ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ: ಇದೇ 15ರಿಂದ ಜಾರಿ

7

ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ: ಇದೇ 15ರಿಂದ ಜಾರಿ

Published:
Updated:

ನವದೆಹಲಿ: ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಘೋಷಿಸಿರುವ ‘ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್‌ಧನ್‌ ಯೋಜನೆ’ (ಪಿಎಂಎಸ್‌ವೈಎಂ) ಇದೇ 15 ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಅಸಂಘಟಿತ ವಲಯದ 18 ರಿಂದ 40 ವರ್ಷದೊಳಗಿನ ಕಾರ್ಮಿಕರು ಯೋಜನೆಯ ಸದಸ್ಯತ್ವ ಪಡೆಯಬಹುದು. ಯೋಜನೆಗೆ ಸೇರಬಯಸುವವರ ಹೆಸರಿನಲ್ಲಿ ಉಳಿತಾಯ ಖಾತೆ ಮತ್ತು ಆಧಾರ್‌ ಸಂಖ್ಯೆ ಇರಬೇಕು. 60ವರ್ಷದ ಬಳಿಕ ಪ್ರತಿ ತಿಂಗಳು ₹ 3 ಸಾವಿರ ಪಿಂಚಣಿ ಸಿಗಲಿದೆ.

ತಿಂಗಳ ಆದಾಯ ₹ 15 ಸಾವಿರ ಇರುವ ಅಸಂಘಟಿತ ವಲಯದ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಡು 2019–20ರ ಮಧ್ಯಂತರ ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಸಚಿವ ಪೀಯೂಷ್‌ ಗೋಯಲ್‌, ಈ ಯೋಜನೆ ಘೊಷಿಸಿದ್ದಾರೆ.

ಯಾರೆಲ್ಲಾ ಸೇರಿದ್ದಾರೆ:  ಬೀದಿ ಬದಿ ವ್ಯಾಪಾರಿಗಳು, ತಳ್ಳುಗಾಡಿ ಎಳೆಯುವವರು, ಭೂರಹಿತ ಕಾರ್ಮಿಕರು, ಕೃಷಿ ಕಾರ್ಮಿಕರು, ಹಮಾಲಿಗಳು ಇನ್ನೂ ಕೆಲವರು ಯೋಜನೆಯಡಿ ಬರಲಿದ್ದಾರೆ.

ಯಾರಿಗೆ ಇಲ್ಲ: ರಾಷ್ಟ್ರೀಯ ಪಿಂಚಣಿ ಯೋಜನೆ, ಕಾರ್ಮಿಕರ ರಾಜ್ಯ ವಿಮಾ ನಿಗಮ ಅಥವಾ ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆ ಮಾಡಿಸಿದ್ದರೆ ಅಂತಹ ಕಾರ್ಮಿಕರು ಈ ಯೋಜನೆ ವ್ಯಾಪ್ತಿಗೆ ಬರುವುದಿಲ್ಲ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !