ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕಾ ಉತ್ಪಾದನೆ 8 ತಿಂಗಳ ಗರಿಷ್ಠ

Last Updated 12 ಡಿಸೆಂಬರ್ 2020, 15:32 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಕೈಗಾರಿಕಾ ವಲಯವು ಸತತ ಎರಡನೇ ತಿಂಗಳಿನಲ್ಲಿ ಚೇತರಿಕೆ ಕಂಡಿದೆ.

ಕೈಗಾರಿಕಾ ಉತ್ಪಾದನೆಯು ಅಕ್ಟೋಬರ್‌ನಲ್ಲಿ 8 ತಿಂಗಳ ಗರಿಷ್ಠ ಮಟ್ಟವಾದ ಶೇ 3.6ಕ್ಕೆ ಏರಿಕೆ ಕಂಡಿದೆ. ತಯಾರಿಕೆ, ಗ್ರಾಹಕ ಬಳಕೆ ವಸ್ತುಗಳು ಹಾಗೂ ವಿದ್ಯುತ್‌ ವಲಯದ ಚೇತರಿಕೆಯಿಂದ ಈ ಬೆಳವಣಿಗೆ ಸಾಧ್ಯವಾಗಿದೆ.

2019ರ ಅಕ್ಟೋಬರ್‌ನಲ್ಲಿ ಕೈಗಾರಿಕಾ ಉತ್ಪಾದನೆ ಸೂಚ್ಯಂಕ (ಐಐಪಿ) ಶೇ 6.6ರಷ್ಟು ಇಳಿಕೆ ಕಂಡಿತ್ತು.

2020ರ ಫೆಬ್ರುವರಿಯಲ್ಲಿ ಐಐಪಿ ಶೇ 5.2ರಷ್ಟು ಬೆಳವಣಿಗೆ ಕಂಡಿತ್ತು. ಆ ಬಳಿಕ ಆಗಸ್ಟ್‌ವರೆಗೂ ನಕಾರಾತ್ಮಕ ಬೆಳವಣಿಗೆ ಕಂಡಿತ್ತು. ಸೆಪ್ಟೆಂಬರ್‌ನಲ್ಲಿ ಶೇ 0.2ರಷ್ಟು ಸಕಾರಾತ್ಮಕ ಬೆಳವಣಿಗೆ ಕಂಡಿತ್ತು ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT