ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯದಲ್ಲಿ ತಯಾರಿಕಾ ಘಟಕ ಸ್ಥಾಪನೆಗೆ ₹25 ಕೋಟಿ : ಇಂದಿರಾ ಫುಡ್ಸ್‌

ನಟ ನೀನಾಸಂ ಸತೀಶ್ ಬ್ರ್ಯಾಂಡ್ ರಾಯಭಾರಿಯಾಗಿ ನೇಮಕ
Published : 9 ನವೆಂಬರ್ 2023, 15:53 IST
Last Updated : 9 ನವೆಂಬರ್ 2023, 15:53 IST
ಫಾಲೋ ಮಾಡಿ
Comments

ಬೆಂಗಳೂರು: ರಾಗಿ ಉತ್ಪನ್ನಗಳಿಂದ ಜನಪ್ರಿಯತೆ ಗಳಿಸಿಕೊಂಡಿರುವ ದೇಶಿ ಕಂಪನಿ ಇಂದಿರಾ ಫುಡ್ಸ್, ರಾಜ್ಯದಲ್ಲಿ ತನ್ನ ವಹಿವಾಟು ವಿಸ್ತರಣೆಗೆ ಮುಂದಾಗಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ 1.2 ಲಕ್ಷ ಚದರ ಅಡಿಯಲ್ಲಿ ತಯಾರಿಕಾ ಘಟಕ ಸ್ಥಾಪನೆಗೆ ₹ 25 ಕೋಟಿ ಹೂಡಿಕೆ ಮಾಡುವುದಾಗಿ ಗುರುವಾರ ತಿಳಿಸಿದೆ. 

ಬೆಂಗಳೂರಿನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂಪನಿಯ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ಇಂದಿರಾ ಅವರು, ‘ಹೊಸ ತಂತ್ರಜ್ಞಾನಗಳು ಮತ್ತು ಹೊಸ ಉತ್ಪಾದನಾ ವೈಶಿಷ್ಟ್ಯಗಳು, ಆರೋಗ್ಯಕರ ಮತ್ತು ರುಚಿಕರವಾದ ಖಾದ್ಯಗಳೊಂದಿಗೆ, ಹೊಸ ಪೀಳಿಗೆಗೆ ಹೊಂದಿಕೊಳ್ಳುವ ಉತ್ಪನ್ನಗಳನ್ನು ನೀಡುವ ಖಾತರಿ ನೀಡುತ್ತೇವೆ.  ಗುಣಮಟ್ಟ ಮತ್ತು ಸ್ವಾಸ್ಥ್ಯದ ಹಳೆಯ ಸ್ಪರ್ಶದೊಂದಿಗೆ ಆಧುನಿಕ ದಿನದ ಅಗತ್ಯಗಳಿಗೆ ನಾವು ಆಧುನಿಕ ಉತ್ತರವಾಗಿದ್ದೇವೆ. ಇದು ಇಂದಿನ ಅಗತ್ಯವಾಗಿದೆ’ ಎಂದು ಹೇಳಿದರು.

‘ಕಳೆದ ಹಣಕಾಸು ವರ್ಷದಲ್ಲಿ ₹45 ಕೋಟಿ ಮೊತ್ತದ ಮಾರಾಟ ನಡೆಸಲಾಗಿದೆ. ಇಂದಿರಾ ಫುಡ್ಸ್ 250 ಜನರಿಗೆ ಉದ್ಯೋಗ ನೀಡಿದೆ. ವಿಸ್ತರಣಾ ಯೋಜನೆಗಳ ಭಾಗವಾಗಿ ಮುಂದಿನ 1 ವರ್ಷದಲ್ಲಿ ಇನ್ನೂ 100 ಜನರಿಗೆ ಉದ್ಯೋಗ ನಿಡುವ ಗುರಿಯನ್ನು ಹೊಂಡಿದೆ ಎಂದು ಕಂಪನಿಯ ನಿರ್ದೇಶಕ ವಿಜಯ್‌ ಸಿ. ಮಾಹಿತಿ ನೀಡಿದರು.

ಇಂದಿರಾ ಫುಡ್ಸ್‌ನಿಂದ ರಸಂ ಪೇಸ್ಟ್ ಬಿಡುಗಡೆ ಮಾಡಿದ್ದೇವೆ. ಸದ ಮಾರುಕಟ್ಟೆಯಲ್ಲಿ ರಸಂ ಪುಡಿ ಮಾತ್ರ ಲಭ್ಯವಿದೆ. ಈ ಹೊಸ ಉತ್ಪನ್ನವು ನಮ್ಮ ಮಾರುಕಟ್ಟೆಯನ್ನು ಇನ್ನಷ್ಟು ವಿಸ್ತರಿಸಲಿದೆ ಎಂದು ಅವರು ಹೇಳಿದರು.

ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘದ (ಫಿಕ್ಕಿ) ಕರ್ನಾಟಕ ಮಂಡಳಿ ಅಧ್ಯಕ್ಷ ಕೆ. ಉಲ್ಲಾಸ್ ಕಾಮತ್ ಅವರು ಕಂಪನಿಯ ಸಲಹೆಗಾರರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT