ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಳೆ ಎಣ್ಣೆ ರಫ್ತು ನಿಷೇಧ ತೆರವುಗೊಳಿಸಲು ಇಂಡೋನೇಷ್ಯಾ ನಿರ್ಧಾರ

Last Updated 19 ಮೇ 2022, 20:20 IST
ಅಕ್ಷರ ಗಾತ್ರ

ಜಕಾರ್ತಾ: ತಾಳೆ ಎಣ್ಣೆ ರಫ್ತು ನಿಷೇಧವನ್ನು ಇಂಡೊನೇಷ್ಯಾ ಸರ್ಕಾರವು ಸೋಮವಾರದಿಂದ (ಮೇ 23) ತೆರವುಗೊಳಿಸಲಿದೆ ಎಂದು ಅಧ್ಯಕ್ಷ ಜೊಕೊ ವಿಡೊಡೊ ಗುರುವಾರ ಹೇಳಿದ್ದಾರೆ. ಇದರಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆ ತುಸು ತಗ್ಗುವ ನಿರೀಕ್ಷೆ ಇದೆ.

ಆಂತರಿಕ ಮಾರುಕಟ್ಟೆಯಲ್ಲಿ ಎದುರಾದ ಕೊರತೆಯನ್ನು ಸರಿದೂಗಿಸುವ ಉದ್ದೇಶದಿಂದ ಇಂಡೊನೇಷ್ಯಾ ಹಿಂದಿನ ತಿಂಗಳು ತಾಳೆ ಎಣ್ಣೆ ರಫ್ತು ನಿಷೇಧಿಸಿತ್ತು. ಈ ತೀರ್ಮಾನದ ಮೂಲಕ ತಾಳೆ ಎಣ್ಣೆ ಬೆಲೆ ಮತ್ತಷ್ಟು ಏರಲು ಇಂಡೊನೇಷ್ಯಾ ಸರ್ಕಾರ ಕಾರಣವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

ನಿಷೇಧದ ನಂತರ ತಾಳೆ ಹಣ್ಣಿನ ಬೆಲೆಯು ದೇಶಿ ಮಾರುಕಟ್ಟೆಯಲ್ಲಿ ಕುಸಿದಿದೆ ಎಂದು ತಾಳೆ ಎಣ್ಣೆ ಉತ್ಪಾದಕರು ಜಕಾರ್ತಾ ಮತ್ತು ಇಂಡೊನೇಷ್ಯಾದ ಹಲವು ಪಟ್ಟಣಗಳಲ್ಲಿ ಈಚೆಗೆ ಪ್ರತಿಭಟನೆ ನಡೆಸಿದ್ದರು. ಭಾರತ, ಚೀನಾ, ಐರೋಪ್ಯ ಒಕ್ಕೂಟ ಮತ್ತು ಪಾಕಿಸ್ತಾನವು ಇಂಡೊನೇಷ್ಯಾದ ತಾಳೆ ಎಣ್ಣೆಗೆ ಪ್ರಮುಖ ಮಾರುಕಟ್ಟೆಗಳು.

ಬೆಂಗಳೂರು ವರದಿ: ಸಗಟು ಮಾರುಕಟ್ಟೆಯಲ್ಲಿ ತಾಳೆ ಎಣ್ಣೆ ಬೆಲೆಯು ಈಗ ತುಸು ಕಡಿಮೆ ಆಗುತ್ತಿದೆ ಎಂದು ಉದ್ಯಮದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. ನಿಷೇಧ ತೆರವಾದ ಬಳಿಕ ತಾಳೆ ಎಣ್ಣೆ ಬೆಲೆಯು ರಾಜ್ಯದ ಚಿಲ್ಲರೆ ಮಾರುಕಟ್ಟೆಯಲ್ಲಿ ಲೀಟರ್‌ಗೆ ₹ 162–165ರ ಆಸುಪಾಸಿಗೆ ಬರಬಹುದು ಎಂದು ತಿಳಿಸಿವೆ.

ಇಂಡೊನೇಷ್ಯಾದಿಂದ ಆಮದು ಚೆನ್ನಾಗಿ ಆದರೆ ತಾಳೆ ಎಣ್ಣೆ ಬೆಲೆಯು ಇನ್ನಷ್ಟು ಕಡಿಮೆ ಆಗುವ ನಿರೀಕ್ಷೆ ಇದೆ. ಸೂರ್ಯಕಾಂತಿ ಎಣ್ಣೆಯ ಬೆಲೆ ಕೂಡ ತುಸು ಇಳಿಕೆ ಕಾಣುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT