ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಐಎಲ್‌ : ₹ 53 ಸಾವಿರ ಕೋಟಿ ಮೊತ್ತದ ಹಕ್ಕಿನ ಷೇರು

Last Updated 30 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ನವದೆಹಲಿ: ತೈಲದಿಂದ ಮೊಬೈಲ್‌ವರೆಗೆ ವೈವಿಧ್ಯಮಯ ವಹಿವಾಟು ನಡೆಸುವ ಕೋಟ್ಯಧಿಪತಿ ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಇಂಡಸ್ಟ್ರೀಸ್‌ (ಆರ್‌ಐಎಲ್‌) ಹಕ್ಕಿನ ಷೇರುಗಳ ಮೂಲಕ ₹ 53,125 ಕೋಟಿ ಸಂಗ್ರಹಿಸಲು ಮುಂದಾಗಿದೆ.

ಕಂಪನಿಯ ಹಾಲಿ ಷೇರುದಾರರಿಗೆ ಹಕ್ಕಿನ ಷೇರುಗಳನ್ನು ನೀಡಿ ಈ ಮೊತ್ತ ಸಂಗ್ರಹಿಸಲು ಉದ್ದೇಶಿಸಲಾಗಿದೆ. ಕಂಪನಿಯನ್ನು ಸಾಲದಿಂದ ಮುಕ್ತಗೊಳಿಸುವ ಯೋಜನೆಯ ಅಂಗವಾಗಿ ಈ ಕ್ರಮಕ್ಕೆ ಮುಂದಾಗಿದೆ. ಪ್ರತಿ 15 ಷೇರಿಗೆ ಒಂದು ಹಕ್ಕಿನ ಷೇರಿನ ರೂಪದಲ್ಲಿ (1;15) ಪ್ರತಿ ಒಂದು ಷೇರನ್ನು ₹ 1,257ರ ದರದಲ್ಲಿ ಮಾರಾಟ ಮಾಡಲು ಉದ್ದೇಶಿಸಲಾಗಿದೆ. ಈ ಬೆಲೆಯು ಗುರುವಾರದ ಷೇರಿನ ಬೆಲೆಗಿಂತ ಶೇ 14ರಷ್ಟು ಕಡಿಮೆ (ಡಿಸ್ಕೌಂಟ್‌) ಇದೆ. ಇದು ದೇಶದ ಅತಿದೊಡ್ಡ ಹಕ್ಕಿನ ಷೇರು ಆಗಿರಲಿದೆ.

ಜಿಯೊ ಪ್ಲಾಟ್‌ಫಾರ್ಮ್ಸ್‌ನ ಶೇ 10ರಷ್ಟು ಪಾಲು ಬಂಡವಾಳವನ್ನು ಫೇಸ್‌ಬುಕ್‌ಗೆ ₹ 43,574 ಕೋಟಿಗೆ ಮಾರಾಟ ಮಾಡಿದ ಬೆನ್ನಲ್ಲೇ ಈ ಹಕ್ಕಿನ ಷೇರು ಪ್ರಕಟಿಸಲಾಗಿದೆ.

ಏನಿದು ಹಕ್ಕಿನ ಷೇರು: ಕಂಪನಿಯೊಂದು ತನ್ನ ಷೇರುದಾರರು ಹೊಂದಿರುವ ಷೇರುಗಳನ್ನು ಆಧರಿಸಿ,ಅನುಪಾತ ರೂಪದಲ್ಲಿ ಅವರಿಗೆ ವಿಶೇಷ ದರಕ್ಕೆ ಷೇರುಗಳನ್ನು ಮಾರಾಟ ಮಾಡಿ ಹಣ ಸಂಗ್ರಹಿಸುವುದಕ್ಕೆ ಹಕ್ಕಿನ ಷೇರು ನೀಡಿಕೆ ಎನ್ನುತ್ತಾರೆ.

₹ 6,348 ಕೋಟಿ ನಿವ್ವಳ ಲಾಭ: 2019–20ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯು ₹ 6,348 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿನ ₹ 10,362 ಕೋಟಿ ಲಾಭಕ್ಕೆ ಹೋಲಿಸಿದರೆ ಈ ಬಾರಿ ಶೇ 38.7ರಷ್ಟು ಕಡಿಮೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT