ಬೆಂಗಳೂರು: ಮಾಹಿತಿ ತಂತ್ರಜ್ಞಾನ ವಲಯದ ಮುಂಚೂಣಿ ಕಂಪನಿ ಇನ್ಫೊಸಿಸ್, ಪಂಜಾಬ್ನ ಮೊಹಾಲಿಯಲ್ಲಿರುವ ತನ್ನ ಅಭಿವೃದ್ಧಿ ಕೇಂದ್ರದ ವಿಸ್ತರಣೆಗೆ ಭೂಮಿ ಪೂಜೆ ನೆರವೇರಿಸಿದೆ.

ಮೊಹಾಲಿಯಲ್ಲಿನ ಕೇಂದ್ರದಲ್ಲಿ ಈಗ ಅಂದಾಜು 1 ಸಾವಿರ ಉದ್ಯೋಗಿಗಳಿದ್ದಾರೆ. ಬ್ಯಾಂಕಿಂಗ್, ಹಣಕಾಸು ಸೇವೆಗಳು, ವಿಮೆ ಸೇರಿದಂತೆ ವಿವಿಧ ಕ್ಷೇತ್ರಗಳ ಗ್ರಾಹಕರಿಗೆ ಸುಧಾರಿತ ಡಿಜಿಟಲ್ ಸೇವೆಗಳನ್ನು ಕಂಪನಿ ಇಲ್ಲಿಂದ ಒದಗಿಸುತ್ತಿದೆ.

ವಿಸ್ತರಣೆ ಆಗಲಿರುವ ಕ್ಯಾಂಪಸ್ 3.50 ಲಕ್ಷ ಚದರ ಅಡಿಯಷ್ಟು ಇರಲಿದೆ. ಇಲ್ಲಿ ಅಂದಾಜು 3 ಸಾವಿರ ಉದ್ಯೋಗಿಗಳು ಕಾರ್ಯನಿರ್ವಹಿಸಬಹುದಾಗಿದೆ. ಈ ಅಭಿವೃದ್ಧಿ ಕೇಂದ್ರದ ವಿಸ್ತರಣೆಯಿಂದ ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಗ್ರಾಹಕರ ಬೇಡಿಕೆಗಳನ್ನು ಪೂರೈಸಬಹುದಾಗಿದೆ ಎಂದು ಕಂಪನಿ ತಿಳಿಸಿದೆ.

‘ಮೊಹಾಲಿಯಲ್ಲಿರುವ ಇನ್ಫೊಸಿಸ್ನ ಅಭಿವೃದ್ಧಿ ಕೇಂದ್ರದ ವಿಸ್ತರಣೆಯು, ತಂತ್ರಜ್ಞಾನ ಮತ್ತು ನಾವೀನ್ಯತೆಯ ಉದಯೋನ್ಮುಖ ಕೇಂದ್ರವಾಗಿ ಪಂಜಾಬ್ನ ಸ್ಥಾನವನ್ನು ಸದೃಢಗೊಳಿಸಲಿದೆ. ಅಲ್ಲದೆ, ಪಂಜಾಬ್ ಮತ್ತು ನೆರೆಯ ರಾಜ್ಯಗಳ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ’ ಎಂದು ಪಂಜಾಬ್ನ ಮುಖ್ಯಮಂತ್ರಿ ಎಸ್. ಭಗವಂತ್ ಸಿಂಗ್ ಮಾನ್ ಹೇಳಿದ್ದಾರೆ.

ಭೂಮಿಪೂಜೆ ಕಾರ್ಯಕ್ರಮದಲ್ಲಿ ಪಂಜಾಬ್ನ ಇಂಧನ ಸಚಿವ ಸಂಜೀವ್ ಅರೋರ, ಇನ್ಫೊಸಿಸ್ನ ಮುಖ್ಯ ಹಣಕಾಸು ಅಧಿಕಾರಿ ಜಯೇಶ್ ಸಂಘ್ರಾಜ್ಕಾ, ಕಾರ್ಯಕಾರಿ ಉಪಾಧ್ಯಕ್ಷ ಸುನೀಲ್ ಕುಮಾರ್ ಧಾರೇಶ್ವರ, ಹಿರಿಯ ಉಪಾಧ್ಯಕ್ಷ ನೀಲಾದ್ರಿ ಪ್ರಸಾದ್ ಮಿಶ್ರಾ ಹಾಜರಿದ್ದರು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.