ಇನ್ಫೊಸಿಸ್‌ಗೆ ಹೊಸ ಸಿಎಫ್‌ಒ

7

ಇನ್ಫೊಸಿಸ್‌ಗೆ ಹೊಸ ಸಿಎಫ್‌ಒ

Published:
Updated:

ನವದೆಹಲಿ: ಜಯೇಶ್‌ ಸಂಘರಜ್ಕಾ ಅವರು ಇನ್ಫೊಸಿಸ್‌ನ ಮುಖ್ಯ ಹಣಕಾಸು ಅಧಿಕಾರಿಯಾಗಿ (ಸಿಎಫ್‌ಒ) ಮಧ್ಯಂತರ ಅವಧಿಗೆ ನೇಮಕವಾಗಿದ್ದಾರೆ.

ಎಂ.ಡಿ. ರಂಗನಾಥ್ ಅವರ ಅಧಿಕಾರಾವಧಿ ಶುಕ್ರವಾರ ಅಂತ್ಯವಾಗಲಿದೆ. ಹೀಗಾಗಿ ಶನಿವಾರದಿಂದ ಜಾರಿಗೆ ಬರುವಂತೆ ಈ ನೇಮಕ ಮಾಡಲಾಗಿದೆ ಎಂದು ಸಂಸ್ಥೆಯು ಷೇರುಪೇಟೆಗೆ ತಿಳಿಸಿದೆ.

ಜಯೇಶ್‌ ಅವರು ಸದ್ಯ ಇನ್ಫೊಸಿಸ್‌ನಲ್ಲಿ ಕಾರ್ಯನಿರ್ವಾಹಕ ಉಪಾಧ್ಯಕ್ಷ ಹಾಗೂ ಉಪ ಮುಖ್ಯ ಹಣಕಾಸು ಅಧಿಕಾರಿ (ಡೆಪ್ಯುಟಿ ಸಿಎಫ್‌ಒ) ಆಗಿದ್ದಾರೆ. ಪೂರ್ಣಾವಧಿಯ ಸಿಎಫ್‌ಒ ನೇಮಕ ಮಾಡಲು ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 1

    Angry

Comments:

0 comments

Write the first review for this !