ಬದುಕಿನ ಸವಾಲುಗಳಿಗೆ ತಂತ್ರಜ್ಞಾನ ನೆರವು

ಶನಿವಾರ, ಮೇ 25, 2019
22 °C
ಶಾಲಾ ವಿದ್ಯಾರ್ಥಿಗಳಿಗೆ ಇನ್ಫೊಸಿಸ್‌ನ ‘ಸ್ಪಾರ್ಕ್ ಕ್ಯಾಚ್ ದೆಮ್ ಯಂಗ್’

ಬದುಕಿನ ಸವಾಲುಗಳಿಗೆ ತಂತ್ರಜ್ಞಾನ ನೆರವು

Published:
Updated:
Prajavani

ಬೆಂಗಳೂರು: ಇನ್ಫೊಸಿಸ್‌ ಬೆಂಗಳೂರು ಡೆವಲಪ್‍ಮೆಂಟ್ ಸೆಂಟರ್, ಹೈಸ್ಕೂಲ್ ವಿದ್ಯಾರ್ಥಿಗಾಗಿ ಆಯೋಜಿಸುವ ವಾರ್ಷಿಕ ಮಾಹಿತಿ ತಂತ್ರಜ್ಞಾನ ತರಬೇತಿ ಕಾರ್ಯಕ್ರಮ ‘ಸ್ಪಾರ್ಕ್ ಕ್ಯಾಚ್ ದೆಮ್ ಯಂಗ್’ನ 22ನೇ ಆವೃತ್ತಿಯು ಇತ್ತೀಚೆಗೆ ಯಶಸ್ವಿಯಾಗಿ ಕೊನೆಗೊಂಡಿತು.

ಬೆಂಗಳೂರಿನ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ 8 ಹಾಗೂ 9ನೇ ತರಗತಿಯ ಸುಮಾರು 60 ಮಕ್ಕಳು ಈ ಎರಡು ವಾರದ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕ್ಲೌಡ್, ಕೃತಕ ಬುದ್ಧಿಮತ್ತೆ (ಎಐ), ಬಿಗ್ ಡೇಟಾ, ಐಒಟಿ, ಬ್ಲಾಕ್‍ಚೈನ್‍ನಂಥ ಡಿಜಿಟಲ್ ತಂತ್ರಜ್ಞಾನದ ಕುರಿತು ಮಕ್ಕಳಿಗೆ ತರಬೇತಿ ನೀಡಲಾಯಿತು. ಈ ಬಾರಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಶಾಲೆಯ ಸಹಾಯಕ ಸಿಬ್ಬಂದಿಗೂ ಕಲಿಕೆಯ ಅವಕಾಶ
ವಿಸ್ತರಿಸಲಾಗಿತ್ತು.

ತರಬೇತಿಗಾಗಿ 200ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಸಾಮಾನ್ಯ ವಿಜ್ಞಾನ ಹಾಗೂ ಗಣಿತ ಪರೀಕ್ಷೆಗಳನ್ನು ನಡೆಸುವ ಮೂಲಕ ಅಂತಿಮವಾಗಿ 60 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು.

ಅನುಭವಿಗಳ ಮಾರ್ಗದರ್ಶನ: ತಲಾ 10 ಮಕ್ಕಳ ಆರು ತಂಡವನ್ನು ರಚಿಸಿ ಅದಕ್ಕೊಬ್ಬ ಮಾರ್ಗದರ್ಶಕರನ್ನು ನೇಮಿಸಲಾಗಿತ್ತು. ಇನ್ಫೊಸಿಸ್‌ನಲ್ಲಿ ತರಬೇತಿ ಪಡೆದು ಅನುಭವ ಹೊಂದಿರುವ ಹಾಗೂ ಇನ್ಫೊಸಿಸ್‌ ಉದ್ಯೋಗಿಗಳು ವಿದ್ಯಾರ್ಥಿಗಳಿಗೆ ತಮ್ಮ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡಲು ಮಾರ್ಗದರ್ಶನ ನೀಡಿದರು.

ಮೊದಲ ವಾರದಲ್ಲಿ ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನ ಜತೆಗೆ ಸಂವಹನ ಹಾಗೂ ಕೌಶಲ ಅಭಿವೃದ್ಧಿ ಕುರಿತು ಮಾಹಿತಿ ನೀಡಲಾಯಿತು. ಎರಡನೇ ವಾರದಲ್ಲಿ ಮಾರ್ಗದರ್ಶಕರ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರಾಜೆಕ್ಟ್ ಮಾಡಿಸಲಾಯಿತು. ಕ್ರಿಯೇಟಿವ್ ಕಂಪ್ಯೂಟಿಂಗ್, ಐಒಟಿ, ಬ್ಲಾಕ್ ಚೈನ್, ಚಾಟ್‍ಬೋಟ್ಸ್ ಪ್ರಾಜೆಕ್ಟ್ಸ್‌ಗಳನ್ನು ನೀಡಿ ನೈಜ ಜೀವನದ ಸವಾಲುಗಳಿಗೆ ಕಲಿಕೆಯನ್ನು ಅನ್ವಯಿಸುವುದನ್ನು ತಿಳಿಸಿ ಕೊಡಲಾಯಿತು.

ಎರಡು ದಶಕಗಳಿಂದ ನಡೆಯುತ್ತಿರುವ ‘ಸ್ಪಾರ್ಕ್ ಕ್ಯಾಚ್ ದೆಮ್ ಯಂಗ್’ ತರಬೇತಿ ಕಾರ್ಯಕ್ರಮವು, ಯುವ ಮನಸ್ಸುಗಳು ಹೊಸ ತಂತ್ರಜ್ಞಾನವನ್ನು  ದೈನಂದಿನ ಬದುಕಿನಲ್ಲಿ ಹಾಗೂ ವ್ಯವಹಾರದಲ್ಲಿ ಅಳವಡಿಸಿಕೊಳ್ಳುವಂತೆ ಮಾಡುವ ಉದ್ದೇಶ ಹೊಂದಿದೆ.

ವಿದ್ಯಾರ್ಥಿಗಳು ಕಂಪ್ಯೂಟರ್ ಸೈನ್ಸ್ ಹಾಗೂ ಮಾಹಿತಿ ತಂತ್ರಜ್ಞಾನದಲ್ಲಿ ಹೆಚ್ಚು ಆಸಕ್ತಿ ಹೊಂದುವಂತೆ ಉತ್ತೇಜಿಸಲಿದೆ.

ಈ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು  ಅಂತರ್ಜಾಲ, ಸಾಫ್ಟ್‌ವೇರ್ ಅಭಿವೃದ್ಧಿ ಹಾಗೂ ವ್ಯವಹಾರದಲ್ಲಿ ಕಂಪ್ಯೂಟರ್‍ನ ಬಳಕೆಯ ಕುರಿತು ಹೆಚ್ಚು ತಿಳಿವಳಿಕೆ ಹೊಂದಿರುತ್ತಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !