ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಲೊನಿಸ್‌ ಜತೆ ಇನ್ಫೊಸಿಸ್‌ ಪಾಲುದಾರಿಕೆ

ಐಬಿಎಂ ಜತೆ ವಿಪ್ರೊ ಒಪ್ಪಂದ
Last Updated 8 ಜೂನ್ 2020, 11:23 IST
ಅಕ್ಷರ ಗಾತ್ರ

ಬೆಂಗಳೂರು: ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದೈತ್ಯ ಕಂಪನಿ ಇನ್ಫೊಸಿಸ್‌, ಕೃತಕ ಬುದ್ಧಿಮತ್ತೆ ವಲಯದಲ್ಲಿ ಮುಂಚೂಣಿಯಲ್ಲಿ ಇರುವ ಸೆಲೊನಿಸ್‌ ಜತೆ ಒಪ್ಪಂದ ಮಾಡಿಕೊಂಡಿದೆ.

ಕಂಪನಿಯ ಉದ್ಯಮ ಗ್ರಾಹಕರ ಡಿಜಿಟಲ್‌ ಅಗತ್ಯಗಳನ್ನು ಒದಗಿಸಲು ಈ ಪಾಲುದಾರಿಕೆಯು ಎರಡೂ ಕಂಪನಿಗಳಿಗೆ ನೆರವಾಗಲಿದೆ.

ಉದ್ಯಮದ ಸಂಪನ್ಮೂಲವನ್ನು ಯೋಜಿತ ರೀತಿಯಲ್ಲಿ ನಿರ್ವಹಿಸುವ ಸಾಫ್ಟ್‌ವೇರ್‌ (ಇಆರ್‌ಪಿ) ಆಧುನೀಕರಣ ಮತ್ತು ವಹಿವಾಟಿನ ಗರಿಷ್ಠ ಸದ್ಬಳಕೆಯೂ ಇದರಿಂದ ಸಾಧ್ಯವಾಗಲಿದೆ.

ದೀರ್ಘಾವಧಿ ಯೋಜನೆಗಳಲ್ಲಿಉಳಿತಾಯ, ತಂತ್ರಜ್ಞಾನ ಸವಾಲುಗಳ ನಿರ್ವಹಣೆ ಮತ್ತು ಡಿಜಿಟಲ್ ಬದಲಾವಣೆಗೆ ಎದುರಾಗುವ ಸವಾಲುಗಳನ್ನು ನಿರ್ವಹಿಸಲು ಈ ಪಾಲುದಾರಿಕೆ ನೆರವಾಗಲಿದೆ ಎಂದು ಇನ್ಫೊಸಿಸ್‌ ತಿಳಿಸಿದೆ.

ವಿಪ್ರೊ, ಐಬಿಎಂ ಸಹಯೋಗ: ಐಬಿಎಂ ಜತೆ ಪಾಲುದಾರಿಕೆ ಮಾಡಿಕೊಂಡಿರುವುದಾಗಿ ವಿಪ್ರೊ ತಿಳಿಸಿದೆ.

ಐ.ಟಿ ಉದ್ಯಮದ ಸೂಕ್ಷ್ಮ ಸ್ವರೂಪದ ಅಪ್ಲಿಕೇಷನ್ಸ್‌ ಮತ್ತು ಕಾರ್ಯ ಬಾಹುಳ್ಯವನ್ನು ಸಾರ್ವಜನಿಕ ಇಲ್ಲವೆ ಖಾಸಗಿ ಕ್ಲೌಡ್‌ ಮೂಲಕ ಅಥವಾ ಕಂಪನಿಗಳ ಕಚೇರಿಗಳಲ್ಲಿ ಸಮರ್ಪಕವಾಗಿ ನಿರ್ವಹಿಸಲು ಈ ಸಹಯೋಗ ನೆರವಾಗಲಿದೆ ಎಂದು ಕಂಪನಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT