ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ಇಟಿಎಫ್‌: ಜನವರಿಯಲ್ಲಿ ₹ 625 ಕೋಟಿ ಹೂಡಿಕೆ

Last Updated 10 ಫೆಬ್ರುವರಿ 2021, 16:11 IST
ಅಕ್ಷರ ಗಾತ್ರ

ನವದೆಹಲಿ: ಹೂಡಿಕೆದಾರರು ಜನವರಿಯಲ್ಲಿ ಚಿನ್ನದ ವಿನಿಮಯ ವಹಿವಾಟು ನಿಧಿಗಳಲ್ಲಿ (ಇಟಿಎಫ್‌) ₹ 625 ಕೋಟಿ ಹೂಡಿಕೆ ಮಾಡಿದ್ದಾರೆ. ಹಿಂದಿನ ತಿಂಗಳಿಗೆ ಹೋಲಿಸಿದರೆ ಹೂಡಿಕೆಯಲ್ಲಿ ಶೇಕಡ 45ರಷ್ಟು ಏರಿಕೆ ಆಗಿದೆ.

ಈ ಹೂಡಿಕೆಯಿಂದಾಗಿ ಚಿನ್ನದ ನಿಧಿಗಳ ಸಂಪತ್ತು ಮೌಲ್ಯವು ಶೇ 22ರಷ್ಟು ಹೆಚ್ಚಾಗಿದ್ದು ₹ 14,481 ಕೋಟಿಗೆ ತಲುಪಿದೆ. ಇದು ಡಿಸೆಂಬರ್‌ನಲ್ಲಿ ₹ 14,174 ಕೋಟಿಗಳಷ್ಟಿತ್ತು ಎಂದು ಮ್ಯೂಚುವಲ್ ಫಂಡ್‌ ಕಂಪನಿಗಳ ಒಕ್ಕೂಟ ಮಾಹಿತಿ ನೀಡಿದೆ.

2020ರ ನವೆಂಬರ್‌ನಲ್ಲಿ ಚಿನ್ನದ ಇಟಿಎಫ್‌ಗಳಿಂದ ₹ 141 ಕೋಟಿ ಬಂಡವಾಳವನ್ನು ಹೂಡಿಕೆದಾರರು ಹಿಂದಕ್ಕೆ ಪಡೆದಿದ್ದರು. ಆ ಬಳಿಕ ಡಿಸೆಂಬರ್‌ನಲ್ಲಿ ₹ 431 ಕೋಟಿ ಹೂಡಿಕೆ ಮಾಡಿದ್ದರು.

2019ರಲ್ಲಿ ಚಿನ್ನದ ಇಟಿಎಫ್‌ಗಳಲ್ಲಿ ₹ 16 ಕೋಟಿ ಹೂಡಿಕೆ ಆಗಿತ್ತು. 2020ರಲ್ಲಿ ₹ 6,657 ಕೋಟಿ ಹೂಡಿಕೆ ಆಗಿದೆ. 2019ರ ಜನವರಿಯಿಂದ 2021ರ ಜನವರಿ ಅವಧಿಯಲ್ಲಿ ₹ 48,159 ಕೋಟಿ ಹೂಡಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT