ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಥೆನಾಲ್‌ ಎಂಜಿನ್‌ ವಾಹನ: ಟೊಯೋಟ, ಮಾರುತಿ, ಹುಂಡೈ ಭರವಸೆ ನೀಡಿವೆ ಎಂದ ಗಡ್ಕರಿ

Last Updated 20 ಮಾರ್ಚ್ 2022, 15:10 IST
ಅಕ್ಷರ ಗಾತ್ರ

ನವದೆಹಲಿ: ಸಂಪೂರ್ಣವಾಗಿ ಎಥೆನಾಲ್ ಅಥವಾ ಪೆಟ್ರೋಲ್‌ ಬಳಸಬಹುದಾದ ಎಂಜಿನ್‌ ಇರುವ ವಾಹನಗಳನ್ನು ಆರು ತಿಂಗಳಲ್ಲಿ ಮಾರುಕಟ್ಟೆಗೆ ತರುವುದಾಗಿ ಟೊಯೋಟ, ಮಾರುತಿ ಸುಜುಕಿ ಮತ್ತು ಹುಂಡೈ ಕಂಪನಿಗಳು ಭರವಸೆ ನೀಡಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಭಾನುವಾರ ತಿಳಿಸಿದ್ದಾರೆ.

ಸಕ್ಕರೆ ಮತ್ತು ಎಥೆನಾಲ್‌ ಕುರಿತು ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಇಂಧನ ವೆಚ್ಚ ಕಡಿಮೆ ಮಾಡುವ ಸಲುವಾಗಿ ವಿಮಾನಯಾನ ವಲಯದಲ್ಲಿಯೂ ಎಥೆನಾಲ್ ಬಳಸುವ ಬಗ್ಗೆ ಕೇಂದ್ರ ಸರ್ಕಾರ ಆಲೋಚನೆ ನಡೆಸುತ್ತಿದೆ ಎಂದು ಹೇಳಿದ್ದಾರೆ.

ಸಕ್ಕರೆ ಉತ್ಪಾದನೆಯನ್ನು ಕಡಿಮೆ ಮಾಡುವ ಮೂಲಕ ಎಥೆನಾಲ್‌ ಉತ್ಪಾದನೆ ಹೆಚ್ಚಿಸುವಂತೆ ಅವರು ಕಾರ್ಖಾನೆಗಳಿಗೆ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT