ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ಫೊಸಿಸ್: ಲಾಭದ ಪ್ರಮಾಣ ಶೇ 11.9ರಷ್ಟು ಹೆಚ್ಚಳ

Last Updated 13 ಅಕ್ಟೋಬರ್ 2021, 16:50 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಎರಡನೆಯ ಅತಿದೊಡ್ಡ ಐ.ಟಿ. ಸೇವಾ ಕಂಪನಿ ಇನ್ಫೊಸಿಸ್‌ನ ಎರಡನೆಯ ತ್ರೈಮಾಸಿಕದ ಲಾಭದ ಪ್ರಮಾಣದಲ್ಲಿ ಶೇಕಡ 11.9ರಷ್ಟು ಹೆಚ್ಚಳವಾಗಿದೆ. ಸೆಪ್ಟೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯು ₹ 5,421 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಕಂಪನಿಯು ₹ 4,845 ಕೋಟಿ ಲಾಭ ಗಳಿಸಿತ್ತು.

ಕಂಪನಿಯು 2021–22ನೇ ಸಾಲಿಗೆ ಷೇರುದಾರರಿಗೆ ಪ್ರತಿ ಷೇರಿಗೆ ₹ 15ರಷ್ಟು ಮಧ್ಯಂತರ ಡಿವಿಡೆಂಡ್ ಘೋಷಿಸಿದೆ. ಕಂಪನಿಯು ಒಟ್ಟು ಆದಾಯವು ₹ 29,602 ಕೋಟಿಗೆ ತಲುಪಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು 45 ಸಾವಿರ ಜನ ಹೊಸಬರನ್ನು ನೇಮಕ ಮಾಡಿಕೊಳ್ಳುವುದಾಗಿ ಕಂಪನಿ ಹೇಳಿದೆ.

ತಾನು ಅಭಿವೃದ್ಧಿಪಡಿಸಿರುವ ಹೊಸ ಆದಾಯ ತೆರಿಗೆ ಪೋರ್ಟಲ್ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಕಂಪನಿಯು, ‘ಪೋರ್ಟಲ್‌ನಲ್ಲಿ ಸ್ಥಿರವಾದ ಪ್ರಗತಿ ಕಂಡುಬಂದಿದೆ’ ಎಂದು ಹೇಳಿದೆ. ಆದಾಯ ತೆರಿಗೆ ವಿವರ ಸಲ್ಲಿಸಲು ಹೊಸದಾಗಿ ಅಭಿವೃದ್ಧಿಪಡಿಸಿರುವ ಪೋರ್ಟಲ್‌ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಬಂದಿವೆ.

‘ಮಂಗಳವಾರದ ವೇಳೆಗೆ ಹೊಸ ಪೋರ್ಟಲ್‌ ಮೂಲಕ 1.9 ಕೋಟಿಗಿಂತ ಹೆಚ್ಚಿನ ಐ.ಟಿ. ವಿವರಗಳು ಸಲ್ಲಿಕೆಯಾಗಿವೆ. ಐ.ಟಿ. ವಿವರಕ್ಕೆ ಸಂಬಂಧಿಸಿದ ಒಂದರಿಂದ ಏಳರವರೆಗಿನ ಫಾರ್ಮ್‌ಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿವೆ. ಶಾಸನನಾತ್ಮಕ ಫಾರ್ಮ್‌ಗಳ ಪೈಕಿ ಹೆಚ್ಚಿನವು ಪೋರ್ಟಲ್‌ ಮೂಲಕ ಲಭ್ಯವಿವೆ’ ಎಂದು ಇನ್ಫೊಸಿಸ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸಲೀಲ್ ಪಾರೇಖ್ ಅವರು ಹೇಳಿದ್ದಾರೆ.

‘ಬಳಕೆದಾರರು 18 ಕೋಟಿಗೂ ಹೆಚ್ಚು ಬಾರಿ ಈ ಪೋರ್ಟಲ್‌ನ ಮೂಲಕ ಲಾಗಿನ್ ಆಗಿದ್ದಾರೆ. ಪ್ರತಿದಿನ ಎರಡು ಲಕ್ಷದಿಂದ ಮೂರು ಲಕ್ಷದಷ್ಟು ವಿವರಗಳನ್ನು ಸಲ್ಲಿಸಲಾಗುತ್ತಿದೆ’ ಎಂದು ಪಾರೇಖ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT