ಇನ್ಫೊಸಿಸ್‌: ₹ 4,078 ಕೋಟಿ ಲಾಭ

ಶನಿವಾರ, ಏಪ್ರಿಲ್ 20, 2019
27 °C

ಇನ್ಫೊಸಿಸ್‌: ₹ 4,078 ಕೋಟಿ ಲಾಭ

Published:
Updated:
Prajavani

ಬೆಂಗಳೂರು: ದೇಶದ ಎರಡನೆ ಅತಿದೊಡ್ಡ ಸಾಫ್ಟ್‌ವೇರ್ ಸೇವಾ ಸಂಸ್ಥೆಯಾಗಿರುವ ಇನ್ಫೊಸಿಸ್‌, 2018–19ನೆ ಹಣಕಾಸು ವರ್ಷದ ಮಾರ್ಚ್ ತಿಂಗಳ ತ್ರೈಮಾಸಿಕದಲ್ಲಿ ₹ 4,078 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ.

ವರ್ಷದ ಹಿಂದಿನ ₹ 3,690 ಕೋಟಿಗೆ ಹೋಲಿಸಿದರೆ, ಇದು ಶೇ  10.5ರಷ್ಟು ಹೆಚ್ಚಳ ದಾಖಲಿಸಿದೆ. ಸಂಸ್ಥೆಯ ವರಮಾನವು ₹ 21,539 ಕೋಟಿಗಳಷ್ಟಾಗಿದೆ. ವರ್ಷದ ಹಿಂದಿನ ₹ 18,083 ಕೋಟಿಗೆ ಹೋಲಿಸಿದರೆ ಶೇ 19.1ರಷ್ಟು ವೃದ್ಧಿ ಕಂಡಿದೆ.

2018–19ನೆ ಹಣಕಾಸು ವರ್ಷದಲ್ಲಿ ಸಂಸ್ಥೆಯ ನಿವ್ವಳ ಲಾಭವು ಶೇ 3.9ರಷ್ಟು ಕಡಿಮೆಯಾಗಿ ₹ 15,410 ಕೋಟಿಗೆ ತಲುಪಿದೆ. ವರಮಾನವು ಶೇ 17.2ರಷ್ಟು ಹೆಚ್ಚಳವಾಗಿ ₹ 82,675 ಕೋಟಿಗೆ ಏರಿಕೆಯಾಗಿದೆ.

2019-20ನೆ ಹಣಕಾಸು ವರ್ಷದಲ್ಲಿ ಸಂಸ್ಥೆಯ ವರಮಾನವು ಶೇ 7.5 ರಿಂದ ಶೇ 9.5ರವರೆಗೆ ಏರಿಕೆಯಾಗಲಿದೆ ಎಂದು ಸಂಸ್ಥೆ ನಿರೀಕ್ಷಿಸಿದೆ.

 

ಪ್ರತಿ ಷೇರಿಗೆ 
₹ 10.50 ಲಾಭಾಂಶ

2018–19ನೆ ಹಣಕಾಸು ವರ್ಷಕ್ಕೆ ಪ್ರತಿ ಷೇರಿಗೆ ₹ 10.50 ಅಂತಿಮ ಲಾಭಾಂಶ ನೀಡಲು ಸಂಸ್ಥೆಯ ನಿರ್ದೇಶಕ ಮಂಡಳಿಯು ಶಿಫಾರಸು ಮಾಡಿದೆ.

ಇದಕ್ಕೂ ಮೊದಲು ಪ್ರಕಟಿಸಿದ್ದ ಪ್ರತಿ ಷೇರಿನ ₹ 7 ಮಧ್ಯಂತರ ಲಾಭಾಂಶ ಸೇರಿದರೆ, ಈ ಹಣಕಾಸು ವರ್ಷದ ಒಟ್ಟಾರೆ ಲಾಭಾಂಶವು ಪ್ರತಿ ಷೇರಿಗೆ ₹ 17.50ರಷ್ಟಾಗುತ್ತದೆ.

‘ನಮ್ಮ ಯೋಜಿತ ಹೂಡಿಕೆಗಳು ಪ್ರತಿಫಲ ನೀಡಲು ಆರಂಭಿಸಿವೆ. ಮುಂಬರುವ ದಿನಗಳಲ್ಲಿ ನಾವು ನಮ್ಮ ವಹಿವಾಟಿನಲ್ಲಿ ದಕ್ಷತೆ ಹೆಚ್ಚಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ’ ಎಂದು ಸಂಸ್ಥೆಯ ಸಿಇಒ ಸಲೀಲ್‌ ಪಾರೇಖ್‌ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

’ವರಮಾನ ಹೆಚ್ಚಳ, ಡಿಜಿಟಲ್‌ ವಹಿವಾಟು, ದೊಡ್ಡ ಮೊತ್ತದ ಒಪ್ಪಂದಗಳು, ಗ್ರಾಹಕರ ತೃಪ್ತಿ ಮತ್ತು ನಿಷ್ಠೆಗೆ ಸಂಬಂಧಿಸಿದಂತೆ ಸಂಸ್ಥೆಯ ಹಣಕಾಸು ಫಲಿತಾಂಶವು ಉತ್ತೇಜನಕಾರಿಯಾಗಿದೆ’ ಎಂದೂ ಅವರು ಪ್ರತಿಪಾದಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !