ಸೋಮವಾರ, ಆಗಸ್ಟ್ 19, 2019
21 °C

ಕೈಗಾರಿಕಾ ಪ್ರಗತಿ 4 ತಿಂಗಳ ಕನಿಷ್ಠ

Published:
Updated:

ನವದೆಹಲಿ: ದೇಶದ ಕೈಗಾರಿಕಾ ವಲಯದ ಪ್ರಗತಿಯು ಜೂನ್‌ನಲ್ಲಿ ಶೇ 2ರಷ್ಟಾಗಿದ್ದು, ನಾಲ್ಕು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ.

ಗಣಿಗಾರಿಕೆ ಮತ್ತು ತಯಾರಿಕಾ ವಲಯದ ಪ್ರಗತಿಯು ಮಂದಗತಿಯಲ್ಲಿದೆ. ಇದರಿಂದ ಒಟ್ಟಾರೆ ಪ್ರಗತಿಯ ಮೇಲೆ ಪರಿಣಾಮ ಬೀರಿದೆ ಎಂದು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಮಾಹಿತಿ ನೀಡಿದೆ.

ಕೈಗಾರಿಕಾ ತಯಾರಿಕಾ ಸೂಚ್ಯಂಕದ (ಐಐಪಿ) ಮೇಲೆ ಲೆಕ್ಕಹಾಕುವ ಕೈಗಾರಿಕಾ ಪ್ರಗತಿಯು 2018ರ ಜೂನ್‌ನಲ್ಲಿ ಶೇ 7ರಷ್ಟಿತ್ತು. 2019ರ ಮೇನಲ್ಲಿ ಶೇ 4.6ರಷ್ಟಿತ್ತು. ಇದಕ್ಕೆ ಹೋಲಿಸಿದರೂ ಶೇ 2.6ರಷ್ಟು ಇಳಿಕೆಯಾಗಿದೆ.

ಒಟ್ಟಾರೆ 23 ಕೈಗಾರಿಕೆಗಳಲ್ಲಿ 8 ಕೈಗಾರಿಕೆಗಳು ಮಾತ್ರವೇ ಜೂನ್‌ನಲ್ಲಿ ಸಕಾರಾತ್ಮಕ ಪ್ರಗತಿ ಕಂಡಿವೆ. ಏಪ್ರಿಲ್‌–ಜೂನ್‌ ಅವಧಿಯಲ್ಲಿಯೂ ಶೇ 5.1 ರಿಂದ ಶೇ 3.6ಕ್ಕೆ ಇಳಿಕೆ ಕಂಡಿದೆ ಎಂದು ಸಚಿವಾಲಯ ಹೇಳಿದೆ.

Post Comments (+)