ನವದೆಹಲಿ: ದೇಶದ ಅತಿದೊಡ್ಡ ವಿಮಾನಯಾನ ಕಂಪನಿ ಇಂಡಿಗೊ, ವಿಲಿಯಂ ವಾಲ್ಷ್ ಅವರನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ (ಸಿಇಒ) ನೇಮಿಸಿದೆ.

ಇಂಟರ್ಗ್ಲೋಬ್ ಏವಿಯೇಷನ್ ಆಡಳಿತ ಮಂಡಳಿಯು ವಾಲ್ಷ್ ಅವರ ನೇಮಕಕ್ಕೆ ಅನುಮೋದನೆ ನೀಡಿದೆ.

ಪೈಲಟ್ ಕೂಡ ಆಗಿರುವ ವಾಲ್ಷ್ ಅವರು ಪ್ರಸ್ತುತ ಅಂತರರಾಷ್ಟ್ರೀಯ ವಾಯುಸಾರಿಗೆ ಒಕ್ಕೂಟದ (ಐಎಟಿಎ) ಮುಖ್ಯಸ್ಥರಾಗಿದ್ದಾರೆ. ಐಎಟಿಎಯಲ್ಲಿ ಅವರ ಅಧಿಕಾರಾವಧಿ ಜುಲೈ 31ರಂದು ಮುಕ್ತಾಯಗೊಳ್ಳಲಿದ್ದು, ಆಗಸ್ಟ್ 3ರ ನಂತರ ಕಂಪನಿಗೆ ಸೇರುವ ನಿರೀಕ್ಷೆಯಿದೆ ಎಂದು ಇಂಡಿಗೊ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ವರ್ಷ ಡಿಸೆಂಬರ್ನಲ್ಲಿ ಕಂಪನಿಯ ವಿಮಾನಗಳ ಕಾರ್ಯಾಚರಣೆಯಲ್ಲಿ ಭಾರಿ ಅಡಚಣೆ ಉಂಟಾಗಿತ್ತು. ಆ ಬಳಿಕ ಇಂಡಿಗೊ ಸಿಇಒ ಆಗಿದ್ದ ಪೀಟರ್ ಎಲ್ಬರ್ಟ್ ಅವರು ರಾಜೀನಾಮೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.