ಭಾನುವಾರ, ಸೆಪ್ಟೆಂಬರ್ 20, 2020
23 °C

ಇನ್ಫಿನಿಕ್ಸ್: ಹಾಟ್8 ಸ್ಮಾರ್ಟ್‌ಫೋನ್‌ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪ್ರೀಮಿಯಂ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ ಆಗಿರುವ ಇನ್ಫಿನಿಕ್ಸ್ ಸಂಸ್ಥೆಯು, ಹಾಟ್ 8 (HOT 8) ಹೆಸರಿನ ಹೊಸ ಮೊಬೈಲ್‌ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

4 ಜಿಬಿ ರ್‍ಯಾಮ್‌ ಮತ್ತು 64 ಜಿಬಿ ರೋಮ್‌ ಒಳಗೊಂಡಿರುವ ಈ ಸ್ಮಾರ್ಟ್‌ಫೋನ್‌  6.52 ಇಂಚಿನ ದೊಡ್ಡ ಹೈಡೆಫನಿಷನ್ ಸ್ಕ್ರೀನ್‌   ಹಾಗೂ 5000 ಎಂಎಎಚ್ ಬ್ಯಾಟರಿ ಹೊಂದಿದೆ.

13 ಎಂಪಿ 3 ಹಿಂಬದಿ ಕ್ಯಾಮೆರಾ ಮತ್ತು 8 ಎಂಪಿಯ ಮುಂಭಾಗದ ಕ್ಯಾಮೆರಾ ಜತೆಗೆ ಎಲ್ಇ‌ಡಿ ಫ್ಲ್ಯಾಷ್‌ ಒಳಗೊಂಡಿದೆ. ಈ ಹೊಸ ಸ್ಮಾರ್ಟ್‌ಫೋನ್‌ ಮೂಲ ಬೆಲೆ ₹ 7,999 ಇದೆ. ಆರಂಭಿಕ ಕೊಡುಗೆಯಾಗಿ ಅಕ್ಟೋಬರ್ 30ರವರೆಗೆ ವಿಶೇಷ ದರದಲ್ಲಿ ₹ 6,999 ಖರೀದಿಸಬಹುದು. ಎರಡು ಆಕರ್ಷಕ ಬಣ್ಣಗಳಲ್ಲಿ ಇದು ಲಭ್ಯ ಇದೆ.

‘ಹಲವಾರು ಹೊಸ ಸೌಲಭ್ಯಗಳನ್ನು ಒಳಗೊಂಡಿರುವ ಈ ವಿಶಿಷ್ಟ ಸ್ಮಾರ್ಟ್‌ಫೋನ್‌ ಅನ್ನು ಕೈಗೆಟುಕುವ ದರದಲ್ಲಿ ಬಿಡುಗಡೆ ಮಾಡಲಾಗಿದೆ’ ಎಂದು ಇನ್ಫಿನಿಕ್ಸ್ ಇಂಡಿಯಾ ಸಂಸ್ಥೆಯ ಸಿಇಒ ಅನಿಶ್ ಕಪೂರ್ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು