ಶುಕ್ರವಾರ, ಸೆಪ್ಟೆಂಬರ್ 25, 2020
22 °C

ಲಾಕ್‌ಡೌನ್‌ ಪರಿಣಾಮ: ತೈಲ ಬೇಡಿಕೆ ಇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಪೆಟ್ರೋಲ್‌ ಬಂಕ್‌ವೊಂದರ ದೃಶ್ಯ– ಸಾಂದರ್ಭಿಕ ಚಿತ್ರ

ನವದೆಹಲಿ: ಮೇ ಮತ್ತು ಜೂನ್‌ನಲ್ಲಿ ಚೇತರಿಕೆ ಕಂಡಿದ್ದ ದೇಶದ ಇಂಧನ ಬೇಡಿಕೆ ಜುಲೈನಲ್ಲಿ ಮತ್ತೆ ಇಳಿಕೆಯಾಗಿದೆ. ಜುಲೈನಲ್ಲಿ 1.56 ಕೋಟಿ ಟನ್‌ ಇಂಧನ ಬಳಕೆಯಾಗಿದೆ. ಜೂನ್‌ಗೆ ಹೋಲಿಸಿದರೆ ಇದು ಶೇಕಡ 3.5ರಷ್ಟು ಕಡಿಮೆ. 2019ರ ಜುಲೈಗೆ ಹೋಲಿಸಿದರೆ ಇಂಧನ ಬಳಕೆ ಪ್ರಮಾಣ ಶೇ 11.7ರಷ್ಟು ಇಳಿಕೆಯಾಗಿದೆ ಎಂದು ಪೆಟ್ರೋಲಿಯಂ ಪ್ಲಾನಿಂಗ್‌ ಆ್ಯಂಡ್ ಅನಲಿಸಿಸ್‌ ಸೆಲ್‌ (ಪಿಪಿಎಸಿ) ಮಾಹಿತಿ ನೀಡಿದೆ. 

ಲಾಕ್‌ಡೌನ್‌ನಿಂದಾಗಿ ವಾಹನಗಳ ಸಂಚಾರಕ್ಕೆ ಕಡಿವಾಣ ಬಿದ್ದಿತ್ತು. ಕೈಗಾರಿಕಾ ಚಟುವಟಿಕೆಗಳೂ ತಾತ್ಕಾಲಿವಾಗಿ ಸ್ಥಗಿತಗೊಂಡಿದ್ದವು. ಇದರ ಪರಿಣಾಮವಾಗಿ ಏಪ್ರಿಲ್‌ನಲ್ಲಿ ಇಂಧನ ಬಳಕೆ ಶೇ 45ರಷ್ಟು ಇಳಿಕೆಯಾಗಿತ್ತು.

ಲಾಕ್‌ಡೌನ್‌ ನಿಯಮಗಳನ್ನು ಸಡಿಲಿಸಲು ಆರಂಭಿಸಿದ ಬಳಿಕ ಮೇ ಮತ್ತು ಜೂನ್‌ನಲ್ಲಿ ಇಂಧನ ಬಳಕೆ ತುಸು ಹೆಚ್ಚಾಗಿತ್ತು. ಆದರೆ, ಕೋವಿಡ್–19‌ ಪ್ರಕರಣಗಳು ಹೆಚ್ಚುತ್ತಿರುವುದನ್ನು ನಿಯಂತ್ರಿಸಲು ಸ್ಥಳೀಯವಾಗಿ, ಅಲ್ಲಲ್ಲಿ ಲಾಕ್‌ಡೌನ್‌ ಜಾರಿಗೊಳಿಸಲಾಯಿತು. ಇದು ಇಂಧನ ಬಳಕೆ ಮತ್ತೆ ಕಡಿಮೆ ಆಗುವಂತೆ ಮಾಡಿತು.

ರಿಟೇಲ್‌ ಮಾರಾಟ ದರ ಗರಿಷ್ಠ ಮಟ್ಟದಲ್ಲಿ ಇರುವುದು ಸಹ ಬೇಡಿಕೆ ಕಡಿಮೆ ಆಗಲು ಕಾರಣ. ಕೆಲವು ರಾಜ್ಯಗಳಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಕೆಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕೈಗಾರಿಕೆ ಮತ್ತು ನಿರ್ಮಾಣ ಚಟುವಟಿಕೆಗಳು ಸ್ಥಗಿತಗೊಂಡಿವೆ.

ಡೀಸೆಲ್‌: ಡೀಸೆಲ್‌ ಬೇಡಿಕೆಯು 2019ರ ಜುಲೈಗೆ ಹೋಲಿಸಿದರೆ ಶೇ 19.25ರಷ್ಟು ಇಳಿಕೆಯಾಗಿದೆ. ಪೆಟ್ರೋಲ್‌ ಬೇಡಿಕೆ ಸಹ ಶೇ 10.3ರಷ್ಟು ತಗ್ಗಿದೆ.

ಬೇಡಿಕೆ ವಿವರ

ಏಪ್ರಿಲ್‌;99 ಲಕ್ಷ ಟನ್‌

ಮೇ; 1.46 ಕೋಟಿ ಟನ್‌

ಜೂನ್‌;1.62 ಕೋಟಿ ಟನ್

ಜುಲೈ; 1.56 ಕೋಟಿ ಟನ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು