ಮುಂಬೈ (ಪಿಟಿಐ): ಭಾರತದ ವಿದೇಶಿ ವಿನಿಮಯ ಮೀಸಲು ಸಂಗ್ರಹವು ಜುಲೈ 14ಕ್ಕೆ ಕೊನೆಗೊಂಡ ವಾರದಲ್ಲಿ ₹1.04 ಲಕ್ಷ ಕೋಟಿಯಷ್ಟು ಏರಿಕೆ ಕಂಡಿದ್ದು, ಒಟ್ಟು ಮೀಸಲು ಸಂಗ್ರಹವು ₹49.93 ಲಕ್ಷ ಕೋಟಿಗೆ ತಲುಪಿದೆ. ಈಚಿನ ದಿನಗಳಲ್ಲಿ ವಾರದ ವಹಿವಾಟಿನೊಂದರಲ್ಲಿ ಅಗಿರುವ ಗರಿಷ್ಠ ಏರಿಕೆ ಇದಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶುಕ್ರವಾರ ಈ ಮಾಹಿತಿ ಬಿಡುಗಡೆ ಮಾಡಿದೆ. ಜುಲೈ 7ಕ್ಕೆ ಕೊನೆಗೊಂಡ ವಾರದಲ್ಲಿ ಮೀಸಲು ಸಂಗ್ರಹ ₹48.89 ಲಕ್ಷ ಕೋಟಿಯಷ್ಟು ಇತ್ತು.
ಮೀಸಲು ಸಂಗ್ರಹದಲ್ಲಿ ಅತಿ ಹೆಚ್ಚಿನ ಪಾಲು ಹೊಂದಿರುವ ವಿದೇಶಿ ಕರೆನ್ಸಿಗಳ ಸಂಗ್ರಹವು ಜುಲೈ 14ಕ್ಕೆ ಕೊನೆಗೊಂಡ ವಾರದಲ್ಲಿ ₹91,758 ಕೋಟಿ ಏರಿಕೆ ಕಂಡು ₹44.29 ಲಕ್ಷ ಕೋಟಿಗೆ ತಲುಪಿದೆ. ಇದರಿಂದಾಗಿ ಒಟ್ಟು ಮೀಸಲು ಸಂಗ್ರಹದಲ್ಲಿ ಏರಿಕೆ ಕಾಣುವಂತಾಯಿತು.
ಚಿನ್ನದ ಮೀಸಲು ಸಂಗ್ರಹವು ₹9,266 ಕೋಟಿ ಹೆಚ್ಚಾಗಿ ₹3.70 ಲಕ್ಷ ಕೋಟಿಗೆ ಏರಿಕೆ ಕಂಡಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿನ (ಐಎಂಎಫ್) ಭಾರತದ ಮೀಸಲು ಸಂಘ್ರಹವು ₹1,295 ಕೋಟಿಯಷ್ಟು ಹೆಚ್ಚಾಗಿ ₹42,394 ಕೋಟಿಗೆ ತಲುಪಿದೆ ಎಂದು ಆರ್‌ಬಿಐ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.