ಮಂಗಳವಾರ, ಮಾರ್ಚ್ 21, 2023
29 °C

ಜೂನ್‌ನಲ್ಲಿ ತಾಳೆ ಎಣ್ಣೆ ಆಮದು ಶೇ 24ರಷ್ಟು ಇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ತಾಳೆ ಎಣ್ಣೆ ಆಮದು ಮೇ ತಿಂಗಳಿಗೆ ಹೋಲಿಸಿದರೆ ಜೂನ್‌ನಲ್ಲಿ ಶೇಕಡ 24ರಷ್ಟು ಇಳಿಕೆ ಆಗಿದ್ದು 5.87 ಲಕ್ಷ ಟನ್‌ಗಳಷ್ಟಾಗಿದೆ ಎಂದು ಸಾಲ್ವೆಂಟ್‌ ಎಕ್ಸ್‌ಟ್ರ್ಯಾಕ್ಟರ್ಸ್‌ ಅಸೋಸಿಯೇಷನ್‌ (ಎಸ್‌ಇಎ) ತಿಳಿಸಿದೆ.

ದೇಶಿ ಮಾರುಕಟ್ಟೆಯಲ್ಲಿ ತಾಳೆ ಎಣ್ಣೆಯ ದಾಸ್ತಾನು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಆಮದು ಕಡಿಮೆ ಆಗಿದೆ ಎಂದು ಅದು ಹೇಳಿದೆ. ಮೇ ತಿಂಗಳಿನಲ್ಲಿ ಭಾರತವು 7.69 ಲಕ್ಷ ಟನ್‌ಗಳಷ್ಟು ತಾಳೆ ಎಣ್ಣೆ ಆಮದು ಮಾಡಿಕೊಂಡಿತ್ತು.

ಕಚ್ಚಾ ತಾಳೆ ಎಣ್ಣೆ ಮತ್ತು ಇತರೆ ತಾಳೆ ಎಣ್ಣೆಗಳ ಮೇಲಿನ ಆಮದು ಸುಂಕವನ್ನು ಸೆಪ್ಟೆಂಬರ್‌ವರೆಗೆ ತಗ್ಗಿಸಿರುವುದು ಹಾಗೂ ಡಿಸೆಂಬರ್‌ವರೆಗೆ ಯಾವುದೇ ನಿರ್ಬಂಧ ಇಲ್ಲದೇ ಆರ್‌ಬಿಡಿ ತಾಳೆ ಎಣ್ಣೆ ಆಮದಿಗೆ ಅವಕಾಶ ನೀಡಿರುವುದು ದೇಶಿ ಸಂಸ್ಕರಣಗಾರರು ಮತ್ತು ಎಣ್ಣೆಕಾಳುಗಳಗಳನ್ನು ಬೆಳೆಯುವವರ ಹಿತಾಸಕ್ತಿಗೆ ಹಾನಿ ಉಂಟುಮಾಡಲಿದೆ ಎನ್ನುವ ಆತಂಕವನ್ನು ಅದು ವ್ಯಕ್ತಪಡಿಸಿದೆ.

ಕಚ್ಚಾ ತಾಳೆ ಎಣ್ಣೆ ಆಮದು 5.76 ಲಕ್ಷ ಟನ್‌ಗಳಷ್ಟಾಗಿದೆ. ಹಿಂದಿನ ವರ್ಷದ ಜೂನ್‌ನಲ್ಲಿ 5.63 ಲಕ್ಷ ಟನ್‌ಗಳಷ್ಟಿತ್ತು. ಸೋಯಾಬಿನ್‌ ಎಣ್ಣೆ ಆಮದು 3,31,171 ಟನ್‌ಗಳಿಂದ 2,06,262 ಟನ್‌ಗಳಿಗೆ ಇಳಿಕೆ ಆಗಿದೆ. ಸೂರ್ಯಕಾಂತಿ ಎಣ್ಣೆ ಆಮದು 2,69,428 ಟನ್‌ಗಳಿಂದ 1,75,702 ಟನ್‌ಗಳಿಗೆ ಇಳಿಕೆ ಕಂಡಿದೆ. ಭಾರತವು ಇಂಡೊನೇಷ್ಯಾ ಮತ್ತು ಮಲೇಷ್ಯಾದಿಂದ ತಾಳೆ ಎಣ್ಣೆ ಆಮದು ಮಾಡಿಕೊಳ್ಳುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು