ನವದೆಹಲಿ (ಪಿಟಿಐ): ದೇಶದ ವಿಮಾನಯಾನ ಕಂಪನಿ ಇಂಡಿಗೊ, ದೇಶ ಮತ್ತು ಅಂತರರಾಷ್ಟ್ರೀಯ ವಿಮಾನದ ಟಿಕೆಟ್ಗಳ ಮೇಲೆ ಇಂಧನ ಶುಲ್ಕವಾಗಿ ₹425ರಿಂದ ₹2,300ರವರೆಗೆ ವಿಧಿಸಿದೆ. ಈ ಶುಲ್ಕವು ಶನಿವಾರದಿಂದಲೇ ಜಾರಿಗೆ ಬರಲಿದೆ.

ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಸಂಘರ್ಷದಿಂದ ವಿಮಾನ ಇಂಧನ ದರದಲ್ಲಿ ಏರಿಕೆಯಾಗಿದೆ. ಹೀಗಾಗಿ ಇಂಧನ ಶುಲ್ಕ ವಿಧಿಸಲಾಗುತ್ತಿದೆ ಎಂದು ಕಂಪನಿ ಶುಕ್ರವಾರ ತಿಳಿಸಿದೆ.

ದೇಶಿ ವಾಯು ಮಾರ್ಗಗಳಲ್ಲಿ ಸಂಚರಿಸುವ ಇಂಡಿಗೊ ವಿಮಾನಗಳಿಗೆ ಇಂಧನ ಶುಲ್ಕವಾಗಿ ₹425 ವಿಧಿಸಲಾಗುವುದು. ಮಧ್ಯ ಏಷ್ಯಾಕ್ಕೆ ಪ್ರಯಾಣಿಸುವ ಇಂಡಿಗೊದ ವಿಮಾನದ ಟಿಕೆಟ್ ಬೆಲೆಯಲ್ಲಿ ₹900 ಹೆಚ್ಚಳ ಮಾಡಲಾಗಿದೆ.

ಆಗ್ನೇಯ ಏಷ್ಯಾ ಮತ್ತು ಚೀನಾ, ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾಕ್ಕೆ ₹1,800 ಮತ್ತು ಯುರೋಪ್ಗೆ ಪ್ರಯಾಣಿಸುವ ಇಂಡಿಗೊ ವಿಮಾನಗಳ ಟಿಕೆಟ್ ಮೇಲೆ ₹2,300 ಇಂಧನ ಶುಲ್ಕ ವಿಧಿಸಲಾಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.