ಮಂಗಳವಾರ, ಸೆಪ್ಟೆಂಬರ್ 22, 2020
24 °C

ಟಿಸಿಎಸ್‌ ಲಾಭ ಅಲ್ಪ ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಐಟಿ ಸೇವೆಗಳನ್ನು ರಫ್ತು ಮಾಡುವ ಪ್ರಮುಖ ಕಂಪನಿ ಟಾಟಾ ಕನ್ಸಲ್ಟನ್ಸಿ ಸರ್ವೀಸಸ್‌ (ಟಿಸಿಎಸ್‌) ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ₹ 8,042 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ನಿವ್ವಳ ಲಾಭ ₹ 7,901 ಕೋಟಿಗಳಷ್ಟಿತ್ತು. ಇದಕ್ಕೆ ಹೋಲಿಸಿದರೆ ಲಾಭದಲ್ಲಿ ಶೇ 1.8ರಷ್ಟು ಏರಿಕೆಯಾಗಿದೆ.

ಕಂಪನಿಯ ವರಮಾನವು ₹ 36,854 ಕೋಟಿಗಳಿಂದ ₹ 38,977 ಕೋಟಿಗಳಿಗೆ ಶೇ 5.8ರಷ್ಟು ಹೆಚ್ಚಾಗಿದೆ.

ಲಾಭಾಂಶ: ಕಂಪನಿಯ ಆಡಳಿತ ಮಂಡಳಿ ಎರಡನೇ ಬಾರಿಗೆ ಮಧ್ಯಂತರ ಲಾಭಾಂಶವನ್ನು ಪ್ರತಿ ಷೇರಿಗೆ ₹ 5 ಹಾಗೂ ವಿಶೇಷ ಲಾಭಾಂಶ ಪ್ರತಿ ಷೇರಿಗೆ ₹ 40ರಂತೆ ಘೋಷಿಸಿದೆ.

‘ವರ್ಷದ ಆರಂಭದಲ್ಲಿ ನಾವು ನಿರೀಕ್ಷೆ ಮಾಡಿದ್ದಕ್ಕಿಂತಲೂ ಕಡಿಮೆ ಮಟ್ಟದ ಬೆಳವಣಿಗೆ ಇದಾಗಿದೆ’ ಎಂದು ಸಿಇಒ ರಾಜೇಶ್‌ ಗೋಪಿನಾಥನ್‌ ತಿಳಿಸಿದ್ದಾರೆ.

‘ಈ ತ್ರೈಮಾಸಿಕವು ಕಂಪನಿಯ ಮುಂಬರುವ ದಿನಗಳಿಗೆ ಹೊಸ ದಾರಿ ತೋರಿಸಲಿದೆ ಎನ್ನುವ ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ, ಹಾಗಾಗಲಿಲ್ಲ. ಅಂದುಕೊಂಡಿರುವಂತೆ ಎರಡಂಕಿ ಪ್ರಗತಿ ಸಾಧಿಸಲು ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಉತ್ತಮ ಸಾಧನೆ ಮಾಡಬೇಕಾಗಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು