ಮತ್ತು ಸಣ್ಣ ವ್ಯಾಪಾರ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಸಮಿಕ್ ರಾಯ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT